
ವಿಶ್ವಸಂಸ್ಥೆ: ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ತನ್ನ ಕೆಲಸವನ್ನು ಮುಗಿಸಬೇಕಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ. ಗಾಜಾದಲ್ಲಿ ವಿನಾಶಕಾರಿ ಯುದ್ಧವನ್ನು ಕೊನೆಗೊಳಿಸಲು ಒಪ್ಪದ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳ ಪ್ರತಿಭಟನೆ ನಡುವೆಯೂ ವಿಶ್ವಸಂಸ್ಥೆಯಲ್ಲಿ ಉದ್ಧಟತನದಿಂದ ಭಾಷಣ ಮಾಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಅವರು ಭಾಷಣ ಮಾಡಲು ತಯಾರಾಗುತ್ತಿದ್ದಂತೆಯೇ ಡಜನ್ ಗಟ್ಟಲೇ ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವಸಂಸ್ಥೆ ಸಾಮಾನ್ಯ ಸಭೆಯಿಂದ ಹೊರನಡೆದಿದ್ದಾರೆ. ನಂತರ ನೆತನ್ಯಾಹು ಭಾಷಣ ಮಾಡಿದ್ದಾರೆ.
ಇಸ್ರೇಲಿ ನಾಯಕ ಮಾತನಾಡುತ್ತಿದ್ದಂತೆ ಸಭಾಂಗಣದಲ್ಲಿ ಕೂಗಾಟ, ಧಿಕ್ಕಾರದ ಘೋಷಣೆ ಮೊಳಗಿತು. ಇನ್ನೂ ಕೆಲವರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಹಮಾಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ನೆತನ್ಯಾಹು ಅವರನ್ನು ಬೆಂಬಲಿಸಿದ ಯುಎಸ್ ನಿಯೋಗವು ಅಲ್ಲಿತ್ತು. ಕೆಲವು ವಿಶ್ವದ ಪ್ರಮುಖ ರಾಷ್ಟ್ರಗಳ ಪ್ರತಿನಿಧಿಗಳು ಹಾಜರಿದ್ದರು.
ಅಮೆರಿಕ, ಇಂಗ್ಲೆಂಡ್ ತಮ್ಮ ಹಿರಿಯ ಅಧಿಕಾರಿಗಳು ಅಥವಾ ತಮ್ಮ ವಿಶ್ವಸಂಸ್ಥೆ ರಾಯಭಾರಿಯನ್ನು ಅವರ ವಿಭಾಗಕ್ಕೆ ಕಳುಹಿಸಲಿಲ್ಲ. ಬದಲಾಗಿ, ಕಿರಿಯ, ಕೆಳಮಟ್ಟದ ರಾಜತಾಂತ್ರಿಕರಿಂದ ತುಂಬಿತ್ತು.
Map ತೋರಿಸಿ ಮಾತನಾಡಿದ ನೆತನ್ಯಾಹು!
ಯಹೋದಿ ವಿರೋಧಿ ಸಾಯುತ್ತದೆ. ವಾಸ್ತವವಾಗಿ, ಎಲ್ಲಾ ಸಾಯುವುದಿಲ್ಲ ಎಂದು ನೆತನ್ಯಾಹು ಹೇಳಿದರು. ಅಕ್ಟೋಬರ್ ಏಳ ಹಮಾಸ್ ದಾಳಿಗೆ ಕಾರಣವಾದ ವಿಶೇಷ ಒತ್ತೆಯಾಳುಗಳ ಕ್ಯೂಆರ್ ಕೋಡ್ ನೊಂದಿಗೆ ಪಿನ್ ಇದ್ದ ಬಟ್ಟೆ ಧರಿಸಿದ್ದ ನೆತನ್ಯಾಹು, THE CURSE'ಎಂಬ ಮ್ಯಾಪ್ ತೋರಿಸಿ ಮಾತನಾಡಿದರು. ಆಗಾಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೊಗಳುತ್ತಿದ್ದರು.
ಬೇರು ಸಮೇತ ಹಮಾಸ್ ಉಗ್ರರ ನಾಶಕ್ಕೆ ಪಣ!
ಗಾಜಾದಲ್ಲಿ ಹಮಾಸ್ ನಿರ್ಮೂಲನೆ ಮಾಡುವ ಇಸ್ರೇಲ್‌ನ ನಿರ್ಣಯವನ್ನು ಪುನರುಚ್ಚರಿಸಿದರು. ಇಸ್ರೇಲ್ ಕೆಲಸ ಇನ್ನೂ ಮುಗಿದಿಲ್ಲ. ಗಾಜಾ ನಗರದಿಂದ ಉಗ್ರಗಾಮಿ ಗುಂಪನ್ನು ಬೇರುಸಹಿತ ಕಿತ್ತೊಗೆಯುವ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಆಗಾಗ್ಗೆ ಟ್ರಂಪ್ ಹೊಗಳಿದ ಇಸ್ರೇಲ್ ಪ್ರಧಾನಿ
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನೆತನ್ಯಾಹು ಅವರ ಭಾಷಣವನ್ನು ಅಂತಾರಾಷ್ಟ್ರೀಯ ಸಮುದಾಯ ಸೂಕ್ಷ್ಮವಾಗಿ ವೀಕ್ಷಿಸಿತು. ಇತ್ತೀಚಿಗೆ ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಇತರರು ಸ್ವತಂತ್ರ ಪ್ಯಾಲೇಸ್ಟಿನಿಯನ್ ರಾಷ್ಟ್ರವಾಗಿ ಗುರುತಿಸುವುದಾಗಿ ಘೋಷಿಸಿವೆ.
ನೆತನ್ಯಾಹು ವಿರುದ್ಧ ಬಂಧನ ವಾರೆಂಟ್:
ಯುರೋಪಿಯನ್ ಒಕ್ಕೂಟವು ಇಸ್ರೇಲ್ ಮೇಲೆ ಸುಂಕಗಳು ಮತ್ತು ನಿರ್ಬಂಧಗಳನ್ನು ಪರಿಗಣಿಸುತ್ತಿದೆ. ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ನೆತನ್ಯಾಹು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಉಲ್ಲೇಖಿಸಿ ಬಂಧನ ವಾರಂಟ್ ಹೊರಡಿಸಿದೆ. ಗಾಜಾದಲ್ಲಿ ಇಸ್ರೇಲ್ ನರ ಮೇಧ ನಡೆಸಿದೆ ಎಂಬ ದಕ್ಷಿಣ ಆಫ್ರಿಕಾದ ಆರೋಪವನ್ನು ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯ ಪರಿಶೀಲಿಸುತ್ತಿದೆ.
Advertisement