ವಿಶ್ವಕಪ್​ ಹೀರೋಗೆ ಸೂಪರ್ ಗಿಫ್ಟ್​: ಶಮಿ ಕನಸು ನನಸು ಮಾಡಲು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮುಂದು!

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಎದುರಾಳಿಗಳ ವಿಕೆಟ್​ ಉರುಳಿಸುತ್ತಾ ಭಾರತ ತಂಡ ಗೆಲುವಿಗೆ ಕಾಣಿಕೆ ನೀಡುತ್ತಿದ್ದಾರೆ.
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ
Updated on

ಲಕ್ನೋ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ತವರೂರು ಅಮ್ರೋಹಾ ಜಿಲ್ಲೆಯ ಸಹಸ್ಪುರ್ ಅಲಿನಗರದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಎದುರಾಳಿಗಳ ವಿಕೆಟ್​ ಉರುಳಿಸುತ್ತಾ ಭಾರತ ತಂಡ ಗೆಲುವಿಗೆ ಕಾಣಿಕೆ ನೀಡುತ್ತಿದ್ದಾರೆ. ಟೀಂ ಇಂಡಿಯಾ ಸಂಕಷ್ಟದಲ್ಲಿ ಸಿಲುಕಿದ ಸಮಯದಲ್ಲಿ ತಂಡಕ್ಕೆ ಬ್ಯಾಕ್​ ಬೋನ್​ ಆಗಿ ನಿಲ್ಲುತ್ತಾರೆ. ಇದಕ್ಕೆ ತಾಜಾ ಉದಾಹಣೆ ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕಿವೀಸ್ ವಿರುದ್ಧದ ಸೆಮೀಸ್​​ನಲ್ಲಿ ಬರೋಬ್ಬರಿ 7 ವಿಕೆಟ್​ ಕಿತ್ತು ತಮ್ಮ ಬಲವನ್ನು ತೋರಿಸಿದ್ದಾರೆ.

ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವ ಮೊಹಮದ್ ಶಮಿಗೆ ಬಂಪರ್ ಗಿಫ್ಟ್ ನೀಡಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಸಿದ್ಧತೆ ನಡೆಸಿದ್ದಾರೆ. ಶಮಿ ಸ್ವಗ್ರಾಮದಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಈಗಾಗಲೇ ಇದಕ್ಕಾಗಿ ಆ ಗ್ರಾಮದಲ್ಲಿ ಭೂಮಿಯನ್ನು ಗುರುತಿಸಿದ್ದಾರೆ. ಈ ಸಂಬಂಧ ಡೆವಲಫ್​​ಮೆಂಟ್​ ಆಫೀಸರ್​​ ಒಬ್ಬರನ್ನು ಸಹ ಸರ್ಕಾರ ನೇಮಕ ಮಾಡಿದೆ.  ಗ್ರಾಮದಲ್ಲಿರುವ ಜನರ ಸಮಸ್ಯೆಗಳನ್ನು ನಿವಾಸಿರುವ ಕೂಡಲೇ ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸಿಎಂ ಯೋಗಿ ಆದೇಶ ನೀಡಿದ್ದಾರೆ.

ಅಧಿಕಾರಿಗಳು ಶಮಿ ಅವರ ಗ್ರಾಮದಲ್ಲಿರುವ ಜೋಯಾ ಡೆವಲಪ್‌ಮೆಂಟ್ ಬ್ಲಾಕ್‌ಗೆ ಭೇಟಿ ನೀಡಿ ಉದ್ದೇಶಿತ ಕ್ರೀಡಾಂಗಣಕ್ಕಾಗಿ ಭೂಮಿ ಹುಡುಕಿದ್ದಾರೆ. ಶಮಿ ಅವರ ಕುಟುಂಬವು ಗ್ರಾಮದಲ್ಲಿಯೇ ನೆಲೆಸಿದೆ ಎಂದು ಅವರು ಹೇಳಿದರು.

ಮಿನಿ ಸ್ಟೇಡಿಯಂ ಮತ್ತು ಓಪನ್ ಜಿಮ್ ನಿರ್ಮಾಣಕ್ಕೆ ಸಂಬಂಧಿಸಿದ ಕಡತವನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತ್ಯಾಗಿ ಹೇಳಿದರು. ಇದಕ್ಕೂ ಮುನ್ನ ಡಿ.ಎಂ.ರಾಜೇಶ್ ತ್ಯಾಗಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ತಂಡ ಸಾಹಸಪುರ ಅಲಿನಗರಕ್ಕೆ ಆಗಮಿಸಿ ಮಿನಿ ಕ್ರೀಡಾಂಗಣ ಮತ್ತು ಓಪನ್ ಜಿಮ್ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದೆ.

ವಿಶ್ವಕಪ್ ಇತಿಹಾಸದಲ್ಲಿ ಶಮಿ ಟೀಂ ಇಂಡಿಯಾ ಪರ ಅತೀ ಹೆಚ್ಚು ವಿಕೆಟ್​ ಪಡೆದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಇದುವರೆಗೂ 2023ರ ವಿಶ್ವಕಪ್​ನಲ್ಲಿ ಶಮಿ 23 ವಿಕೆಟ್​​ಗಳನ್ನು ಪಡೆದುಕೊಂಡಿದ್ದು, ಒಟ್ಟಾರೆ 51 ವಿಕೆಟ್​ ಗಳನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಜಹೀರ್ ಖಾನ್ 2ನೇ ಸ್ಥಾನದಲ್ಲಿದ್ದಾರೆ.ಶಮಿ ಅವರು ಉತ್ತರ ಪ್ರದೇಶದ ಸಾಹಸಪುರ್ ಗ್ರಾಮದಲ್ಲಿ ಬೆಳೆದಿದ್ದರು. 2023ರ ಜನವರಿ 6ರಂದು ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಆ ಬಳಿಕ ಶಮಿ ಹಿಂದಿರುಗಿ ನೋಡಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com