• Tag results for ಕ್ರೀಡಾಂಗಣ

ಜೈಪುರದಲ್ಲಿ ವಿಶ್ವದ ಮೂರನೇ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ!

ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ​​(ಆರ್‌ಸಿಎ) ಜೈಪುರದಲ್ಲಿ ನಿರ್ಮಿಸಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ವಿಶ್ವದ ಮೂರನೇ ಮತ್ತು ದೇಶದ ಎರಡನೇ ಅತಿದೊಡ್ಡ ಕ್ರೀಡಾಂಗಣವಾಗಲಿದೆ.

published on : 4th July 2020

ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್‌ ಸ್ಫೋಟ ಪ್ರಕರಣ, ಇಬ್ಬರು ಅಪರಾಧಿಗಳಿಗೆ 8 ವರ್ಷ ಜೈಲುಶಿಕ್ಷೆ

ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತಪ್ಪನ್ನು ಒಪ್ಪಿಕೊಂಡಿದ್ದ ಇಬ್ಬರು ಆರೋಪಿಗಳಿಗೆ  8 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಎನ್​ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ. 

published on : 30th June 2020

ಕೊರೋನಾ ಸೋಂಕು ವ್ಯಾಪಕವಾದರೆ ಕಲ್ಯಾಣ ಮಂಟಪ, ಕ್ರೀಡಾಂಗಣಗಳಲ್ಲಿ ಆಸ್ಪತ್ರೆಗಳ ನಿರ್ಮಾಣ: ಬಿಬಿಎಂಪಿ

ಬೆಂಗಳೂರಿನಲ್ಲಿ ಕೊರೋನಾ ಸೋಂಕು ವ್ಯಾಪಿಸಿದಲ್ಲಿ ಒಳಾಂಗಣ ಕ್ರೀಡಾಂಗಣ, ಕಲ್ಯಾಣ ಮಂಟಪ, ವಸ್ತುಪ್ರದರ್ಶನ ಕೇಂದ್ರಗಳನ್ನೇ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.

published on : 13th June 2020

ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ವಧು ಇಲ್ಲದ ವಿವಾಹದಂತೆ: ಶೋಯೆಬ್ ಅಖ್ತರ್

ಖಾಲಿಯಾದ ಕ್ರೀಡಾಂಗಣದಲ್ಲಿ  ಕ್ರಿಕೆಟ್ ಆಡುವುದು ವಧುವಿಲ್ಲದೆಯೇ ವಿವಾಹವಾದಂತೆ ಇರಲಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್  ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಯಿಂದಾಗಿ ಕ್ರೀಡಾಳುಗಳಿಗೆ ಉತ್ಸಾಹ ಇರುವುದಿಲ್ಲ ಅಲ್ಲದೆ ಜಾಹೀರಾತು ಮಾರುಕಟ್ತೆ ಸೇರಿ ಇತರೆ ವ್ಯವಹಾರಕ್ಕೆ ಸಹ ಕಷ್ತಕರವಾಗಲಿದೆ ಎಂದು ಅವರು ಹೇಳಿದ್

published on : 18th May 2020

ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್‌ ಆಯೋಜನೆ ಸಾಧ್ಯ: ಸುನಿಲ್ ಗವಾಸ್ಕರ್

ಕೊರೋನಾ ವೈರಸ್‌ ಹರಡದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ಶುಕ್ರವಾರ ಐಪಿಎಲ್ ಪಂದ್ಯಾವಳಿಯನ್ನು ಮುಂದೂಡಲಾಗಿದ್ದು, ಇದೇ ರೀತಿ ವಿಶ್ವದಾದ್ಯಂತ ವಿವಿಧ ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ ಮತ್ತು ಕೆಲ ಕ್ರೀಡಾ ಚಟುವಟಿಕೆಗಳನ್ನು ರದ್ದು ಪಡಿಸಲಾಗಿದೆ. 

published on : 13th March 2020

ಡೊನಾಲ್ಡ್ ಟ್ರಂಪ್ ಭೇಟಿ: ಜನಜಂಗುಳಿಯಿಂದ ತುಂಬಿರುವ ಮೊಟೆರಾ ಕ್ರೀಡಾಂಗಣ! ವಿಡಿಯೋ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಇಲ್ಲಿನ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣ ಜನ ಜಂಗುಳಿಯಿಂದ ತುಂಬಿದೆ.  

