AIನಿಂದ ಕೆಲಸ ಕಳೆದುಕೊಳ್ಳುವ ಆತಂಕದ ನಡುವೆ ಮಾರ್ಕ್ ಜುಕರ್ ಬರ್ಗ್ ಹೊಸ ಭವಿಷ್ಯವಾಣಿ! ಏನಿದು?

AI ಹೆಚ್ಚಿನ ಉದ್ಯೋಗಗಳನ್ನು ಮತ್ತು ಮನುಷ್ಯರ ಮಹತ್ವವನ್ನು ಇಲ್ಲವಾಗಿಸುತ್ತದೆ ಅಂದುಕೊಳ್ಳುವವರು, ಅಂತಹ ಭವಿಷ್ಯ ಹೇಳಲು ಯಾಕೆ ಆತುರಪಡುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಜುಕರ್‌ಬರ್ಗ್ ಬರೆದಿದ್ದಾರೆ.
Mark Zuckerberg
ಮಾರ್ಕ್ ಜುಕರ್‌ಬರ್ಗ್
Updated on

ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (AI) ನಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದರೂ ಭವಿಷ್ಯದಲ್ಲಿ ಉದ್ಯೋಗಗಳಿಗೆ ಕೊರತೆಯಿರುವುದಿಲ್ಲ ಎಂದು ಮೆಟಾ (Meta) ಸಿಇಒ ಮಾರ್ಕ್ ಜುಕರ್‌ಬರ್ಗ್ ಪ್ರತಿಪಾದಿಸಿದ್ದಾರೆ.

ಸೋಮವಾರ (ಆಗಸ್ಟ್ 10) ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ 'ದಿ ಫ್ಯೂಚರ್ ಈಸ್ ಫಾರ್ ಎವೆರಿಒನ್: ದಿ ಪಾತ್ ಟು ಎ ಪಾಸಿಟಿವ್ AI ಫ್ಯೂಚರ್' (ಭವಿಷ್ಯವು ಎಲ್ಲರಿಗೂ ಸೇರಿದ್ದು: ಸಕಾರಾತ್ಮಕ AI ಭವಿಷ್ಯದತ್ತ ಒಂದು ಹಾದಿ) ಎಂಬ ಶೀರ್ಷಿಕೆಯ 6,500 ಪದಗಳ ಪ್ರಣಾಳಿಕೆಯಲ್ಲಿ ಜುಕರ್‌ಬರ್ಗ್ ಈ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

AI ಹೆಚ್ಚಿನ ಉದ್ಯೋಗಗಳನ್ನು ಮತ್ತು ಮನುಷ್ಯರ ಮಹತ್ವವನ್ನು ಇಲ್ಲವಾಗಿಸುತ್ತದೆ ಅಂದುಕೊಳ್ಳುವವರು, ಅಂತಹ ಭವಿಷ್ಯ ಹೇಳಲು ಯಾಕೆ ಆತುರಪಡುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಜುಕರ್‌ಬರ್ಗ್ ಬರೆದಿದ್ದಾರೆ.

AI ಅಪಾಯಕಾರಿ ಮತ್ತು ಅದು ಏಕೈಕ ಸುರಕ್ಷಿತ ಮಾರ್ಗ ಎಂಬ ನಂಬಿಕೆಯು ಮೂಲಭೂತವಾಗಿ ಸಮಸ್ಯಾತ್ಮಕವಾದ ಕಲ್ಪನೆಯಾಗಿದೆ. ಕೈಗಾರಿಕಾ ದಿಗ್ಗಜರಿಂದ ತಂತ್ರಜ್ಞಾನ ಕಂಪನಿಗಳಿಗೆ ಪರಿವರ್ತನೆಯಾದಾಗ ಆದಂತೆ, ಕಂಪನಿಗಳ ಗಾತ್ರವು ಕುಗ್ಗಬಹುದು, ಆದರೆ ಇದರರ್ಥ ಒಟ್ಟಾರೆ ಉದ್ಯೋಗಗಳು ಕಡಿಮೆಯಾಗುತ್ತವೆ ಎಂದರ್ಥವಲ್ಲ. ಅತ್ಯುನ್ನತ ಬುದ್ಧಿಶಕ್ತಿಯುಳ್ಳ AI ಏಜೆಂಟ್‌ಗಳ ನೆರವಿನಿಂದ ಕೆಲವೇ ಕೆಲವು ಜನರು ಕಂಪನಿಗಳನ್ನು ನಡೆಸುತ್ತಾರೆ ಎಂಬ ನಿರೀಕ್ಷೆ ಹೊಂದಿರುವುದಾಗಿ ಫೇಸ್ ಬುಕ್ ಸಂಸ್ಥಾಪಕರು ಹೇಳಿದ್ದಾರೆ.

