ಸೆಪ್ಟೆಂಬರ್ 3 ರಂದು ಟರ್ಫ ಹಾಕಿ ಕ್ರೀಡಾಂಗಣ ಲೋಕಾರ್ಪಣೆ: ಸಚಿವ ಎಚ್.​ಕೆ ಪಾಟೀಲ್

ಗದಗ-ಬೆಟಗೇರಿ ನಗರದ ಹೃದಯ ಭಾಗದಲ್ಲಿ ಅಂದಾಜು 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣ ಸೆಪ್ಟೆಂಬರ 3 ರಂದು ಮುಂಜಾನೆ 9 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಚಿವ ಎಚ್.​ಕೆ ಪಾಟೀಲ್ ಅವರು ಸೋಮವಾರ ಹೇಳಿದ್ದಾರೆ.
ಸಚಿವ ಎಚ್.​ಕೆ ಪಾಟೀಲ್
ಸಚಿವ ಎಚ್.​ಕೆ ಪಾಟೀಲ್

ಗದಗ: ಗದಗ-ಬೆಟಗೇರಿ ನಗರದ ಹೃದಯ ಭಾಗದಲ್ಲಿ ಅಂದಾಜು 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣ ಸೆಪ್ಟೆಂಬರ 3 ರಂದು ಮುಂಜಾನೆ 9 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಚಿವ ಎಚ್.​ಕೆ ಪಾಟೀಲ್ ಅವರು ಸೋಮವಾರ ಹೇಳಿದ್ದಾರೆ.

ಗದಗ ನಗರದ ಬೆಟಗೇರಿಯ ಗಾಂಧೀ ನಗರದಲ್ಲಿ ನಿರ್ಮಾಣವಾದಂತಹ ಸುಸಜ್ಜಿತ ಹಾಕಿ ಕ್ರೀಡಾಂಗಣ ವೀಕ್ಷಣೆ ಬಳಿಕ ಸಚಿವರು ಮಾತನಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗದಗ-ಬೆಟಗೇರಿ ನಗರದ ಹೃದಯ ಭಾಗದಲ್ಲಿ ಅಂದಾಜು 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದಂತಹ ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣವು ಬರುವ ಸೆಪ್ಟೆಂಬರ 3 ರಂದು ಮುಂಜಾನೆ 9 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪನವರು ಸುಸಜ್ಜಿತ ಹಾಕಿ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವರಾದ ನಾಗೇಂದ್ರ ಅವರು ಆಗಮಿಸಲಿದ್ದಾರೆ ಎಂದು ಹೇಳಿದರು.

ಅದೇ ದಿನ ಮುಂಜಾನೆ 10 ಗಂಟೆಗೆ ಹಾಕಿ ಕ್ರೀಡಾಂಗಣದಲ್ಲಿ ಆರು ತಂಡಗಳು ಎ ಮತ್ತು ಬಿ ಗುಂಪುಗಳಾಗಿ ವಿಂಗಡಿಸಿ ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಮೊದಲ ಗುಂಪಿನಲ್ಲಿ ಕರ್ನಾಟಕ ರಾಜ್ಯ ಪೋಲಿಸ್, ಹುಬ್ಬಳ್ಳಿಯ ಹಾಕಿ ಅಕಾಡೆಮಿ, ಬಿ.ವಾಯ್.ಎ.ಎಸ್ ತಂಡಗಳು ಹಾಗೂ ಮತ್ತೋಂದು ಗುಂಪಿನಲ್ಲಿ ಗದಗ- XI , ಎಸ್.ಡಬ್ಲೂ.ಆರ್. ಹುಬ್ಬಳ್ಳಿ ಹಾಗೂ ಬಿ.ವಾಯ್.ಎ.ಎಸ್. ಬೆಂಗಳೂರು ತಂಡಗಳು ಸೆಣಸಾಡಲಿವೆ ಎಂದು ತಿಳಿಸಿದರು.

ಸುಸಜ್ಜಿತ ಈ ಹಾಕಿ ಕ್ರೀಡಾಂಗಣವು ಉತ್ತರ ಕರ್ನಾಟಕ ಭಾಗದಲ್ಲಿಯೇ ಪ್ರಥಮವಾಗಿದ್ದು, ಪ್ರತಿಭಾವಂತ ಮಕ್ಕಳಿಗೆ ಉತ್ತಮ ವೇದಿಕೆ ಆಗುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಮುನ್ನಡೆಯಲು ಈ ಕ್ರೀಡಾಂಗಣ ಸಹಕಾರಿಯಾಗಲಿದೆ. ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣ ಹೊಂದಿರುವುದು ಗದಗ ಜಿಲ್ಲೆ ಮಾತ್ರ ಎಂಬುದು ಹೆಮ್ಮೆಯ ಸಂಗತಿಯಾಗಿದೆ.

ಕ್ರಿಡಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಂತಹ ಕ್ರೀಡಾಪಟುಗಳಿಗೆ ಹಾಗೂ ತರಬೇತಿದಾರರಿಗೆ ಸನ್ಮಾನಿಸಲಾಗುವುದು. ಇವರುಗಳ ಜೊತೆಗೆ ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣ ನಿರ್ಮಿಸಲು ಅಗತ್ಯದ ಸಲಹೇ ಸೂಚನೆ ಹಾಗೂ ಸಹಕಾರಿ ನೀಡಿದ 5 ಜನರನ್ನು ಸಹ ಗೌರವಿಸಿ ಸನ್ಮಾನಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com