published on : 24th February 2020

ಟ್ರಂಪ್ ಉದ್ಘಾಟಿಸಲಿರುವ ಜಗತ್ತಿನ ಅತೀ ದೊಡ್ಡ ಮೊಟೆರಾ ಕ್ರಿಕೆಟ್ ಕ್ರೀಡಾಂಗಣ ಆಗಸದಿಂದ ಕಾಣಿಸಿದ್ದು ಹೀಗೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದು ಈ ವೇಳೆ ಗುಜರಾತ್ ನ ಅಹಮದಾಬಾದ್ ನಲ್ಲಿರುವ ಜಗತ್ತಿನ ಅತೀ ದೊಡ್ಡ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. 

published on : 19th February 2020

ಗದಗಕ್ಕೆ ಸಿಕ್ಕಿತು ವಿಶ್ವದರ್ಜೆ ಫುಟ್ಬಾಲ್ ಕ್ರೀಡಾಂಗಣ! 

ಗದಗದ ದಶಕಗಳ ಕನಸು ನನಸಾಗಿದೆ. ಫುಟ್ಬಾಲ್ ಕಲಿಯಬೇಕೆಂಬ ನೂರಾರು ಯುವ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಫುಟ್ಬಾಲ್ ಕ್ರೀಡಾಂಗಣ ದೊರೆತಿದೆ. 

published on : 19th January 2020

ಟೀಂ ಇಂಡಿಯಾ-ಆಸ್ಟ್ರೇಲಿಯಾ ಪಂದ್ಯ: ವಾಂಖೆಡೆ ಕ್ರೀಡಾಂಗಣದಲ್ಲಿ ಸಿಎಎ-ಎನ್‌ಆರ್‌ಸಿ ಪ್ರತಿಭಟನೆ ಬಿಸಿ, ಫೋಟೋ ವೈರಲ್!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಮಂಗಳವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ...

published on : 15th January 2020

ಮೂರನೇ ಪಂದ್ಯ ನಾಳೆ: ವರ್ಷದ ಮೊದಲ ಟಿ20 ಸರಣಿ ಗೆಲ್ಲುವತ್ತ ಟೀಂ ಇಂಡಿಯಾ ಚಿತ್ತ

ಎರಡನೇ ಪಂದ್ಯದ ಗೆಲುವಿನ ಹಮ್ಮಸ್ಸಿನಲ್ಲಿರುವ ಭಾರತ ತಂಡ ನಾಳೆ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಹಣಾಹಣಿಯಲ್ಲಿ ಶ್ರೀಲಂಕಾ ವಿರುದ್ಧ ಜಯಿಸಿ ವರ್ಷದ ಮೊದಲ ಟಿ20 ಸರಣಿ ವಶಪಡಿಸಿಕೊಳ್ಳವ ತುಡಿತದಲ್ಲಿದೆ.

published on : 9th January 2020

ರನ್ ಚೇಸಿಂಗ್ ನಲ್ಲೂ ಟೀಂ ಇಂಡಿಯಾ ವಿಶ್ವ ದಾಖಲೆ, ಇಷ್ಟಕ್ಕೂ ಆ ದಾಖಲೆ ಯಾವುದು?

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ 4 ವಿಕೆಟ್ ಗಳ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡ ಭಾರತ ತಂಡ ಈ ಗೆಲುವಿನ ಮೂಲಕ ಮತ್ತೊಂದು ವಿಶ್ವ ದಾಖಲೆ ನಿರ್ಮಾಣ ಮಾಡಿದೆ.

published on : 23rd December 2019

ವಿಂಡೀಸ್ ವಿರುದ್ಧ ಸತತ 10ನೇ ಸರಣಿ ಜಯ; ದಾಖಲೆ ಬರೆದ ಟೀಂ ಇಂಡಿಯಾ

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಜಯಭೇರಿ ಭಾರಿಸುವ ಮೂಲಕ ಟೀಂ ಇಂಡಿಯಾ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.

published on : 23rd December 2019

3ನೇ ಏಕದಿನ: ವಿಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

published on : 22nd December 2019
1 2 >