ಆಕೆ 'ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದರು': Trump ವಿವಾದಾತ್ಮಕ ಹೇಳಿಕೆ; ಮೆಲೋನಿ ಛೀಮಾರಿ! Video

ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮೆಲೋನಿ ಬೇಡಿಕೊಂಡರು ಎಂದು ಟ್ರಂಪ್, ಇಟಲಿಯ ಟಿವಿ ಚಾನೆಲ್ La7 ಗೆ ಹೇಳಿಕೆ ನೀಡಿದ ನಂತರ ಈ ವಿವಾದ ಭುಗಿಲೆದ್ದಿದೆ
Meloni, Donald Trump
ಮೆಲೋನಿ, ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕ ಮತ್ತು ಇಟಲಿ ನಡುವೆ ಹೊಸ ಗಲಾಟೆ ಶುರುವಾಗಿದೆ. G7 ಶೃಂಗಸಭೆಯ ಫೋಟೋ-ಅಪ್ (photo-op) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ವಿವಾದವಾಗಿ ಮಾರ್ಪಟ್ಟಿದೆ.

ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮೆಲೋನಿ ಬೇಡಿಕೊಂಡರು ಎಂದು ಟ್ರಂಪ್, ಇಟಲಿಯ ಟಿವಿ ಚಾನೆಲ್ La7 ಗೆ ಹೇಳಿಕೆ ನೀಡಿದ ನಂತರ ಈ ವಿವಾದ ಭುಗಿಲೆದ್ದಿದೆ. ಆಕೆ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಹಾತೊರೆಯುತ್ತಿದ್ದರು. ಅದನ್ನು ನಾನು ತೆಗೆದುಕೊಳ್ಳುತ್ತಿರಲಿಲ್ಲ,ಆದರೆ ಆಕೆಯ ಬಗ್ಗೆ ವಿಷಾದಿಸುತ್ತಿದ್ದೆ ಎಂದು ಟ್ರಂಪ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.

ಈ ಹೇಳಿಕೆ ಇಟಲಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ಮೆಲೋನಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಅವರ ಹೇಳಿಕೆಯನ್ನು"ಸಂಪೂರ್ಣವಾಗಿ ಕಲ್ಪಿತ" ಎಂದು ತಳ್ಳಿಹಾಕಿದ್ದಾರೆ. ಸಾರ್ವಜನಿಕವಾಗಿ ಒಮ್ಮೆ ಛೀಮಾರಿ ಹಾಕಿದ್ದನ್ನು ಹೇಳಿಕೊಂಡಿದ್ದಾರೆ. ನಾನು ಅಥವಾ ಇಟಲಿ ಎಂದಿಗೂ ಬೇಡಿಕೊಳ್ಳುವುದಿಲ್ಲ" ಎಂದು ಮೆಲೋನಿ ವೀಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.

ಟ್ರಂಪ್ ಅವರ ಕಾಮೆಂಟ್‌ಗಳಿಂದ ಆಚ್ಚರಿಗೊಂಡಿರುವುದಾಗಿ ತಿಳಿಸಿದ್ದಾರೆ. ಇಟಾಲಿಯನ್ ನಾಯಕಿ ಮತ್ತಷ್ಟು ಟ್ರಂಪ್ ವಿರೋಧಿಗಳಿಗಿಂತ ಮಿತ್ರರಾಷ್ಟ್ರಗಳ ಮೇಲೆ ಏಕೆ ಕಠಿಣವಾಗಿ ವರ್ತಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಮೆರಿಕಾ ಅಧ್ಯಕ್ಷರು ಯಾಕೆ ಮಿತ್ರರಾಷ್ಟ್ರಗಳ ಜೊತೆ ಈ ರೀತಿ ವರ್ತಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಪಶ್ಚಿಮ ಮತ್ತು ಅಮೆರಿಕದ ಶತ್ರುಗಳ ಜೊತೆ ಅವರು ಅದೇ ದೃಢನಿಶ್ಚಯವನ್ನು ತೋರಿಸದಿರುವುದು ನಿರಾಶಾದಾಯಕವಾಗಿದೆ ಬದಲಿಗೆ ಅವರು ಆ ರಾಷ್ಟ್ರಗಳ ನಾಯಕರನ್ನು ಹೆಚ್ಚಿನ ದಯೆಯಿಂದ ನಡೆಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ಜಾಗತಿಕ ಬಲಪಂಥೀಯ ಪಂಥದಲ್ಲಿ ಸೈದ್ಧಾಂತಿಕ ಮಿತ್ರರೆಂದು ಬಿಂಬಿಸಲ್ಪಟ್ಟ ಇಬ್ಬರು ನಾಯಕರ ನಡುವಿನ ಈ ಜಗಳ ಇದೀಗ ಚರ್ಚೆಯ ವಿಷಯವಾಗಿದೆ. ಇರಾನ್ ಜೊತೆಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಮಲೋನಿ ಟ್ರಂಪ್ ಜೊತೆಗೆ ಕಾಣಿಸಿಕೊಂಡು ಒಗ್ಗಟ್ಟು ತೋರಿಸಿದ್ದರು. ಆದಾಗ್ಯೂ ಟ್ರಂಪ್ ಅವರ ಈ ಹೇಳಿಕೆಯನ್ನು ಇಟಲಿ ನಾಯಕರು ಟೀಕಿಸುತ್ತಿದ್ದಾರೆ.

ಟ್ರಂಪ್ ಅವರ ಹೇಳಿಕೆಗಳು ಮೆಲೋನಿ ಅವರನ್ನು ಮಾತ್ರವಲ್ಲದೆ ಇಡೀ ದೇಶವನ್ನು ನೋಯಿಸಿವೆ ಎಂದು ಇಟಲಿ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಹೇಳಿದ್ದು, ತಮ್ಮ ನಿಗದಿತ ಅಮೆರಿಕ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಮೆಲೋನಿ ಸರ್ಕಾರದ ಹಿರಿಯ ಸದಸ್ಯರು ಕೂಡ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್ ದಶಕಗಳಷ್ಟು ಹಳೆಯದಾದ ಅಟ್ಲಾಂಟಿಕ್ ಸಾಗರ ಸಂಬಂಧಗಳನ್ನು ಹಾನಿಗೊಳಿಸುತ್ತಿದ್ದಾರೆ ಎಂದು ಪ್ರಧಾನಿಯವರ ಆಪ್ತ ಸಲಹೆಗಾರರಲ್ಲಿ ಒಬ್ಬರಾದ ಜಿಯೋವನ್‌ಬಟಿಸ್ಟಾ ಫಝೋಲಾರಿ ಆರೋಪಿಸಿದ್ದಾರೆ.

Meloni, Donald Trump
Video: ಪ್ರಧಾನಿ ಮೋದಿ- ಇಟಲಿ ಪಿಎಂ ಮೆಲೋನಿ ಹೊಸ ವೈರಲ್ ಕ್ಷಣ; Melody ಟಾಫಿಗಳ ಜೊತೆ #Melodi ಮೋಡಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com