ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಪೋಪ್ ಲಿಯೋ ಟೀಕಿಸಿದ್ದರು. ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಮತ್ತು ಇದು ಅನೈತಿಕ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪೋಪ್ ಲಿಯೋ ವಿರುದ್ಧ ಟ್ರಂಪ್ ಅವರು ಕಿಡಿಕಾರಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್online desk
Updated on

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕ್ಯಾಥೋಲಿಕ್ ಧರ್ಮಗುರು ಪೋಪ್ ಲಿಯೋ XIV (Pope Leo XIV) ನಡುವೆ ವಾಕ್ಸಮರ ಆರಂಭವಾಗಿದ್ದು, ಇದು ಜಾಗತಿಕ ಹಾಗೂ ಧಾರ್ಮಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಲಿಯೋ ಅವರನ್ನು “ಅಪರಾಧ ವಿಷಯದಲ್ಲಿ ದುರ್ಬಲ” ಹಾಗೂ “ವಿದೇಶಾಂಗ ನೀತಿಯಲ್ಲಿ ದುರ್ಬಲ” ಎಂದು ಟೀಕಿಸಿದ್ದಾರೆ. ಜೊತೆಗೆ, ಲಿಯೋ ಪೋಪ್ ಆಗಿ ಆಯ್ಕೆಯಾಗಲು ನನ್ನ ರಾಜಕೀಯ ಪ್ರಭಾವವೇ ಕಾರಣ. ನಾನು ಶ್ವೇತಭವನದಲ್ಲಿ ಇಲ್ಲದಿದ್ದರೆ, ಲಿಯೋ ವ್ಯಾಟಿಕನ್‌ನಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಪೋಪ್ ಲಿಯೋ ಟೀಕಿಸಿದ್ದರು. ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಮತ್ತು ಇದು ಅನೈತಿಕ ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಪೋಪ್ ಲಿಯೋ ವಿರುದ್ಧ ಟ್ರಂಪ್ ಅವರು ಕಿಡಿಕಾರಿದ್ದಾರೆ. ಪೋಪ್ ಲಿಯೋ ಅವರು ಅಪರಾಧ ನಿಯಂತ್ರಣದಲ್ಲಿ "ದುರ್ಬಲ" (weak) ಮತ್ತು ವಿದೇಶಾಂಗ ನೀತಿಯಲ್ಲಿ "ಭಯಾನಕ" (terrible) ಎಂದು ಕರೆದಿದ್ದಾರೆ.

ಪೋಪ್ ಅವರು "ತೀವ್ರ ಎಡಪಂಥೀಯರ" (Radical Left) ಪರವಾಗಿ ವರ್ತಿಸುತ್ತಿದ್ದಾರೆಂದು ಹೇಳಿರುವ ಅವರು, ಒಬ್ಬ ರಾಜಕಾರಣಿಯಂತೆ ವರ್ತಿಸುವುದನ್ನು ಬಿಟ್ಟು ಧರ್ಮಗುರುವಿನ ಕೆಲಸ ಮಾಡಲಿ ಎಂದು ಹೇಳಿದ್ದಾರೆ.

Donald Trump
ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ನಾನು ಪೋಪ್ ಲಿಯೋ ಅವರ ಅಭಿಮಾನಿ ಅಲ್ಲ. ಇರಾನ್‌ ಪರಮಾಣು ಶಸ್ತ್ರಾಸ್ತ್ರ ಹೊಂದಲಿ ಎಂದು ಒಪ್ಪುವ ಪೋಪ್ ನನಗೆ ಬೇಡ ಎಂದು ಕಟುವಾಗಿ ಟೀಕಿಸಿದ್ದಾರೆ.

ಇದೇ ವೇಳೆ ಅಮೆರಿಕಾ ಕೈಗೊಂಡ ಕ್ರಮಗಳನ್ನು ಸಮರ್ಥಿಸಿಕೊಂಡಿರುವ ಅವರು, ದೇಶದ ಭದ್ರತೆಗಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ಟೀಕಿಸುವುದು ಸರಿಯಲ್ಲ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಮೆರಿಕದ ಕ್ಯಾಥೋಲಿಕ್ ಬಿಷಪ್‌ಗಳ ಸಮಿತಿಯ ಅಧ್ಯಕ್ಷ ಪಾಲ್ ಎಸ್. ಕೋಕ್ಲಿ ಅವರು, ಟ್ರಂಪ್ ಹೇಳಿಕೆಗಳಿಂದ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. “ಪೋಪ್ ರಾಜಕೀಯ ನಾಯಕನಲ್ಲ, ಅವರು ಧಾರ್ಮಿಕ ಮಾರ್ಗದರ್ಶಕ” ಎಂದು ಹೇಳಿದ್ದಾರೆ.

ಪೋಪ್ ಲಿಯೋ XIV ಅವರು ಅಮೆರಿಕ ಮೂಲದ ಮೊದಲ ಪೋಪ್ ಆಗಿದ್ದಾರೆ. ಅವರು ಯುದ್ಧದ ಜೊತೆಗೆ ವಲಸಿಗರ ಮೇಲಿನ ಅಮೆರಿಕದ ಕಠಿಣ ಕ್ರಮಗಳನ್ನು ಕೂಡ ವಿರೋಧಿಸುತ್ತಾ ಬಂದಿದ್ದಾರೆ. ಪೋಪ್ ಲಿಯೋ ಅವರ ಪ್ರಸ್ತುತದ ನಿಲುವು ಟ್ರಂಪ್ ಆಡಳಿತದ ಯುದ್ಧ ನೀತಿ ಹಾಗೂ ವಲಸೆ ನೀತಿಗಳಿಗೆ ವಿರುದ್ಧವಾಗಿದ್ದು, ಇದೇ ಕಾರಣದಿಂದ ಇಬ್ಬರ ನಡುವೆ ವಾಕ್ಸಮರ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com