WEST ASIA conflict: ಇಸ್ಲಾಮಿಕ್ ರಾಷ್ಟ್ರಗಳು ಒಂದಾದ್ರೆ...ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕೊಟ್ಟ ಸಂದೇಶವೇನು?

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ವಿದೇಶಿ ಉಪಸ್ಥಿತಿಯ ಅಗತ್ಯವನ್ನು ಖಂಡಿಸಿದ ಅವರು 'ಮಧ್ಯಪ್ರಾಚ್ಯದ ಇಸ್ಲಾಮಿಕ್ ಅಸೆಂಬ್ಲಿ' ರಚನೆಗೆ ಒತ್ತಾಯಿಸಿದ್ದಾರೆ. ದೇಶಗಳು 'ನಮ್ಮ ಶತ್ರುಗಳು ಬೀಸುವ ಬಲೆಗೆ ಬೀಳಬಾರದು' ಎಂದಿದ್ದಾರೆ.
Iranian President Masoud Pezeshkian
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್
Updated on

ಟೆಹರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ 24ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ನೌರುಜ್ ಮತ್ತು ಈದ್ ಅಲ್-ಫಿತರ್ ಸಂದರ್ಭದಲ್ಲಿ ಇಸ್ಲಾಮಿಕ್ ರಾಷ್ಟ್ರಗಳು ಒಂದಾಗಲು ಇರಾನ್ ಕರೆ ನೀಡಿದೆ. ದೇಶ ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಸಂಘರ್ಷವನ್ನು ಬಯಸುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಶನಿವಾರ ಹೇಳಿದ್ದಾರೆ.

ಇರಾನ್ ಮೇಲೆ ಯುಎಸ್-ಇಸ್ರೇಲ್ ದಾಳಿಯ ಹಿನ್ನೆಲೆಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಸಂತಾಪ ಸೂಚಿಸಿದ್ದಾರೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ವಿದೇಶಿ ಉಪಸ್ಥಿತಿಯ ಅಗತ್ಯವನ್ನು ಖಂಡಿಸಿದ ಅವರು 'ಮಧ್ಯಪ್ರಾಚ್ಯದ ಇಸ್ಲಾಮಿಕ್ ಅಸೆಂಬ್ಲಿ' ರಚನೆಗೆ ಒತ್ತಾಯಿಸಿದ್ದಾರೆ. ದೇಶಗಳು 'ನಮ್ಮ ಶತ್ರುಗಳು ಬೀಸುವ ಬಲೆಗೆ ಬೀಳಬಾರದು' ಎಂದಿದ್ದಾರೆ.

ಟೆಹ್ರಾನ್ ಈ ಪ್ರದೇಶದಲ್ಲಿ ಪ್ರಕ್ಷುಬ್ಧತೆಯನ್ನು ಬಯಸುವುದಿಲ್ಲ ಮತ್ತು ದೇಶಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಗುರಿಯನ್ನು ಹೊಂದಿಲ್ಲ ಎಂದು ಇರಾನ್ ಅಧ್ಯಕ್ಷರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನೆರೆಹೊರೆಯವರು ಒಗ್ಗೂಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಪ್ರದೇಶದಲ್ಲಿನ ಪ್ರಕ್ಷುಬ್ಧತೆ, ಅಸ್ಥಿರತೆ, ನರಮೇಧದ ಕೃತ್ಯಗಳು, ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಇಸ್ರೇಲ್ ಹೊಣೆಹೊರಬೇಕು ಎಂದು ಆಗ್ರಹಿಸಿದ್ದಾರೆ.

ಈ ಪ್ರದೇಶದಲ್ಲಿ ಪ್ರಕ್ಷುಬ್ಧತೆಯನ್ನು ಬಯಸುವುದಿಲ್ಲ ಎಂದು ನಾವು ಜಗತ್ತಿಗೆ ಘೋಷಿಸುತ್ತೇವೆ. ಯಾವುದೇ ದೇಶವು ತನ್ನನ್ನು ರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಒತ್ತಾಯಿಸುವುದನ್ನು ನಾವು ಬಯಸುವುದಿಲ್ಲ, ದಾಳಿ ನಡೆಸಲಾಗುತ್ತದೆಯೇ ಅಥವಾ ಇಲ್ಲವೇ ಂದು ನಿರಂತರವಾಗಿ ಕಾದು ನೋಡುತ್ತೇವೆ ಮತ್ತು ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ನಾವು ಯಾವುದೇ ರೀತಿಯಲ್ಲಿ ಯೋಚಿಸಿಲ್ಲ ಎಂದು ಪೆಜೆಶ್ಕಿಯಾನ್ ಹೇಳಿಕೆ ನೀಡಿರುವುದಾಗಿ ಶ್ರೀಲಂಕಾದಲ್ಲಿನ ಇರಾನ್ ರಾಯಭಾರಿ ಕಚೇರಿ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

