ಅಪ್ರಾಪ್ತರು ವಯಸ್ಕರ ವಿವಸ್ತ್ರಗೊಳಿಸಿದ ಫೋಟೋ ಸೃಷ್ಟಿ; ಗ್ರೋಕ್ ವಿರುದ್ಧ ಆರೋಪ: ಎಲೋನ್ ಮಸ್ಕ್ ಹೇಳಿದ್ದೇನು?

ಮಸ್ಕ್ ನಡೆಸುತ್ತಿರುವ ಗ್ರೋಕ್ xAI, AFP ಪ್ರಶ್ನೆಗೆ ಕಠಿಣ, ಸ್ವಯಂಚಾಲಿತ ಪ್ರತಿಕ್ರಿಯೆಯೊಂದಿಗೆ "ಮುಖ್ಯವಾಹಿನಿಯ ಮಾಧ್ಯಮ ಸುಳ್ಳು ಹೇಳುತ್ತದೆ" ಎಂದು ಉತ್ತರಿಸಿದೆ.
Elon musk
ಎಲಾನ್ ಮಸ್ಕ್online desk
Updated on

ಎಲಾನ್ ಮಸ್ಕ್ ಒಡೆತನದ ಗ್ರೋಕ್ ಕೃತಕ ಬುದ್ಧಿಮತ್ತೆ ಟೂಲ್ ಮಕ್ಕಳ ಅಥವಾ ಮಹಿಳೆಯರ ಚಿತ್ರಗಳನ್ನು ಕಾಮಪ್ರಚೋದಕ ಚಿತ್ರಗಳಾಗಿ ಪರಿವರ್ತಿಸಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್, ಅದರಲ್ಲಿರುವ ದೋಷಗಳನ್ನು ಸರಿಪಡಿಸಲು ಹರಸಾಹಸ ಪಡುತ್ತಿರುವುದಾಗಿ ಹೇಳಿದ್ದಾರೆ. "ನಾವು ಸುರಕ್ಷತಾ ಕ್ರಮಗಳಲ್ಲಿನ ಲೋಪಗಳನ್ನು ಗುರುತಿಸಿದ್ದೇವೆ ಮತ್ತು ಅವುಗಳನ್ನು ತುರ್ತಾಗಿ ಸರಿಪಡಿಸುತ್ತಿದ್ದೇವೆ" ಎಂದು ಗ್ರೋಕ್ X (ಈ ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್‌ನಲ್ಲಿ ಹೇಳಿದರು.

"CSAM (ಮಕ್ಕಳ ಲೈಂಗಿಕ ದೌರ್ಜನ್ಯ ವಸ್ತು) ಕಾನೂನುಬಾಹಿರ ಮತ್ತು ನಿಷೇಧಿಸಲಾಗಿದೆ." ಡಿಸೆಂಬರ್ ಅಂತ್ಯದಲ್ಲಿ ಗ್ರೋಕ್‌ನಲ್ಲಿ "ಚಿತ್ರವನ್ನು ಸಂಪಾದಿಸು" ಬಟನ್ ನ್ನು ಬಿಡುಗಡೆ ಮಾಡಿದ ನಂತರ ನಿಂದನೆಯ ದೂರುಗಳು X ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು.

ದೂರುಗಳ ಪ್ರಕಾರ, ವೇದಿಕೆಯಲ್ಲಿ ಯಾವುದೇ ಚಿತ್ರವನ್ನು ಮಾರ್ಪಡಿಸಲು ಬಟನ್ ಬಳಕೆದಾರರಿಗೆ ಅನುಮತಿಸುತ್ತದೆ - ಕೆಲವು ಬಳಕೆದಾರರು ಚಿತ್ರಗಳಲ್ಲಿನ ಮಹಿಳೆಯರು ಅಥವಾ ಮಕ್ಕಳ ಬಟ್ಟೆಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆದುಹಾಕಲು ಯತ್ನಿಸುತ್ತಿದ್ದಾರೆ.

