Donald Trump
ಡೊನಾಲ್ಡ್ ಟ್ರಂಪ್

ಐಷಾರಾಮಿ ರಿಯಲ್ ಎಸ್ಟೇಟ್ ಮೂಲಕ ಅಮೆರಿಕದಿಂದ 'ಹೊಸ ಗಾಜಾ' ಕಟ್ಟುವ ಭರವಸೆ!

ನೆಲಸಮಗೊಂಡಿರುವ ಪ್ಯಾಲೆಸ್ಟೀನಿಯನ್ ಪ್ರದೇಶವನ್ನು ಸಮುದ್ರ ತೀರದ ಗಗನಚುಂಬಿ ಕಟ್ಟಡಗಳ ಹೊಳೆಯುವ ರೆಸಾರ್ಟ್ ಆಗಿ ಪರಿವರ್ತಿಸುವ 'ಹೊಸ ಗಾಜಾ'ದ ತಮ್ಮ ದೃಷ್ಟಿಕೋನವನ್ನು ಅಮೆರಿಕದ ಅಧಿಕಾರಿಗಳು ಮಂಡಿಸಿದರು.
Published on

ದಾವೋಸ್: ನೆಲಸಮಗೊಂಡಿರುವ ಪ್ಯಾಲೆಸ್ಟೀನಿಯನ್ ಪ್ರದೇಶವನ್ನು ಸಮುದ್ರ ತೀರದ ಗಗನಚುಂಬಿ ಕಟ್ಟಡಗಳ ಹೊಳೆಯುವ ರೆಸಾರ್ಟ್ ಆಗಿ ಪರಿವರ್ತಿಸುವ 'ಹೊಸ ಗಾಜಾ'ದ ತಮ್ಮ ದೃಷ್ಟಿಕೋನವನ್ನು ಅಮೆರಿಕದ ಅಧಿಕಾರಿಗಳು ಮಂಡಿಸಿದರು. ನಾವು ಗಾಜಾದಲ್ಲಿ ಬಹಳ ಯಶಸ್ವಿಯಾಗಲಿದ್ದೇವೆ. ಇದು ನೋಡಲು ಉತ್ತಮ ವಿಷಯವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾವೋಸ್‌ನಲ್ಲಿ ತಮ್ಮ ವಿವಾದಾತ್ಮಕ 'ಶಾಂತಿ ಮಂಡಳಿ' ಅನಾವರಣದ ವೇಳೆ ಹೇಳಿದರು.

ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಅವರು, ನಾನು ಮನಸ್ಸಿನಿಂದ ರಿಯಲ್ ಎಸ್ಟೇಟ್ ವ್ಯಕ್ತಿ. ಸಮುದ್ರದ ತಟದಲ್ಲಿರುವ ಈ ಪ್ರವೇಶವನ್ನು ನೋಡಿದರೆ ಸುಂದರ ಆಸ್ತಿಯಾಗಿ ಕಾಣುತ್ತದೆ. ಯಾವುದೇ ಅಧಿಕೃತ ಶೀರ್ಷಿಕೆ ಇಲ್ಲದಿದ್ದರೂ ಗಾಜಾ ಕದನ ವಿರಾಮಕ್ಕಾಗಿ ಟ್ರಂಪ್ ಅವರ ರಾಯಭಾರಿಗಳಲ್ಲಿ ಒಬ್ಬರಾಗಿರುವ ಅವರ ಅಳಿಯ ಜೇರೆಡ್ ಕುಶ್ನರ್, ನೆಲಸಮಗೊಂಡಿರುವ ಪ್ಯಾಲೆಸ್ಟೀನಿಯನ್ ಪ್ರದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದೇ ನಮ್ಮ 'ಮಾಸ್ಟರ್ ಪ್ಲಾನ್' ಎಂದು ಹೇಳಿದರು.

ಮರಗಳಿಂದ ಕೂಡಿರುವ ಗಗನಚುಂಬಿ ಕಟ್ಟಡಗಳು ಭಗ್ನಗೊಂಡಿರುವ ಗಾಜಾ ಭೂಪ್ರದೇಶದ ಅಭಿವೃದ್ಧಿಗೆ ಪ್ರೇರಣೆಯಾಗಲಿದೆ. ಮಧ್ಯಪ್ರಾಚ್ಯದಲ್ಲಿ ಈ ರೀತಿಯ ನಗರಗಳನ್ನು ನಿರ್ಮಿಸುತ್ತೇವೆ. ಎರಡು ಅಥವಾ ಮೂರು ಮಿಲಿಯನ್ ಜನರಿಗಾಗಿ ಇದನ್ನು ಮೂರು ವರ್ಷಗಳಲ್ಲಿ ನಿರ್ಮಿಸುತ್ತೇವೆ. 2023ರ ಅಕ್ಟೋಬರ್ ನಲ್ಲಿ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ನಡೆಸಿದ ಭೀಕರ ವಾಯುದಾಳಿಯಲ್ಲಿ ನಾಶವಾದ ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಗಳನ್ನು ಪುನರ್ನಿರ್ಮಿಸಲು ಕನಿಷ್ಠ 25 ಬಿಲಿಯನ್ ಡಾಲರ್ ಹೂಡಿಕೆ ಮಾಡಬೇಕಾಗುತ್ತದೆ ಕುಶ್ನರ್ ಪ್ರಚಾರ ಮಾಡಿದರು.