"ಇದನ್ನು ನಾವು ಒಟ್ಟಾಗಿ ಕೆಲಸ ಮಾಡುವ ಮೂಲಕ ಪರಿಹರಿಸಬಹುದು. ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ರಾಷ್ಟ್ರಗಳಿಗೆ ಇದನ್ನು ಹೇಳಬಯಸುತ್ತೇನೆ. ಈ ಪ್ರದೇಶದಲ್ಲಿ ಅಸ್ಥಿರ, ನರಮೇಧ, ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಇ ಇರಾನ್ ಕಾರಣ ಎಂದು ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಬದಲು ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇರಾನ್ ಇತರ ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷವನ್ನು ಬಯಸುವುದಿಲ್ಲ. ಶತ್ರುಗಳು ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೆಜೆಶ್ಕಿಯಾನ್ ಆರೋಪಿಸಿದ್ದಾರೆ.

ಪವಿತ್ರ ರಂಜಾನ್ ತಿಂಗಳಿನಲ್ಲಿ ಇರಾನ್‌ನ ಸರ್ವೋಚ್ಚ ನಾಯಕ, ಕಮಾಂಡರ್‌ಗಳು, ಮಂತ್ರಿಗಳು ಮತ್ತು ನಾಗರಿಕರು ಹೇಗೆ ಕೊಲ್ಲಲ್ಪಟ್ಟರು ಎಂಬುದನ್ನು ವಿವರಿಸಿದ್ದಾರೆ. ಮಿನಾಬ್ ಶಾಲೆಯಲ್ಲಿ ನಡೆದ ದಾಳಿಯಲ್ಲಿ ವಿದ್ಯಾರ್ಥಿಗಳ ಸಾವನ್ನು ತಮ್ಮ ಸಂದೇಶದಲ್ಲಿ ನೆನಪಿಸಿಕೊಂಡಿದ್ದಾರೆ. ಜನರು ಏಕತೆ ಮತ್ತು ರಾಷ್ಟ್ರೀಯ ಒಗ್ಗಟ್ಟಿನಿಂದ ಒಗ್ಗೂಡಬೇಕೆಂದು ಒತ್ತಾಯಿಸಿದ್ದಾರೆ.

Iranian President Masoud Pezeshkian
ಪಶ್ಚಿಮ ಏಷ್ಯಾ ಸಂಘರ್ಷ: ಗಲ್ಫ್‌ನಲ್ಲಿ ಆರು ಭಾರತೀಯರು ಸಾವು, ಒಬ್ಬರು ನಾಪತ್ತೆ; MEA

"ನಾವು ಎಲ್ಲಾ ದ್ವೇಷಗಳು, ಅಸಮಾಧಾನಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗಿಡಲು ಶ್ರಮಿಸಬೇಕು. ಈ ವರ್ಷ ನಮಗೆ ಏಕತೆ, ಒಗ್ಗಟ್ಟು ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಪ್ರತಿಬಿಂಬಿಸುವ ನೌರುಜ್ ಅಗತ್ಯವಿದೆ. ನಾವು ದ್ವೇಷವನ್ನು ತ್ಯಜಿಸಬೇಕು, ಕಷ್ಟಗಳನ್ನು ಜಯಿಸಬೇಕು ಮತ್ತು ಈ ಬಿರುಗಾಳಿಗೆ ಕೈಜೋಡಿಸಬೇಕು. ನೆರೆಹೊರೆಯ ರಾಷ್ಟ್ರಗಳೊಂದಿಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ದೇಶವು ಸಿದ್ಧವಾಗಿದೆ ಎಂದು ಹೇಳಿದ್ದು, ಈ ಪ್ರದೇಶದಲ್ಲಿ ಸ್ಥಿರತೆಯನ್ನು ಖಾತರಿಗೆ ದೇಶಗಳ ನಡುವೆ ಇಸ್ಲಾಮಿಕ್ ಭದ್ರತಾ ಚೌಕಟ್ಟನ್ನು ಸ್ಥಾಪಿಸಲು ಅವರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com