130 ರೂಪಾಯಿಗೆ ಕೋಟಿ ಕೋಟಿ ಬೆಲೆ ಬಾಳೋ ಹಡಗು; ಎಲ್ಲಿ ಗೊತ್ತಾ?

ಸಾಮಾನ್ಯವಾಗಿ ಒಂದು ಹಡಗಿನ ಬೆಲೆ ಹಲವು ಕೋಟಿಯಲ್ಲಿರುತ್ತದೆ. ಆದ್ರೆ, ವಿಚಿತ್ರವ ಪ್ರಕರಣವೊಂದರಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಹಡಗು ಕೇವಲ 1 ಯುರೋ ಅಂದ್ರೆ 130 ರೂಪಾಯಿಗೆ ಮಾರಾಟವಾಗಿದೆ. ಅಯ್ಯೋ ಇಷ್ಟೊಂದು ಕೆಡಿಮೆ ಬೆಲೆಗೆ ಯಾಕೆ ಮಾರಾಟವಾಯಿತು? ಇದರ ಹಿಂದಿನ ಕಾರಣವೇನು? ಆ ಕುರಿತ ವರದಿ ಇಲ್ಲಿದೆ:
MV Matthew Ship
ಎಂವಿ ಮ್ಯಾಥ್ಯೂ ಹಡಗುOnline Desk
Updated on

ಡಬ್ಲಿನ್ (ಐರ್ಲೆಂಡ್): ಸಾಮಾನ್ಯವಾಗಿ ಒಂದು ಹಡಗಿನ ಬೆಲೆ ಹಲವು ಕೋಟಿಯಲ್ಲಿರುತ್ತದೆ. ಆದ್ರೆ, ವಿಚಿತ್ರವ ಪ್ರಕರಣವೊಂದರಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಹಡಗು ಕೇವಲ 1 ಯುರೋ ಅಂದ್ರೆ 130 ರೂಪಾಯಿಗೆ ಮಾರಾಟವಾಗಿದೆ. ಅಯ್ಯೋ ಇಷ್ಟೊಂದು ಕೆಡಿಮೆ ಬೆಲೆಗೆ ಯಾಕೆ ಮಾರಾಟವಾಯಿತು? ಇದರ ಹಿಂದಿನ ಕಾರಣವೇನು? ಎನ್ನುವುದರ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಸೆಪ್ಟೆಂಬರ್ 2023 ರಲ್ಲಿ, ಐರಿಶ್ ನೌಕಾಪಡೆ ಮತ್ತು ಕಮಾಂಡೋಗಳು ಸಮುದ್ರದಲ್ಲಿ ಪನಾಮ ದೇಶಕ್ಕೆ ಸೇರಿದ ಎಂವಿ ಮ್ಯಾಥ್ಯೂ ಹೆಸರಿನ ಹಡಗನ್ನು ವಶಪಡಿಸಿಕೊಂಡಿದ್ದರು. ಈ ಹಡಗಿನಲ್ಲಿ ಸುಮಾರು ₹1,400 ಕೋಟಿ ಮೌಲ್ಯದ 2.2 ಟನ್ ಕೊಕೇನ್‍ ಮಾದಕವಸ್ತುವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಅದರಂತೆ, ಇದು ಐರ್ಲೆಂಡ್ ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಡ್ರಗ್ಸ್ ಬೇಟೆಯಾಗಿದೆ.

ಮುಂದುವರೆದು, ಕಾನೂನು ಪ್ರಕ್ರಿಯೆಗಳ ಮುಗಿಯುವವರೆಗೆ ಈ ಹಡಗನ್ನು ಕಣ್ಗಾವಲಿನಲ್ಲಿ ಇಡುವುದು ಅನಿವಾರ್ಯವಾಗಿತ್ತು. ಹಾಗಾಗಿ, ಐರೀಶ್ ಸರ್ಕಾರ ಸುಮಾರು 3 ವರ್ಷಗಳ ಕಾಲ ಇದನ್ನು ಬಂದರಿನಲ್ಲಿ ನಿಲ್ಲಿಸಲು, ಇಂಜಿನ್ ಮತ್ತು ಎಲೆಕ್ಟ್ರಿಕಲ್ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಭಾರೀ ಮೊತ್ತ ಅಂದ್ರೆ ಸರಿಸುಮಾರು 17 ಮಿಲಿಯನ್ ಯೂರೋಗಳನ್ನು (ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ₹150 ಕೋಟಿಗಿಂತಲೂ ಹೆಚ್ಚು) ಖರ್ಚು ಮಾಡಿದೆ.

