
ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ಕಾರ್ಯಕರ್ತ ಚಾರ್ಲಿ ಕಿರ್ಕ್ (Charlie Kirk) ರನ್ನು ಗುಂಡು ಹಾರಿಸಿ ಕೊಂದಿದ್ದ ಶೂಟರ್ ಇದೀಗ ನಮ್ಮ ವಶದಲ್ಲಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಫಾಕ್ಸ್ ನ್ಯೂಸ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, 'ಚಾರ್ಲಿ ಕಿರ್ಕ್ ರನ್ನು ಗುಂಡು ಹಾರಿಸಿ ಕೊಂದಿದ್ದ ಶೂಟರ್ ಇದೀಗ ನಮ್ಮ ವಶದಲ್ಲಿದ್ದಾನೆ. ಶೂಟರ್ ಗೆ ತುಂಬಾ ಹತ್ತಿರದಲ್ಲೇ ಇದ್ದ ಯಾರೋ ಒಬ್ಬರು ಆತನನ್ನು ಒಪ್ಪಿಸಿದ್ದಾರೆ. ದಾಳಿಕೋರನಿಗೆ ಮರಣದಂಡನೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.
'ನನಗೆ ಖಚಿತವಾಗಿ ತಿಳಿದಿದೆ. ನಾವು ಅವರನ್ನು ಬಂಧನದಲ್ಲಿಟ್ಟಿದ್ದೇವೆ. ಮೂಲಭೂತವಾಗಿ, ಆತನಿಗೆ ತುಂಬಾ ಹತ್ತಿರವಾಗಿದ್ದ ಯಾರೋ ಒಬ್ಬರು ಅವನನ್ನು ಹಿಡಿದು ಒಪ್ಪಿಸಿದ್ದಾರೆ. ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ. ದಾಳಿಕೋರನಿಗೆ ಮರಣದಂಡನೆ ವಿಧಿಸಲಾಗುವುದು ಎಂದು ನಾನು ಭಾವಿಸುತ್ತೇನೆ" ಎಂದು ಟ್ರಂಪ್ ಹೇಳಿದರು.
'ಕಿರ್ಕ್ ಮಗನಿದ್ದಂತೆ ಇದ್ದ'
ಇದೇ ವೇಳೆ ಆತ (ಚಾರ್ಲಿ ಕಿರ್ಕ್) ಮಗನಂತೆ ಇದ್ದ. ಆತ ಇದನ್ನು ನಿಜವಾಗಿಯೂ ಕಾಲೇಜಿನಲ್ಲಿ ಸಾಮಾನ್ಯವಾಗಿ ಪ್ರಾರಂಭಿಸುತ್ತಿದ್ದ... ಇದು ಒಂದು ಚಳುವಳಿಯಾಗಿ ಮಾರ್ಪಟ್ಟಿದೆ... ಯುವಕರು ಅಥವಾ ಯಾವುದೇ ಗುಂಪು ಚಾರ್ಲಿಗೆ ಮಾಡಿದಂತೆ ಒಬ್ಬ ವ್ಯಕ್ತಿಯ ಬಳಿಗೆ ಹೋಗುವುದನ್ನು ನಾನು ಎಂದಿಗೂ ನೋಡಿಲ್ಲ. ಕಿರ್ಕ್ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೇನೆ. ಸಂತಾಪ ಸೂಚಿಸಿ ಧೈರ್ಯ ಹೇಳಿದ್ದೇನೆ ಎಂದು ಟ್ರಂಪ್ ಹೇಳಿದರು.
"ನಾನು ನಿನ್ನೆ ಅವರ ಪತ್ನಿಯೊಂದಿಗೆ ಮಾತನಾಡಿದೆ. ಅವರು ತುಂಬಾ ನೋವು ಮತ್ತು ಆಘಾತದಲ್ಲಿದ್ದಾರೆ. ಆದರೆ ಈ ವಿನಾಶದ ನಡುವೆಯೂ ಅವರು ಟರ್ನಿಂಗ್ ಪಾಯಿಂಟ್ USA ಚಳುವಳಿ ಮುಂದುವರಿಸಲು ಬಯಸುತ್ತಿದ್ದಾರೆ... ಎಂದು ಹೇಳಿದರು.
Advertisement