ಇರಾನ್ ಆರ್ಭಟಕ್ಕೆ ಬೆಚ್ಚಿ ಬಿದ್ದ ಡೊನಾಲ್ಡ್ ಟ್ರಂಪ್! ಹೇಳಿದ್ದೇನು?

ಇರಾನ್ ತನ್ನ ತಕ್ಷಣದ ಗುರಿಗಳನ್ನು ಮೀರಿ ದಾಳಿ ಮಾಡುತ್ತದೆ ಎಂದು ಯುಎಸ್ ನಿರೀಕ್ಷಿಸಿರಲಿಲ್ಲ. ಆ ರಾಷ್ಟ್ರದ ಪ್ರತಿಕ್ರಿಯೆ ಅನಿರೀಕ್ಷಿತ ಮತ್ತು ಆಶ್ಚರ್ಯಕರವಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಯುಎಸ್-ಇಸ್ರೇಲ್ ನೇತೃತ್ವದ ಜಂಟಿ ಮಿಲಿಟರಿ ಕಾರ್ಯಾಚರಣೆಯ ನಂತರ ಇರಾನ್ ಈ ರೀತಿಯಾಗಿ ಪ್ರತಿಕ್ರಿಯಿಸುತ್ತದೆ ಎಂದು ಅಮೆರಿಕ ನಿರೀಕ್ಷಿಸಿರಲಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ.

ಇರಾನ್ ಜೊತೆಗಿನ ಸಂಘರ್ಷ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ಪ್ರತೀಕಾರದ ಪ್ರಮಾಣ ವಿಶೇಷವಾಗಿ ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್ ಮತ್ತು ಕುವೈತ್ ಸೇರಿದಂತೆ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡದ್ದು ನಮಗೆ ಅಚ್ಚರಿ ಮೂಡಿಸಿದೆ ಎಂದರು.

ಇರಾನ್ ತನ್ನ ತಕ್ಷಣದ ಗುರಿಗಳನ್ನು ಮೀರಿ ದಾಳಿ ಮಾಡುತ್ತದೆ ಎಂದು ಯುಎಸ್ ನಿರೀಕ್ಷಿಸಿರಲಿಲ್ಲ. ಆ ರಾಷ್ಟ್ರದ ಪ್ರತಿಕ್ರಿಯೆ ಅನಿರೀಕ್ಷಿತ ಮತ್ತು ಆಶ್ಚರ್ಯಕರವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿನ ಈ ಎಲ್ಲಾ ರಾಷ್ಟ್ರಗಳ ಮೇಲೆ ಇರಾನ್ ದಾಳಿ ಮಾಡಬಾರದಿತ್ತು. ಇರಾನ್ ಗುರಿಯಾಗಿಸಿದ ಕೆಲವು ಕ್ಷಿಪಣಿಗಳು ಇತರ ಕೊಲ್ಲಿ ರಾಷ್ಟ್ರಗಳ ಮೇಲೆ ಅಪ್ಪಳಿಸಿವೆ ಎಂದು ಅವರು ತಿಳಿಸಿದ್ದಾರೆ.

ಆದಾಗ್ಯೂ, ಇರಾನ್ ವಿರುದ್ಧದ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ಅಮೆರಿಕದ ದಾಳಿಯು ಇರಾನ್ ನ ಸೇನಾ ಸಾಮರ್ಥ್ಯಗಳನ್ನು ಸೀಮಿತಗೊಳಿಸಲು ನೆರವಾಗಿದೆ ಮತ್ತು ಕೊಲ್ಲಿ ರಾಷ್ಟ್ರಗಳಿಗೆ ಎದುರಾಗಿದ್ದ ಬೆದರಿಕೆಯನ್ನು ಕಡಿಮೆ ಮಾಡಿದೆ ಎಂದಿದ್ದಾರೆ.

Donald Trump
West Asia conflict: ಬಾಗ್ದಾದ್​ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋನ್-ಕ್ಷಿಪಣಿ ದಾಳಿ; ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ

ಸದ್ಯ ನಡೆಯುತ್ತಿರುವ ಯುದ್ಧ ತಕ್ಷಣ ನಿಲ್ಲದಿದ್ದರೂ ಮುಂದೆ ಅಂತ್ಯವಾಗುವ ಸಾಧ್ಯತೆಯಿದೆ ಎಂದು ಟ್ರಂಪ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com