
ಗಾಜಾ: ಗಾಜಾ ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಸಿದ್ಧವಾಗಿರುವುದಾಗಿ ಎಂದು ಹಮಾಸ್ ಹೇಳಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಗಾಜಾದಲ್ಲಿರುವ ಒತ್ತೆಯಾಳುಗಳ ಬಿಡುಗಡೆ ಒಪ್ಪಂದ ಒಪ್ಪಿಕೊಳ್ಳಲು ಹಮಾಸ್‌ಗೆ ಕೊನೆಯ ಎಚ್ಚರಿಕೆ" ನೀಡಿದ್ದೇನೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲೇ ಈ ರೀತಿಯ ಹೇಳಿಕೆ ನೀಡಿದೆ.
"ನಮ್ಮ ಜನರ ವಿರುದ್ಧದ ಆಕ್ರಮಣವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಬೆಂಬಲಿಸುವ ಯಾವುದೇ ಕ್ರಮವನ್ನು ಹಮಾಸ್ ಸ್ವಾಗತಿಸುತ್ತದೆ ಮತ್ತು ಎಲ್ಲಾ ಒತ್ತೆಯಾಳುಗಳ ಬಿಡುಗಡೆಯ ಬಗ್ಗೆ ಚರ್ಚಿಸಲು ಕೂಡಲೇ ಮಾತುಕತೆಗೆ ಕೂರಲು ಸಿದ್ಧವಿದೆ ಎಂದು ಪ್ಯಾಲೆಸ್ಟಿಯನ್ ಗುಂಪು ಹೇಳಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.
ಗಾಜಾ ಪಟ್ಟಿಯಿಂದ ಇಸ್ರೇಲಿ ಸೇನೆ ಸಂಪೂರ್ಣ ವಾಪಸಾತಿಯೊಂದಿಗೆ ಯುದ್ಧದ ಅಂತ್ಯದ ಘೋಷಣೆ ಮತ್ತು ಗಾಜಾ ಪಟ್ಟಿಯನ್ನು ನಿರ್ವಹಿಸಲು ಸ್ವತಂತ್ರ ಪ್ಯಾಲೆಸ್ಟೀನಿಯಾದ ಸಮಿತಿಯ ರಚನೆಯನ್ನು ಹಮಾಸ್ ಬಯಸಿದ್ದು, ಅದು ಕೂಡಲೇ ತನ್ನ ಕರ್ತವ್ಯವನ್ನು ಆರಂಭಿಸಬೇಕು ಎಂದು ಹೇಳಿದೆ.
ಇದಕ್ಕೂ ಮುನ್ನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲಿಗರು ನನ್ನ ಷರತ್ತುಗಳನ್ನು ಒಪ್ಪಿಕೊಂಡಿದ್ದಾರೆ. ಹಮಾಸ್ ಕೂಡ ಒಪ್ಪಿಕೊಳ್ಳುವ ಸಮಯ ಬಂದಿದೆ. ಒಪ್ಪಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಮಾಸ್ ಗೆ ಎಚ್ಚರಿಕೆ ನೀಡಿದ್ದೇನೆ. ಇದು ನನ್ನ ಕೊನೆಯ ಎಚ್ಚರಿಕೆ ಎಂದು ಹೇಳಿದ್ದರು.
Advertisement