ಮಾಲಿ ರಕ್ಷಣಾ ಸಚಿವ ಸಾಡಿಯೋ ಕಾಮಾರಾ ಗುಂಡಿಕ್ಕಿ ಹತ್ಯೆ

2020 ಮತ್ತು 2021ರಲ್ಲಿ ಸೇನೆ ತಿರುಗಿಬಿದ್ದ ನಂತರ ಅಧಿಕಾರಕ್ಕೆ ಬಂದ ಸೈನಿಕ ಸರ್ಕಾರದಲ್ಲಿ ಕಾಮಾರಾ ಪ್ರಮುಖ ಪಾತ್ರವಹಿಸಿದ್ದರು.
Colonel Sadio Camara, Minister of Defence and Veterans of Mali, was a central figure in Mali's military government
ಮಾಲಿಯ ರಕ್ಷಣಾ ಮತ್ತು ಯೋಧರ ಕಲ್ಯಾಣ ಸಚಿವರಾಗಿದ್ದ ಕರ್ನಲ್ ಸಾಡಿಯೋ ಕಾಮಾರಾ(ಸಂಗ್ರಹ ಚಿತ್ರ)
Updated on

ಮಾಲಿಯ ರಕ್ಷಣಾ ಸಚಿವ ಜನರಲ್ ಸಾಡಿಯೋ ಕಾಮಾರಾ ದೇಶದಾದ್ಯಂತ ಸೈನಿಕ ತಾಣಗಳ ಮೇಲೆ ನಡೆದ ಸಂಯೋಜಿತ ದಾಳಿಗಳಲ್ಲಿ ಹತ್ಯೆಯಾಗಿದ್ದಾರೆ ಎಂದು ಸರ್ಕಾರದ ವಕ್ತಾರರು ದೃಢಪಡಿಸಿದ್ದಾರೆ.

ವಕ್ತಾರ ಇಸ್ಸಾ ಉಸ್ಮಾನೆ ಕೂಲಿಬಾಲಿ ನಿನ್ನೆ ನೀಡಿದ ಹೇಳಿಕೆಯಲ್ಲಿ, ದಾಳಿಕೋರರು ಕಾಮಾರಾ ಅವರ ಮನೆಯನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಗ್ಯಾರಿಸನ್ ಪಟ್ಟಣವಾದ ಕಾಟಿಯಲ್ಲಿ ಇರುವ ಕಾಮಾರಾ ಅವರ ನಿವಾಸದ ಮೇಲೆ ಅಲ್‌ಖೈದಾ ಸಂಪರ್ಕಿತ ಸಂಘಟನೆ ಮತ್ತು ಟುವಾರೆಗ್ ಬಂಡುಕೋರರು ಒಂದೇ ಸಮಯದಲ್ಲಿ ದಾಳಿ ನಡೆಸಿದ್ದರು.

2020 ಮತ್ತು 2021ರಲ್ಲಿ ಸೇನೆ ತಿರುಗಿಬಿದ್ದ ನಂತರ ಅಧಿಕಾರಕ್ಕೆ ಬಂದ ಸೈನಿಕ ಸರ್ಕಾರದಲ್ಲಿ ಕಾಮಾರಾ ಪ್ರಮುಖ ಪಾತ್ರವಹಿಸಿದ್ದರು. ಆಡಳಿತ ನಡೆಸುತ್ತಿರುವ ಸೈನಿಕ ನಾಯಕತ್ವದೊಳಗೆ ಅವರು ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲೊಬ್ಬರು ಮತ್ತು ಭವಿಷ್ಯದ ನಾಯಕರಾಗಿ ಕಾಣಿಸಿಕೊಂಡಿದ್ದರು ಎಂದು ಮಾಲಿಯಿಂದ ವರದಿ ಮಾಡುತ್ತಿರುವ ಅಲ್ ಜಝೀರಾ ಪತ್ರಕರ್ತ ನಿಕೋಲಸ್ ಹಕ್ ಹೇಳಿದ್ದಾರೆ.

Colonel Sadio Camara, Minister of Defence and Veterans of Mali, was a central figure in Mali's military government
'ಅಪ್ಪಾ, ನಾನು ಅಜಿತ್ ಪವಾರ್ ಜೊತೆ ಬಾರಾಮತಿಗೆ ಹೋಗುತ್ತಿದ್ದೇನೆ': ತಂದೆಗೆ ಕೊನೆಯ ಕರೆ ಮಾಡಿದ್ದ ಪಿಂಕಿ ಮಾಲಿ!

ಅವರ ಸಾವು ದೇಶದ ಸಶಸ್ತ್ರ ಪಡೆಗಳಿಗೆ ದೊಡ್ಡ ಹೊಡೆತವಾಗಿದೆ. ಹಕ್ ಅವರ ಪ್ರಕಾರ, ದಾಳಿಕೋರರು ಕಾಮಾರಾ ಅವರ ಕಾಟಿಯಲ್ಲಿರುವ ನಿವಾಸದ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದರು. ಕಾಟಿ ರಾಜಧಾನಿ ಬಮಾಕೋದಿಂದ ಸುಮಾರು 15 ಕಿಮೀ ದೂರದಲ್ಲಿರುವ ಅತ್ಯಂತ ಭದ್ರತಾ ವ್ಯವಸ್ಥೆಯುಳ್ಳ ಸೈನಿಕ ಪಟ್ಟಣವಾಗಿದ್ದು, ಮಧ್ಯಂತರ ಅಧ್ಯಕ್ಷ ಅಸ್ಸಿಮಿ ಗೋಯಿಟಾ ಕೂಡ ಅಲ್ಲಿ ವಾಸಿಸುತ್ತಾರೆ.

AFP ವರದಿ ಪ್ರಕಾರ, ಕಾಮಾರಾ ಅವರ ಎರಡನೇ ಪತ್ನಿ ಮತ್ತು ಇಬ್ಬರು ಮೊಮ್ಮಕ್ಕಳೂ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಕಾಟಿ ದೇಶದ ಅತ್ಯಂತ ಸುರಕ್ಷಿತ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದರೂ, ಅಲ್‌ಖೈದಾ ಸಂಪರ್ಕಿತ ಜಮಾಅತ್ ನುಸ್ರತ್ ಅಲ್ ಇಸ್ಲಾಂ ವಲ್ ಮುಸ್ಲಿಮೀನ್ (JNIM) ಹಾಗೂ ಅಜಾವಾದ್ ವಿಮೋಚನಾ ಮುಂಚೂಣಿ (FLA) ಟುವಾರೆಗ್ ಯೋಧರು ದಾಳಿ ನಡೆಸಲು ಯಶಸ್ವಿಯಾದರು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com