MV Matthew Ship
ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧ ಆಗಸ್ಟ್ 24 ರವರೆಗೆ ವಿಸ್ತರಿಸಿದ ಪಾಕಿಸ್ತಾನ

ಕೇವಲ 1 ಯೂರೋಗೆ ಮಾರಾಟ ಮಾಡಿದ್ದೇಕೆ?

ಈ ಹಡಗು ಸರ್ಕಾರಕ್ಕೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡುತ್ತಿತ್ತು. ಆದರೂ ಇದನ್ನು ಕೇವಲ ಒಂದು ಯೂರೋಗೆ ಮಾರಾಟ ಮಾಡಲಾಯಿತು. ಅದ್ಕಕೆ ಮುಖ್ಯ ಕಾರಣ, ಹಡಗಿನ ಅಸಲಿ ಮಾಲೀಕರು ಯಾರೆಂದು ಗೊತ್ತಾಗದೆ ಇರುವುದು. ಹಾಗಾಗಿ, ಐರೀಶ್ ಸರ್ಕಾರಕ್ಕೆ ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ ಇದರ ಸಂಪೂರ್ಣ ಹಕ್ಕನ್ನು ಪಡೆಯಲು ಸರ್ಕಾರಕ್ಕೆ ಸಾಕಷ್ಟು ಸಮಯ ಹಿಡಿಯಿತು.

ಇದರೊಂದಿಗೆ, ಹಡಗು ಸಂಪೂರ್ಣವಾಗಿ ತುಕ್ಕು ಹಿಡಿದು ಹಳೆಯದಾಗಿತ್ತು. ಅದನ್ನು ಗುಜರಿಗೆ ಹಾಕಲು ಅಥವಾ ದುರಸ್ತಿ ಮಾಡಿಸಲು ಸಹ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿತ್ತು. ಆದ್ರೆ, ಐರೀಶ್ ಸರ್ಕಾರ ಅದರ ಮೇಲೆ ಮತ್ತೊಮ್ಮೆ ಹೆಚ್ಚಿನ ಹಣ ಹಾಕಲು ಸಿದ್ಧವಿರಲಿಲ್ಲ. ಹಾಗಾಗಿ, ಹಡಗನ್ನು ಅಲ್ಲಿಂದ ಸ್ವಂತ ಖರ್ಚಿನಲ್ಲಿ ಕೊಂಡೊಯ್ಯುವ ಒಪ್ಪಂದದ ಮೇಲೆ ಅಂತರರಾಷ್ಟ್ರೀಯ ಶಿಪಿಂಗ್ ಕಂಪನಿಯೊಂದಕ್ಕೆ ನಾಮಮಾತ್ರದ ಬೆಲೆಗೆ ಅಂದರೆ 1 ಯುರೋ ಅರ್ಥಾತ್ ಭಾರತೀಯ ರೂಪಾಯಿಯಲ್ಲಿ ಸುಮಾರು 130 ರೂಪಾಯಿಗೆ ಹಸ್ತಾಂತರಿಸಲಾಯಿತು.

ಪ್ರಸ್ತುತ ಈ ಹಡಗನ್ನು ಐರ್ಲೆಂಡ್‌ನ ಕಾರ್ಕ್ ಬಂದರಿನಿಂದ ಬಲ್ಗೇರಿಯಾ ದೇಶಕ್ಕೆ ಕೊಂಡೊಯ್ಯಲಾಗುತ್ತಿದ್ದು, ಅಲ್ಲಿ ಇದನ್ನು ದುರಸ್ತಿ ಮಾಡಿ ಕಪ್ಪು ಸಮುದ್ರದಲ್ಲಿ ವಸ್ತುಗಳ ಸಾಗಣೆಗೆ ಬಳಸಲಾಗುತ್ತದೆ ಎಂದು ವರದಿಯಾಗಿದೆ.

MV Matthew Ship
Golden Blood: ಈ ರಕ್ತ ಇರೋದು ಇಡೀ ಜಗತ್ತಿನಲ್ಲಿ ಕೇವಲ 45 ಜನರ ಹತ್ರ ಮಾತ್ರ! ಏನಿದರ ಸ್ಪೆಷಾಲಿಟಿ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com