ಮಸ್ಕ್ ನಡೆಸುತ್ತಿರುವ ಗ್ರೋಕ್ xAI, AFP ಪ್ರಶ್ನೆಗೆ ಕಠಿಣ, ಸ್ವಯಂಚಾಲಿತ ಪ್ರತಿಕ್ರಿಯೆಯೊಂದಿಗೆ "ಮುಖ್ಯವಾಹಿನಿಯ ಮಾಧ್ಯಮ ಸುಳ್ಳು ಹೇಳುತ್ತದೆ" ಎಂದು ಉತ್ತರಿಸಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಒಂದು ಕಂಪನಿಯು ಮಕ್ಕಳ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸುವುದನ್ನು ಅಥವಾ ಹಂಚಿಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ಸುಗಮಗೊಳಿಸಿದ್ದಕ್ಕಾಗಿ ಅಥವಾ ತಡೆಯಲು ವಿಫಲವಾದ ಕಾರಣಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹೂಡಬಹುದು ಎಂದು ಬಳಕೆದಾರರು ಹೇಳಿದ ಬೆನ್ನಲ್ಲೇ, ಈ ವಿಷಯದ ಬಗ್ಗೆ ಪ್ರಶ್ನಿಸಿದ X ಬಳಕೆದಾರರಿಗೆ ಗ್ರೋಕ್ ಚಾಟ್‌ಬಾಟ್ ಪ್ರತಿಕ್ರಿಯೆ ನೀಡಿದೆ.

ಭಾರತದ ಮಾಧ್ಯಮಗಳು ಶುಕ್ರವಾರ ಈ ಬಗ್ಗೆ ವರದಿ ಮಾಡಿದ್ದು, ಅಲ್ಲಿನ ಸರ್ಕಾರಿ ಅಧಿಕಾರಿಗಳು X ಗೆ "ಅಶ್ಲೀಲ, ನಗ್ನ, ಅಸಭ್ಯ ಮತ್ತು ಲೈಂಗಿಕವಾಗಿ ಸೂಚಿಸುವ ವಿಷಯ" ವನ್ನು ತೆಗೆದುಹಾಕಲು ಕಂಪನಿಯು ತೆಗೆದುಕೊಳ್ಳುತ್ತಿರುವ ಕ್ರಮಗಳ ವಿವರಗಳನ್ನು ತ್ವರಿತವಾಗಿ ಒದಗಿಸಬೇಕೆಂದು ಒತ್ತಾಯಿಸುತ್ತಿವೆ.

Elon musk
ಭಾರತಕ್ಕೆ ಸೇವೆ ಸಲ್ಲಿಸಲು ಎದುರು ನೋಡುತ್ತಿದ್ದೇನೆ: ಎಲಾನ್ ಮಸ್ಕ್!

ಪ್ಯಾರಿಸ್‌ನಲ್ಲಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯು X ಬಗ್ಗೆ ತನಿಖೆಯನ್ನು ವಿಸ್ತರಿಸಿತು. ಇದರಿಂದಾಗಿ ಗ್ರೋಕ್ ಮಕ್ಕಳ ಅಶ್ಲೀಲ ಚಿತ್ರಗಳನ್ನು ಉತ್ಪಾದಿಸಲು ಮತ್ತು ಪ್ರಸಾರ ಮಾಡಲು ಬಳಸಲಾಗುತ್ತಿದೆ ಎಂಬ ಹೊಸ ಆರೋಪಗಳು ಕೇಳಿಬಂದಿವೆ.

ವಿದೇಶಿ ಹಸ್ತಕ್ಷೇಪದ ಉದ್ದೇಶಕ್ಕಾಗಿ ಸಾಮಾಜಿಕ ಜಾಲತಾಣದ ಅಲ್ಗಾರಿದಮ್ ಅನ್ನು ಮ್ಯಾನುಪ್ಲೇಟ್ ಮಾಡಿ ನಿರ್ವಹಿಸಲಾಗುತ್ತಿದೆ ಎಂಬ ವರದಿಗಳ ನಂತರ ಜುಲೈನಲ್ಲಿ X ವಿರುದ್ಧ ಆರಂಭಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಲ್ಲಿನ ಯುದ್ಧ ಮತ್ತು ಭಾರತ-ಪಾಕಿಸ್ತಾನ ಸಂಘರ್ಷದಿಂದ ಹಿಡಿದು ಯೆಹೂದ್ಯ ವಿರೋಧಿ ಹೇಳಿಕೆಗಳವರೆಗೆ ಮತ್ತು ಆಸ್ಟ್ರೇಲಿಯಾದಲ್ಲಿ ಮಾರಕ ಗುಂಡಿನ ದಾಳಿಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಗ್ರೋಕ್ ನ್ನು ಟೀಕಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com