

ಲಾಹೋರ್: ಪಾಕಿಸ್ತಾನದ ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಮೂವರು ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಲಾಹೋರ್‌ನಿಂದ 200 ಕಿ.ಮೀ ದೂರದಲ್ಲಿರುವ ಪಂಜಾಬ್‌ನ ಗುಜರಾತ್ ಜಿಲ್ಲೆಯ ಸರಾಯ್ ಅಲಂಗೀರ್‌ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಮೂರರಿಂದ ಏಳು ವರ್ಷದ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನ ಹತ್ಯೆ ನಡೆದಿದೆ.
ಸಿದ್ರಾ ಬಶೀರ್ ಎಂಬ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು ಒಂದು ವರ್ಷಗಳ ಹಿಂದೆ ಬಾಬರ್ ಹುಸೇನ್ ಎಂಬಾತನನ್ನು ಪರಿಚಯಿಸಿಕೊಡು ಪ್ರೀತಿಸುತ್ತಿದ್ದರು. "ಅವರು ಮದುವೆಯಾಗಲು ಪ್ಲಾನ್ ಮಾಡಿದ್ದು, ಮಹಿಳೆ ಪದೇ ಪದೇ ತನ್ನ ಪತಿಗೆ ವಿಚ್ಛೇದನ ಕೋರಿ, ಜಗಳವಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳು ಇದ್ರೆ ಮದುವೆಯಾಗಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಕೊಂದಿರುವುದಾಗಿ ಇಬ್ಬರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಮಕ್ಕಳಿಗೆ ಹಣ್ಣಿನ ಚಾಟ್‌ನಲ್ಲಿ ಅಪಾರ ಪ್ರಮಾಣದ ನಿದ್ದೆ ಮಾತ್ರೆಗಳನ್ನು ಬೆರೆಸಿ ನೀಡಿ ಗಾಢ ನಿದ್ದೆಗೆ ಜಾರಿದಾಗ ಒಂದೊಂದಾಗಿ ಕತ್ತು ಹಿಸುಕಿ ಕೊಂದಿದ್ದಾರೆ.
ಅವರ ಇಬ್ಬರ ಮಕ್ಕಳ ಶವಗಳನ್ನು ಗುರುತಿಸಲಾಗದಂತೆ ನಿರ್ಜನ ಸ್ಥಳದಲ್ಲಿ ಸುಟ್ಟುಹಾಕಿ, ನಂತರ ಅವುಗಳನ್ನು ಅಲ್ಲಿ ಹೂತುಹಾಕಿದ್ದರು. ಆಕೆಯ ಪತಿ ಮೂವರು ಮಕ್ಕಳಿಗಾಗಿ ನಾಪತ್ತೆ ದೂರನ್ನು ದಾಖಲಿಸಿದ ನಂತರ ಪೊಲೀಸರು ಸಿದ್ರಾಳನ್ನು ಪತ್ತೆ ಹಚ್ಚಿದ್ದಾರೆ.ಆಕೆಯನ್ನು ಪತ್ತೆ ಹಚ್ಚುವುದೇ ಸವಾಲಿನ ಕೆಲಸವಾಗಿತ್ತು. ಆಕೆಯ ಬಂಧನದ ನಂತರ, ಆಕೆಯ ಪ್ರೇಮಿ ಬಾಬರ್ ಹುಸೇನ್ ನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಹುಸೇನ್ ಜೊತೆ ಸೇರಿ ಮಕ್ಕಳನ್ನು ಕೊಂದಿರುವುದಾಗಿ ಸಿದ್ರಾ ಒಪ್ಪಿಕೊಂಡಿದ್ದಾಳೆ. ಹೂತು ಹಾಕಲಾದ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮಕ್ಕಳ ಶವಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿ ಫಾರೂಕ್ ಹೇಳಿದರು.
Advertisement