"ಪರ್ಸನಲ್ 'ಸೂಪರ್-ಇಂಟೆಲಿಜೆಂಟ್' (ಅತ್ಯುನ್ನತ ಬುದ್ಧಿಶಕ್ತಿಯ) ಏಜೆಂಟ್‌ಗಳನ್ನು ಹೊಂದಿರುವ ಕೆಲವೇ ಕೆಲವು ಜನರು ಬೃಹತ್ ಪ್ರಮಾಣದಲ್ಲಿ ಕಂಪನಿಗಳನ್ನು ನಡೆಸುವುದನ್ನು ನಾವು ಕಾಣಲಿದ್ದೇವೆ ಎಂಬುದನ್ನು ನಿರೀಕ್ಷಿಸುತ್ತೇನೆ. ಭವಿಷ್ಯದಲ್ಲಿ, ಸಣ್ಣ ಉದ್ಯಮಗಳು ಆರ್ಥಿಕತೆಯ ಬೆನ್ನೆಲುಬಾಗಿ ಮುಂದುವರಿಯಲಿವೆ. ಆದರೆ ಪ್ರತಿಯೊಂದು ಸಣ್ಣ ಉದ್ಯಮವೂ ಹೆಚ್ಚು ದೊಡ್ಡ ಮಟ್ಟದ ಪ್ರಭಾವವನ್ನು ಬೀರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಆಂಥ್ರೊಪಿಕ್‌ನ ಡಾರಿಯೊ ಅಮೋಡೆ ಮತ್ತು ಓಪನ್‌ಎಐನ ಸ್ಯಾಮ್ ಆಲ್ಟ್‌ಮನ್ ಸೇರಿದಂತೆ ಇತರ ತಂತ್ರಜ್ಞಾನ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEOಗಳು) ಉದ್ಯೋಗಗಳಿಗೆ ಎದುರಾಗಲಿರುವ ಭಾರಿ ಸಂಕಷ್ಟದ ಬಗ್ಗೆ ಎಚ್ಚರಿಕೆ ನೀಡುತ್ತಿರುವ ಸಮಯದಲ್ಲೇ ಜುಕರ್‌ಬರ್ಗ್ ಅವರ ಈ ಭವಿಷ್ಯವಾಣಿ ಹೊರಬಿದ್ದಿದೆ.

Mark Zuckerberg
AI ಗುಳ್ಳೆ ಯಾವಾಗ ಸಿಡಿಯುತ್ತೆ? (ಹಣಕ್ಲಾಸು)

ಮುಂದಿನ ಐದು ವರ್ಷಗಳಲ್ಲಿ ಕಚೇರಿ ಆಧಾರಿತ ವೃತ್ತಿಗಳಲ್ಲಿನ (ವೈಟ್-ಕಾಲರ್ ಉದ್ಯೋಗಗಳು) ಆರಂಭಿಕ ಹಂತದ ಅರ್ಧದಷ್ಟು ಹುದ್ದೆಗಳನ್ನು ಕೃತಕ ಬುದ್ಧಿಮತ್ತೆ (AI) ಇಲ್ಲವಾಗಿಸಬಹುದು ಎಂದು ಅಮೋಡೆ ಪದೇ ಪದೇ ಹೇಳಿದ್ದಾರೆ.

ವೆಚ್ಚ ಕಡಿತಕ್ಕಾಗಿ AI ಅನ್ನು ಬಳಸಲು ಕಂಪನಿಗಳ ಮುಖ್ಯಸ್ಥರು ಮುಂದಾಗುತ್ತಿರುವುದರಿಂದ, ಕಾನೂನು ಸಂಸ್ಥೆಗಳು, ಸಲಹಾ ಸೇವೆಗಳು, ಆಡಳಿತ ಮತ್ತು ಹಣಕಾಸು ವಲಯಗಳಲ್ಲಿನ ಪುನರಾವರ್ತಿತ ಹಾಗೂ ವೈವಿಧ್ಯಮಯ ಕಾರ್ಯಗಳು ಶೀಘ್ರದಲ್ಲೇ ಇಲ್ಲವಾಗಬಹುದು ಎಂದು ಆಂಥ್ರೊಪಿಕ್ ಮುಖ್ಯಸ್ಥರು ಅಭಿಪ್ರಾಯಪಡುತ್ತಾರೆ. ಕಡಿಮೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೂಲಕ ವೆಚ್ಚವನ್ನು ತಗ್ಗಿಸಲು AI ಬಳಸಿಕೊಳ್ಳಲು ಹೆಚ್ಚಿನವರು ಬಯಸುತ್ತಾರೆ ಎಂದು ನನಗೆ ಅನ್ನಿಸುತ್ತದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com