ಬೆಂಗಳೂರಿನಲ್ಲಿ ತಲೆಯೆತ್ತಲಿವೆ ಮತ್ತೆ 5 ಕ್ರೀಡಾಂಗಣಗಳು

ಬೆಂಗಳೂರು ನಗರದಲ್ಲಿ ಈಗಿರುವ ಕ್ರೀಡಾಂಗಳ ಮೇಲಿನ ಹೊರೆಯನ್ನು ...
ಕಂಠೀರವ ಸ್ಟುಡಿಯೊ
ಕಂಠೀರವ ಸ್ಟುಡಿಯೊ

ಬೆಂಗಳೂರು: ಬೆಂಗಳೂರು ನಗರದಲ್ಲಿ ಈಗಿರುವ ಕ್ರೀಡಾಂಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಇನ್ನೂ ಐದು ಕ್ರೀಡಾಂಗಣಗಳು ಬರಲಿವೆ. ಇದರಿಂದ ಕ್ರೀಡಾಂಗಣಗಳ ಸಂಖ್ಯೆ ಬೆಂಗಳೂರಿನಲ್ಲಿ 13ಕ್ಕೇರಲಿದೆ. ಹೊಸ ಸ್ಟೇಡಿಯಂಗಳು ದೇವನಹಳ್ಳಿ, ಗುಂಜೂರು, ಹೆಚ್ ಎಸ್ ಆರ್ ಲೇಔಟ್, ತಾವರಕೆರೆ ಮತ್ತು ಅಂಜನಾಪುರಗಳಲ್ಲಿ ತಲೆಯೆತ್ತಲಿವೆ.

ನಗರದ ಹೃದಯ ಭಾಗದಲ್ಲಿರುವ ಕಂಠೀರವ ಸ್ಟುಡಿಯೊದ ಮೇಲೆ ಅಧಿಕ ಹೊರೆಯಾಗುತ್ತಿದೆ. ಇನ್ನೂ ಹೆಚ್ಚಿನ ಕ್ರೀಡಾ ಚಟುವಟಿಕೆಗಳು ನಡೆಯಬೇಕಾಗಿರುವುದರಿಂದ ಬೆಂಗಳೂರಿನಾದ್ಯಂತ ನಾಲ್ಕು ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ಮೂಲಕ ಕ್ರೀಡಾ ಪ್ರಾಯೋಜಕರು ನಗರದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹೆಚ್ಚಿಸಬಹುದು,ಅಲ್ಲದೆ ಪ್ರಯಾಣ ಅವಧಿ ಕೂಡ ಕಡಿಮೆಯಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್ ಶಿವಶಂಕರ್ ಹೇಳುತ್ತಾರೆ.

ಅಥ್ಲೆಟಿಕ್ ಟ್ರಾಕ್ಸ್, ಜಾವೆಲಿನ್, ಡಿಸ್ಕಸ್, ವಾಲಿಬಾಲ್ ಮತ್ತು ಬಾಸ್ಕೆಟ್ ಬಾಲ್ ಆಡಲು ವ್ಯವಸ್ಥೆಗಳು ಈ ಸ್ಟೇಡಿಯಂಗಳಲ್ಲಿರುತ್ತವೆ. ಪ್ರತಿ ಕ್ರೀಡಾಂಗಣಗಳ ನಿರ್ಮಾಣಕ್ಕೆ 10 ಎಕರೆ ಜಮೀನು ಬೇಕು. ಇತ್ತೀಚಿನ ರಾಜ್ಯ ಬಜೆಟ್ ನಲ್ಲಿ ನಮಗೆ ಹಣ ಸಿಕ್ಕಿದ್ದು, ಸದ್ಯದಲ್ಲಿಯೇ ವಿಸ್ತೃತ ಯೋಜನಾ ವರದಿ ತಯಾರಿಸಿ ಟೆಂಡರ್ ಕರೆಯಲಿದ್ದೇವೆ. ಟೆಂಡರ್ ಅಂತಿಮವಾದ ಕೂಡಲೇ 6 ತಿಂಗಳಿನಿಂದ ಒಂದು ವರ್ಷದಲ್ಲಿ ಕ್ರೀಡಾಂಗಣ ನಿರ್ಮಾಣ ಪೂರ್ಣಗೊಳಿಸಲಿದ್ದೇವೆ ಎನ್ನುತ್ತಾರೆ ಶಿವಶಂಕರ್.

ಅಂಜನಾಪುರ ಕ್ರೀಡಾಂಗಣವನ್ನು ಬಿಬಿಎಂಪಿ ಅಭಿವೃದ್ಧಿಪಡಿಸಲಿದೆ. ಜೆಪಿ ನಗರ ಸಮೀಪ ಅಂಜನಾಪುರದಲ್ಲಿ ನಾವು 35 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿದ್ದೇವೆ. ಅದು ಮುಖ್ಯವಾಗಿ ಕ್ರಿಕೆಟ್ ಗೆ ಮೀಸಲಾಗಿರುವ ಕ್ರೀಡಾಂಗಣ. ಇದು ಸ್ಥಳೀಯ ಯುವ ಜನಾಂಗಕ್ಕೆ ಇದರಿಂದ ಸಹಾಯವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರಿನಲ್ಲಿ ಪ್ರಸ್ತುತ ಚಿನ್ನಸ್ವಾಮಿ ಸ್ಟೇಡಿಯಂ ಮತ್ತು ಆಲೂರು ಸ್ಟೇಡಿಯಂಗಳಿವೆ. ಇದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ಒಳಪಟ್ಟಿದೆ. ಕಂಠೀರವ ಸ್ಟೇಡಿಯಂ ಹಲವು ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ಹಾಕಿ ಸ್ಟೇಡಿಯಂ, ಬೆಂಗಳೂರು ಫುಟ್ ಬಾಲ್ ಸ್ಟೇಡಿಯಂ ಮತ್ತು ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ಕೇಂದ್ರ ವಿದ್ಯಾನಗರವನ್ನು ರಾಜ್ಯ ಕ್ರೀಡಾ ಇಲಾಖೆ ನಿರ್ವಹಣೆ ಮಾಡುತ್ತಿದೆ. ಕಿತ್ತೂರು ರಾಣಿ ಕ್ರೀಡಾಂಗಣದ ಮಾಲಿಕತ್ವ ಬಿಬಿಎಂಪಿ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com