

ಕೀವ್: ಉಕ್ರೇನಿನ್ ನಗರವಾದ ಡ್ನಿಪ್ರೊ ಮೇಲೆ ರಷ್ಯಾದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು 34ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ರಾತ್ರಿಯಿಡೀ ನಡೆದ ದಾಳಿಯಲ್ಲಿ ನಾಶವಾದ ಮನೆಯ ಅವಶೇಷಗಳಲ್ಲಿ ಐವರ ಶವಗಳು ಪತ್ತೆಯಾಗಿವೆ ಎಂದು ಡ್ನಿಪ್ರೊಪೆಟ್ರೋವ್ಸ್ಕ್ ಪ್ರಾದೇಶಿಕ ಮುಖ್ಯಸ್ಥ ಅಲೆಕ್ಸಾಂಡರ್ ಗಂಜಾ ಹೇಳಿದ್ದಾರೆ. ಅವಶೇಷಗಳ ಅಡಿಯಲ್ಲಿ ಇನ್ನು ಹೆಚ್ಚಿನ ಜನರು ಸಿಲುಕಿರಬಹುದು ಎಂದು ಅವರು ಹೇಳಿದರು.
ರಷ್ಯಾದ ದಾಳಿಯ ನಂತರ ಡ್ನಿಪ್ರೊದಲ್ಲಿ 11 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಏತನ್ಮಧ್ಯೆ, ರಷ್ಯಾದ ಬೆಲ್ಗೊರೊಡ್ ಗಡಿ ಪ್ರದೇಶದಲ್ಲಿ ಡ್ರೋನ್ ದಾಳಿಯಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದರು ಮತ್ತು ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡರು. ಶುಕ್ರವಾರ ನಡೆದ ಕೈದಿಗಳ ವಿನಿಮಯದ ವೇಳೆ ರಷ್ಯಾ ಮತ್ತು ಉಕ್ರೇನ್ 193 ಮಿಲಿಟರಿ ಸಿಬ್ಬಂದಿಯನ್ನು ವಿನಿಮಯ ಮಾಡಿಕೊಂಡರು.
Advertisement