
ಗಾಜಾ: ಇಸ್ರೇಲ್ ವಿರುದ್ಧ ನಿರಂತರ ಸಂಘರ್ಷದಲ್ಲಿ ತೊಡಗಿರುವ ಹಮಾಸ್ ಬಂಡುಕೋರರು ಮತ್ತಿತರ ಬಣಗಳಿಗೆ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಶಸ್ತ್ರಾಸ್ತ್ರಗಳನ್ನು ಪ್ಯಾಲೆಸ್ತೀನ್ ಆಡಳಿತಕ್ಕೆ ಒಪ್ಪಿಸುವಂತೆ ಒತ್ತಾಯಿಸಿದ್ದು, ಗಾಜಾದಲ್ಲಿ ಆಡಳಿತ ಮತ್ತು ಭದ್ರತೆ ಖಾತ್ರಿಗೆ ಪ್ಯಾಲೆಸ್ತೀನ್ ಅರ್ಹವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸೋಮವಾರ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಉಭಯ ರಾಷ್ಟ್ರಗಳ ಸಮಸ್ಯೆ ಪರಿಹಾರ ಕುರಿತ ವಿಶೇಷ ಅಧಿವೇಶನದಲ್ಲಿ ವೀಡಿಯೊ ಲಿಂಕ್ ಮೂಲಕ ಮಾತನಾಡಿದ ಅಬ್ಬಾಸ್, ಒಂದು ಕಾನೂನು ಮತ್ತು ಒಂದೇ ಕಾನೂನುಬದ್ಧ ಭದ್ರತಾ ಪಡೆಯ ಅಡಿಯಲ್ಲಿ ಏಕೀಕೃತ ಪ್ಯಾಲೆಸ್ತೀನ್ ರಾಷ್ಟ್ರದ ದೃಷ್ಟಿಯನ್ನು ವಿವರಿಸಿದರು.
ಗಾಜಾದಲ್ಲಿ ಆಡಳಿತ ಮತ್ತು ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ಯಾಲೆಸ್ತೀನ್ ಅರ್ಹವಾಗಿದೆ. ಇದು ವೆಸ್ಟ್ ಬ್ಯಾಂಕ್, ಅರಬ್ ಮತ್ತು ಅಂತರರಾಷ್ಟ್ರೀಯ ಬೆಂಬಲ ಮತ್ತು ಭಾಗವಹಿಸುವಿಕೆಯ ಸಹಯೋಗದಲ್ಲಿ ಸರ್ಕಾರದೊಂದಿಗೆ ಸಂಯೋಜಿತವಾದ ಮಧ್ಯಂತರ ಆಡಳಿತ ಸಮಿತಿ ಮೂಲಕ ನಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ.
"ಆಡಳಿತದಲ್ಲಿ ಹಮಾಸ್ ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ. "ಹಮಾಸ್ ಮತ್ತು ಇತರ ಬಣಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಪ್ಯಾಲೆಸ್ತೀನ್ ಆಡಳಿತಕ್ಕೆ ಒಪ್ಪಿಸಬೇಕು. ನಮಗೆ ಬೇಕಾಗಿರುವುದು ಶಸ್ತ್ರಾಸ್ತ್ರಗಳಿಲ್ಲದ ಏಕೀಕೃತ ರಾಜ್ಯ, ಒಂದು ಕಾನೂನು ಮತ್ತು ಒಂದು ಕಾನೂನುಬದ್ಧ ಭದ್ರತಾ ಪಡೆ ಎಂದು ಅವರು ಹೇಳಿದ್ದಾರೆ.
Advertisement