ಲಿಬಿಯಾ: ಮಾಜಿ ಸರ್ವಾಧಿಕಾರಿ ಗಡಾಫಿ ಪುತ್ರ ಮನೆಯಲ್ಲಿಯೇ ಗುಂಡೇಟಿಗೆ ಬಲಿ!
ತ್ರಿಪೋಲಿ: ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಮಗ ಸೈಫ್ ಅಲ್-ಇಸ್ಲಾಂ ಗಡಾಫಿ ಮನೆಯಲ್ಲಿಯೇ ಗುಂಡೇಟಿಗೆ ಬಲಿಯಾಗಿದ್ದಾರೆ. ಗಢಾಪಿ ಅವರ ಮುಂದಿನ ಉತ್ತರಾಧಿಕಾರಿ ಎನ್ನಲಾಗುತ್ತಿದ್ದ ಸೈಫ್ ಅಲ್-ಇಸ್ಲಾಂ ಗಡಾಫಿ ಅವರ ಮನೆಗೆ ನುಗ್ಗಿದ್ದ ನಾಲ್ವರು ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಅವರ ಕಚೇರಿ ದೃಢಪಡಿಸಿದೆ.
53 ವರ್ಷದ ಗಡಾಫಿ ಸಾವನ್ನು ಅವರ ರಾಜಕೀಯ ಕಚೇರಿಯ ಮುಖ್ಯಸ್ಥರು ಖಚಿತಪಡಿಸಿದ್ದಾರೆ. ಪಶ್ಚಿಮ ಲಿಬಿಯಾದ ನಗರವಾದ ಜಿಂಟಾನ್‌ನಲ್ಲಿರುವ ಅವರ ನಿವಾಸದಲ್ಲಿ "ನಾಲ್ಕು ವ್ಯಕ್ತಿಗಳ ಕಮಾಂಡೋ" ಘಟಕ ಹತ್ಯೆ" ನಡೆಸಿದೆ ಎಂದು ಅವರ ವಕೀಲರು AFP ಸುದ್ದಿ ಸಂಸ್ಥೆಗೆ ತಿಳಿಸಿದರು.
ಆದಾಗ್ಯೂ, ಹತ್ಯೆಯನ್ನು ಮಾಡಿಸಿದವರು ಯಾರು ಅಥವಾ ಶಸ್ತ್ರಸಜ್ಜಿತ ವ್ಯಕ್ತಿಗಳು ಅವರ ಮನೆಗೆ ನುಗ್ಗಲು ಏನು ಕಾರಣ ಎಂಬುದಕ್ಕೆ ಯಾವುದೇ ವಿವರಗಳು ತಿಳಿದುಬಂದಿಲ್ಲ. ಅಲ್ಜೀರಿಯಾದ ದೇಶದ ಗಡಿಯ ಸಮೀಪದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸೈಫ್ ಅಲ್-ಇಸ್ಲಾಂನ ಸಹೋದರಿ ಲಿಬಿಯಾ ಟೆಲಿವಿಷನ್‌ಗೆ ಹೇಳುವ ಮೂಲಕ ಸಂಘರ್ಷದ ಹೊಗೆಯೂ ಕಾಣಿಸುತ್ತಿದೆ.
ಸೈಫ್ ಅಲ್-ಇಸ್ಲಾಮ್ ಇತ್ತೀಚಿಗೆ ತನ್ನ ತಂದೆಯ ಉತ್ತರಾಧಿಕಾರಿ ಅಂದುಕೊಂಡಿದ್ದರು. ತೈಲ-ಸಮೃದ್ಧ ಉತ್ತರ ಆಫ್ರಿಕಾದ ರಾಜ್ಯದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. 2011 ರ ದಂಗೆಯ ನಂತರ ಅವರು ತಮ್ಮ ತಂದೆಯ ನಾಲ್ಕು ದಶಕಗಳ ಆಡಳಿತ ಪತನದ ನಂತರ ಅಸ್ಪಷ್ಟತೆಗೆ ಸಿಲುಕಿದ್ದರು.
2011 ರಲ್ಲಿ ಸೆರೆಹಿಡಿಯಲ್ಪಟ್ಟ ನಂತರ ಸುಮಾರು ಒಂದು ದಶಕಗಳ ಕಾಲ ಜೈಲಿನಲ್ಲಿದ್ದರು. ತದನಂತರ ರಾಜಕೀಯಕ್ಕೆ ಧುಮುಕ್ಕಿದ್ದರು. ಅವರು ಯಾವುದೇ ಅಧಿಕೃತ ಸರ್ಕಾರಿ ಸ್ಥಾನವನ್ನು ಹೊಂದಿಲ್ಲದಿದ್ದರೂ, ಪ್ರಮುಖ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದರು.
ಮೈತ್ರಿಗಳನ್ನು ರೂಪಿಸುವ ಮತ್ತು ಪ್ರತಿಸ್ಪರ್ಧಿ ಬಣಗಳ ನಡುವೆ ನಡೆಯುವ ಮಾತುಕತೆ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದರು.