ಗಾಜಾದ GDP 10 ವರ್ಷಗಳಲ್ಲಿ 10 ಬಿಲಿಯನ್ ಡಾಲರ್ ಆಗಿರುತ್ತದೆ. ಅಲ್ಲಿರುವ ಎಲ್ಲರಿಗೂ ನೂರಕ್ಕೆ ನೂರರಷ್ಟು ಪೂರ್ಣ ಉದ್ಯೋಗ ಮತ್ತು ಕುಟುಂಬಕ್ಕೆ ವರ್ಷಕ್ಕೆ 13,000 ಡಾಲರ್ ಸರಾಸರಿ ಆದಾಯ ಸಿಗುತ್ತದೆ. ಇದು ಒಂದು ಭರವಸೆಯಾಗಿರಬಹುದು. ಮುಂದೆ ಇದು ಒಂದು ಪ್ರವಾಸಿ ತಾಣವಾಗಬಹುದು. ಬಹಳಷ್ಟು ಕೈಗಾರಿಕೆಗಳು ಹುಡುಕಿಕೊಂಡು ಬರುತ್ತವೆ. ನಿಜವಾಗಿಯೂ ಅಲ್ಲಿನ ಜನರು ಅಭಿವೃದ್ಧಿ ಹೊಂದಬಹುದಾದ ಸ್ಥಳವಾಗುತ್ತದೆ ಎಂದು ಕುಶ್ನರ್ ಹೇಳಿದರು. ಇಸ್ರೇಲಿ ರಿಯಲ್ ಎಸ್ಟೇಟ್ ಡೆವಲಪರ್ ಯಾಕಿರ್ ಗಬೇ ಅವರಿಂದ ಗಾಜಾ ಆಡಳಿತ ರಾಷ್ಟ್ರೀಯ ಸಮಿತಿ (NCAG) ಸಹಾಯವನ್ನು ಪಡೆದುಕೊಂಡಿದೆ. ಅವರು ಲಾಭಕ್ಕಾಗಿ ಅಲ್ಲ, ನಿಜವಾಗಿಯೂ ಅವರ ಹೃದಯದಿಂದ ಇದನ್ನು ಮಾಡಲು ಬಯಸುತ್ತಾರೆ ಎಂದು ಕುಶ್ನರ್ ಹೇಳಿದರು. ಆದ್ದರಿಂದ ಮುಂದಿನ 100 ದಿನಗಳಲ್ಲಿ ನಾವು ಕೆಲಸಗಳನ್ನು ಮುಂದುವರಿಸುತ್ತೇವೆ. ಇದನ್ನು ಕಾರ್ಯಗತಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವತ್ತ ಗಮನಹರಿಸುತ್ತೇವೆ ಎಂದರು.

Donald Trump
ಟ್ರಂಪ್ ರ 'ಶಾಂತಿ ಮಂಡಳಿ' ಸೇರಲು ಭಾರತ ನಕಾರ; ಪಾಕಿಸ್ತಾನ ಸಹಿ!

ಗಾಜಾದಲ್ಲಿ ಶಾಶ್ವತ ಶಾಂತಿ ತರುವ ಹಾಗೂ ಸಂಭಾವ್ಯ ಜಾಗತಿಕ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ 'ಶಾಂತಿ ಮಂಡಳಿ'ಯನ್ನು ಅನಾವರಣಗೊಳಿಸಿದ್ದು, ಈ ಮಂಡಳಿ ಸೇರಲು ಭಾರತ ಬಹಿಷ್ಕರಿಸಿದೆ. ಇದೇ ವೇಳೆ ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ, ಜರ್ಮನಿ ಮತ್ತಿತರ ಹಲವು ಪ್ರಮುಖ ರಾಷ್ಟ್ರಗಳು ಟ್ರಂಪ್ ಅವರ ಶಾಂತಿ ಮಂಡಳಿ ಸಭೆಯನ್ನು ಬಹಿಷ್ಕರಿಸಿವೆ. ಅಮೆರಿಕದ ಶಾಂತಿ ಮಂಡಳಿಗೆ ಸೇರಿದ ದೇಶಗಳಲ್ಲಿ ಅರ್ಜೆಂಟೀನಾ ಅರ್ಮೇನಿಯಾ, ಅಜೆರ್ಬೈಜಾನ್, ಬಹ್ರೇನ್, ಬೆಲಾರಸ್, ಈಜಿಪ್ಟ್, ಹಂಗೇರಿ, ಕಝಾಕಿಸ್ತಾನ್, ಮೊರಾಕೊ, ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಮತ್ತು ವಿಯೆಟ್ನಾಂ ಸೇರಿವೆ. ಜರ್ಮನಿ, ಇಟಲಿ, ಪರಾಗ್ವೆ, ರಷ್ಯಾ, ಸ್ಲೊವೇನಿಯಾ, ತುರ್ಕಿಯೆ ಮತ್ತು ಉಕ್ರೇನ್ ಸೇರಿದಂತೆ ಹಲವಾರು ದೇಶಗಳು ಆಹ್ವಾನ ತಿರಸ್ಕರಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com