

ಟೆಹ್ರಾನ್: ಇರಾನ್ ನಲ್ಲಿ ಖಮೇನಿ ಆಡಳಿತ ವಿರೋಧಿಸಿ ಕಳೆದೆರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಸ್ವರೂಪ ಪಡೆದುಕೊಳ್ಳುತ್ತಿದೆ.
ಈ ನಡುವೆ ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಹಾಕಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮರೆಯಲಾಗದ ಪಾಠ ಕಲಿಸುತ್ತೇವೆ ಎಂದು ಇರಾನ್‌ನ ಸಂಸತ್ತಿನ ಸ್ಪೀಕರ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಟೆಹ್ರಾನ್ ಚೌಕದಲ್ಲಿ ಸರ್ಕಾರದ ಪರ ಪ್ರತಿಭಟನಾಕಾರರ ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೊಹಮ್ಮದ್ ಬಗರ್ ಗಲಿಬಾಫ್, ಇಸ್ಲಾಮಿಕ್ ರಿಪಬ್ಲಿಕ್ "ಭಯೋತ್ಪಾದಕರ ವಿರುದ್ಧ ಯುದ್ಧ" ನಡೆಸುತ್ತಿದೆ. ಇರಾನ್ ನಾಲ್ಕು ಯುದ್ಧ" ವನ್ನು ನಡೆಸುತ್ತಿದೆ ಎಂದು ಹೇಳಿದರು.
ಆರ್ಥಿಕ, ಮಾನಸಿಕ ಯುದ್ಧ ಹಾಗೂ ಅಮೆರಿಕ, ಇಸ್ರೇಲ್‌ನೊಂದಿಗೆ "ಮಿಲಿಟರಿ ಯುದ್ಧ, ಇಂದು ಭಯೋತ್ಪಾದಕರ ವಿರುದ್ಧದ ಯುದ್ಧ ನಡೆಸುತ್ತಿರುವುದಾಗಿ ತಿಳಿಸಿದರು.
"ಮಹಾನ್ ಇರಾನ್ ರಾಷ್ಟ್ರವು ತನ್ನ ಗುರಿಗಳನ್ನು ಸಾಧಿಸಲು ಶತ್ರುಗಳಿಗೆ ಎಂದಿಗೂ ಅವಕಾಶ ನೀಡಿಲ್ಲ. ಅಮೆರಿಕ ಏನಾದರೂ ದಾಳಿ ಮಾಡಿದ್ರೆ, ಡೊನಾಲ್ಡ್ ಟ್ರಂಪ್‌ಗೆ "ಮರೆಯಲಾಗದ ಪಾಠ" ಕಲಿಸುತ್ತದೆ ಎಂದು ಇರಾನ್ ಪ್ರತಿಜ್ಞೆ ಮಾಡಿದೆ ಎಂದು ಅವರು ಹೇಳಿದರು.
ಇಸ್ಲಾಮಿಕ್ ಗಣರಾಜ್ಯ ಬೆಂಬಲಿಸಲು ಮತ್ತು ಸೋಮವಾರ ಮಧ್ಯ ಟೆಹ್ರಾನ್‌ನ ಪ್ರಮುಖ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಇರಾನಿಯನ್ನರು ಇಸ್ಲಾಮಿಕ್ ಗಣರಾಜ್ಯ ಪರ ಬೆಂಬಲ ವ್ಯಕ್ತಪಡಿಸಿದರು.
ಅಲ್ಲದೇ ಪ್ರತಿಭಟನೆಯ ಸಮಯದಲ್ಲಿ ಮೃತಪಟ್ಟ ಭದ್ರತಾ ಪಡೆಗಳಿಗೆ ಸಂತಾಪ ಸೂಚಿಸಿದರು. ಇದನ್ನು ಇರಾನ್ ಸರ್ಕಾರಿ ವಾಹಿನಿಯಲ್ಲಿ ತೋರಿಸಲಾಗಿದೆ. ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಕರೆಯ ನಂತರ ಇತರ ನಗರಗಳಲ್ಲಿ ಇದೇ ರೀತಿಯ ರ‍್ಯಾಲಿಗಳು ನಡೆಯುತ್ತಿವೆ.
Advertisement