​ಟ್ರಂಪ್ ಇರುವಾಗಲೇ ಶ್ವೇತಭವನದ ಸಮೀಪ ಗುಂಡಿನ ದಾಳಿ: ಕೆಲಕಾಲ ಆತಂಕ ಸೃಷ್ಟಿ

ಘಟನೆ ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲೇ ತಂಗಿದ್ದರು ಎಂದು ತಿಳಿದುಬಂದಿದೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಇರುವ ಶ್ವೇತಭವನದ ಸಮೀಪ ಭಾನುವಾರ ರಾತ್ರಿ ಗುಂಡಿನ ಸದ್ದು ಕೇಳಿಬಂದಿದ್ದು, ಈ ಬೆಳವಣಿಗೆ ಕೆಲಕಾಲ ಆತಂಕ ಸೃಷ್ಟಿಸಿತ್ತು.

ವರದಿಗಳ ಪ್ರಕಾರ, ವೈಟ್ ಹೌಸ್ ಎದುರಿನ ಲಫಾಯೆಟ್ ಪಾರ್ಕ್ ಪ್ರದೇಶದಲ್ಲಿ ಗುಂಡಿನ ಶಬ್ಧ ಕೇಳಿ ಬಂದಿತ್ತು ಎನ್ನಲಾಗಿದೆ.

ಘಟನೆ ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲೇ ತಂಗಿದ್ದರು ಎಂದು ತಿಳಿದುಬಂದಿದೆ.

ತಕ್ಷಣವೇ ಯುಎಸ್ ಸೀಕ್ರೆಟ್ ಸರ್ವಿಸ್, ಸ್ಥಳೀಯ ಪೊಲೀಸ್ ಮತ್ತು ಪಾರ್ಕ್ ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

Donald Trump
ಭಾರತ-ಪಾಕಿಸ್ತಾನದ ಸಂಘರ್ಷ ಅಣ್ವಸ್ತ್ರದ ಅಪಾಯದಲ್ಲೇ ಇದೆ; ಪಾಕ್ ನಿಂದ ನಮಗೂ ಅಪಾಯ ತಪ್ಪಿದ್ದಲ್ಲ: ಅಮೆರಿಕ

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದ, ಶಂಕಿತ ವ್ಯಕ್ತಿ ಅಥವಾ ವಾಹನದ ಬಗ್ಗೆ ತನಿಖೆ ಮುಂದುವರೆದಿದೆ. ಇನ್ನೂ ಯಾರನ್ನೂ ಬಂಧಿಸಿರುವ ಮಾಹಿತಿ ಲಭ್ಯವಾಗಿಲ್ಲ.

ಘಟನೆಯ ನಂತರ ವೈಟ್ ಹೌಸ್ ಸುತ್ತಮುತ್ತ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದ್ದು. ಅಧಿಕಾರಿಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. ಈ ಘಟನೆಯ ಹಿನ್ನಲೆ ಮತ್ತು ಉದ್ದೇಶ ಕುರಿತು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com