ಭಾರತೀಯ ಹಡಗುಗಳ ಮೇಲೆ ನಡೆದಿದ್ದು 'ಇರಾನ್ ದಾಳಿ- ಟ್ರಂಪ್; ಪ್ರಸ್ತಾವಿತ ಕದನ ವಿರಾಮ ಒಪ್ಪಂದದ ಆವೃತ್ತಿ ಅಲ್ಲಗಳೆದ US ಅಧ್ಯಕ್ಷ!

ಕಳೆದ ದಿನಗಳಲ್ಲಿ ಮೂರು ಹಡಗುಗಳ ಮೇಲಿನ ದಾಳಿಗಳು ಜಲಸಂಧಿಯ ಬಳಿ ಇರುವ ಯುಎಸ್ ನೌಕಾಪಡೆಯಿಂದ ಬಂದಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಗುರುವಾರ ದೃಢಪಡಿಸಿದೆ.
Narendra Modi- Trump
ನರೇಂದ್ರ ಮೋದಿ- ಡೊನಾಲ್ಡ್ ಟ್ರಂಪ್online desk
Updated on

ವಾಷಿಂಗ್ ಟನ್: ಹಾರ್ಮುಜ್ ಜಲಸಂಧಿಯ ಬಳಿ ಭಾರತೀಯ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದು, "ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ.

"... ಹಾರ್ಮುಜ್ ಜಲಸಂಧಿಯನ್ನು ತೊರೆಯುತ್ತಿರುವ ಭಾರತೀಯ ಹಡಗುಗಳ ವಿರುದ್ಧ ನಿನ್ನೆ ರಾತ್ರಿ ನಡೆದ ಅವರ (ಇರಾನ್) ಡ್ರೋನ್ ದಾಳಿ ಸಂಪೂರ್ಣ ಖಂಡನಾರ್ಹ" ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಹಾರ್ಮುಜ್ ಬಳಿಯ ಹಡಗುಗಳ ಮೇಲಿನ ಇತ್ತೀಚಿನ ದಾಳಿಗಳಿಗೆ ಬಲವಾದ ಪ್ರತಿಭಟನೆ ದಾಖಲಿಸಲು ನವದೆಹಲಿ ಶುಕ್ರವಾರ ಎರಡನೇ ಬಾರಿಗೆ ಯುಎಸ್ ಚಾರ್ಜ್ ಡಿ'ಅಫೇರ್ಸ್ ಜೇಸನ್ ಮೀಕ್ಸ್ ಅವರನ್ನು ಕರೆಸಿದ ನಂತರ ಟ್ರಂಪ್ ಅವರ ಹೇಳಿಕೆ ಬಂದಿದೆ. ಈ ಘಟನೆಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ.

ಕಳೆದ ದಿನಗಳಲ್ಲಿ ಮೂರು ಹಡಗುಗಳ ಮೇಲಿನ ದಾಳಿಗಳು ಜಲಸಂಧಿಯ ಬಳಿ ಇರುವ ಯುಎಸ್ ನೌಕಾಪಡೆಯಿಂದ ಬಂದಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಗುರುವಾರ ದೃಢಪಡಿಸಿದೆ.

ಹಿಂದಿನ ಹೇಳಿಕೆಗಳಲ್ಲಿ ಯುಎಸ್ ನೌಕಾಪಡೆ ದಾಳಿಗಳನ್ನು ಒಪ್ಪಿಕೊಂಡಿದೆ ಮತ್ತು ನೌಕಾ ದಿಗ್ಬಂಧನವನ್ನು ಉಲ್ಲಂಘಿಸಿ ಇರಾನ್‌ನಿಂದ ತೈಲ ಸಾಗಿಸಲು ಪ್ರಯತ್ನಿಸುತ್ತಿರುವ ಹಡಗುಗಳನ್ನು ದೂಷಿಸಿದೆ.

ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುವ ಹಡಗುಗಳ ಮೇಲಿನ ಅಮೆರಿಕದ ದಾಳಿಯನ್ನು ಇರಾನ್ ಖಂಡಿಸಿದೆ, ಇಂಥಹ ಕ್ರಮಗಳು "ಜಾಗತಿಕ ಶಾಂತಿ ಮತ್ತು ಭದ್ರತೆಗೆ ಬೆದರಿಕೆ" ಎಂದು ಹೇಳಿದೆ.

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಅವರು ಅಂತರರಾಷ್ಟ್ರೀಯ ಸಮುದಾಯವು ಅಮೆರಿಕವನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು, ಅಮೆರಿಕ ನಡವಳಿಕೆಯು "ಜಾಗತಿಕ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯನ್ನುಂಟುಮಾಡುತ್ತಲೇ ಇದೆ ಮತ್ತು ಸಂಚಾರ ಸ್ವಾತಂತ್ರ್ಯಕ್ಕೆ ಅಪಾಯವನ್ನುಂಟುಮಾಡುತ್ತಿದೆ" ಎಂದು ಹೇಳಿದರು.

Narendra Modi- Trump
ಇರಾನ್ ಸಂಘರ್ಷ: ಯೋಜನೆಗಳನ್ನು ನೆತನ್ಯಾಹು ಅವರಿಂದ ಮುಚ್ಚಿಟ್ಟ ಟ್ರಂಪ್; ಇಸ್ರೇಲ್ ಪ್ರಧಾನಿ ಬೆನ್ನಿಗೆ ಅಮೆರಿಕ ಅಧ್ಯಕ್ಷರ ಚೂರಿ?

ಏತನ್ಮಧ್ಯೆ, ಅಮೆರಿಕ ಮತ್ತು ಇರಾನ್ ನಡುವಿನ ಪ್ರಸ್ತಾವಿತ ಕದನ ವಿರಾಮ ಒಪ್ಪಂದದಲ್ಲಿನ ಪ್ರಮುಖ ಚರ್ಚೆಯ ಅಂಶಗಳನ್ನು ಟೆಹ್ರಾನ್‌ನ "ಉನ್ನತ ಮಟ್ಟದ" ನಾಯಕತ್ವವು ಅನುಮೋದಿಸಿದೆ ಎಂದು ಹೇಳಿಕೊಂಡ ಒಂದು ದಿನದ ನಂತರ, ಉಲ್ಟಾ ಹೊಡೆದಿರುವ ಟ್ರಂಪ್, ಇರಾನಿಯನ್ನರು ಹೇಳಿರುವ ಒಪ್ಪಂದದ ಭಾಗದ ನಿಯಮಗಳು, ಪರಸ್ಪರ ಒಪ್ಪಿಗೆಯಲ್ಲಿ ಇರಲಿಲ್ಲ ಎಂದು ವಿಚಿತ್ರ ಹೇಳಿಕೆ ನೀಡಿದ್ದಾರೆ. ಇರಾನಿನ ನಾಯಕತ್ವವನ್ನು "ನಿಭಾಯಿಸಲು ತುಂಬಾ ಅವಮಾನಕರ ಜನರು" ಎಂದು ಕರೆದ ಟ್ರಂಪ್, "ಅವರೊಂದಿಗೆ, ಉತ್ತಮ ನಂಬಿಕೆಯಿಂದ ವ್ಯವಹರಿಸುವಂತಹ ಯಾವುದೇ ವಿಷಯವಿಲ್ಲ" ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com