ಹಾರ್ಮುಜ್ ಜಲಸಂಧಿ ಮೇಲೆ ನಿಯಂತ್ರಣ: ತೆರಿಗೆ ವ್ಯವಸ್ಥೆ ಜಾರಿಗೆ ಇರಾನ್ ಮುಂದು, ವಿರೋಧವಾಗಿ G7 ಒಕ್ಕೂಟ ರೂಪಿಸಲು ರೂಬಿಯೋ ಕರೆ

ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ಮತ್ತು ಇಸ್ರೇಲ್ ದಾಳಿಗಳ ನಂತರ ಉದ್ವಿಗ್ನತೆ ಹೆಚ್ಚಾಗಿದೆ. ಈ ಪರಿಸ್ಥಿತಿಯನ್ನು ಬಳಸಿಕೊಂಡು ಇರಾನ್ ಹಡಗುಗಳಿಗೆ “ಟೋಲ್” (ಶುಲ್ಕ) ವಿಧಿಸುವ ವ್ಯವಸ್ಥೆ ತರಲು ಯತ್ನಿಸುತ್ತಿದೆ.
US Secretary of State Marco Rubio
ಅಮೆರಿಕ ಕಾರ್ಯದರ್ಶಿ ಮಾರ್ಕೋ ರುಬಿಯೋ
Updated on

ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಸಾಧಿಸಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, G7 ರಾಷ್ಟ್ರಗಳು ಒಟ್ಟಾಗಿ ಒಂದು ಒಕ್ಕೂಟ ರೂಪಿಸಬೇಕೆಂದು ಅಮೆರಿಕ ಕಾರ್ಯದರ್ಶಿ ಮಾರ್ಕೋ ರುಬಿಯೋ ಕರೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿ ಜಗತ್ತಿನ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಜಗತ್ತಿನ ಒಟ್ಟು ತೈಲ ಸಾಗಣೆಯ ಸುಮಾರು 20% ಈ ಮಾರ್ಗದ ಮೂಲಕ ಸಾಗುತ್ತದೆ. ಆದ್ದರಿಂದ ಇಲ್ಲಿ ಯಾವುದೇ ಅಡಚಣೆ ಉಂಟಾದರೆ ಜಾಗತಿಕ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ.

ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ಮತ್ತು ಇಸ್ರೇಲ್ ದಾಳಿಗಳ ನಂತರ ಉದ್ವಿಗ್ನತೆ ಹೆಚ್ಚಾಗಿದೆ. ಈ ಪರಿಸ್ಥಿತಿಯನ್ನು ಬಳಸಿಕೊಂಡು ಇರಾನ್ ಹಡಗುಗಳಿಗೆ “ಟೋಲ್” (ಶುಲ್ಕ) ವಿಧಿಸುವ ವ್ಯವಸ್ಥೆ ತರಲು ಯತ್ನಿಸುತ್ತಿದೆ ಎಂದು ಅಮೆರಿಕಾ ಆರೋಪಿಸಿದೆ.

ಫ್ರಾನ್ಸ್‌ನಲ್ಲಿ ನಡೆದ ಜಿ7 (G7) ರಾಷ್ಟ್ರಗಳ ಮಹತ್ವದ ಸಭೆಯಲ್ಲಿ ಭಾಗವಹಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೋ ಅವರು, ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ಕುರಿತು ಕಠಿಣ ನಿಲುವು ವ್ಯಕ್ತಪಡಿಸಿದರು.

ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಅಂತರರಾಷ್ಟ್ರೀಯ ಹಡಗುಗಳ ಮೇಲೆ ಇರಾನ್ ಅಕ್ರಮವಾಗಿ "ಸುಂಕ" ಅಥವಾ ತೆರಿಗೆ ವಿಧಿಸಲು ಮುಂದಾಗಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.

ರೂಬಿಯೊ ಅವರ ಪ್ರಕಾರ, ಇದು ಕೇವಲ ಕಾನೂನುಬಾಹಿರ ಮಾತ್ರವಲ್ಲ, ಜಗತ್ತಿನ ವ್ಯಾಪಾರ ಮತ್ತು ತೈಲ ಸರಬರಾಜಿಗೆ ದೊಡ್ಡ ಅಪಾಯ. ಆದ್ದರಿಂದ ಇದನ್ನು ತಡೆಯಲು ಅಮೆರಿಕಾ ಮಾತ್ರವಲ್ಲ, ಇತರೆ ಬಲಿಷ್ಠ ರಾಷ್ಟ್ರಗಳು, ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ಮತ್ತು ಜಿ7 ಮಿತ್ರರಾಷ್ಟ್ರಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

US Secretary of State Marco Rubio
ರೋಮಾಂಚಕಾರಿ ಘೋಷಣೆಗೆ ಕಾಯ್ತಿರಿ ಅಂದಿದ್ದ ಅಮೆರಿಕಾಗೆ ಶಾಕ್: ಗುಪ್ತಚರ ಸಂಸ್ಥೆಯನ್ನೇ ಟಾರ್ಗೆಟ್ ಮಾಡಿದ ಇರಾನ್!: ಅಲ್ಲಿ ಆಗಿದ್ದೇನು?

ಇದೇ ವೇಳೆ G7 ಸಭೆಯಲ್ಲಿ ಬ್ರಿಟನ್, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವು ದೇಶಗಳು ಈ ವಿಷಯದಲ್ಲಿ ಸಹಕಾರ ಸೂಚಿಸಿದ್ದಾಗಿ ರೂಬಿಯೊ ತಿಳಿಸಿದ್ದಾರೆ.

ಈ ಒಕ್ಕೂಟದ ಮೂಲಕ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಮತ್ತು ಟೋಲ್ ರಹಿತ ಸಾಗಣೆ ಮತ್ತೆ ಆರಂಭವಾಗಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಜಲಸಂಧಿಯನ್ನು ಮುಕ್ತವಾಗಿಡಲು ಅಂತರರಾಷ್ಟ್ರೀಯ ಒಕ್ಕೂಟವೊಂದನ್ನು ರಚಿಸುವ ಕುರಿತು ಯುರೋಪಿಯನ್ ನಾಯಕರೊಂದಿಗೆ ರುಬಿಯೋ ಸುದೀರ್ಘ ಚರ್ಚೆ ನಡೆಸಿದರು.

ಈ ವೇಳೆ G7 ರಾಷ್ಟ್ರಗಳು ಯುದ್ಧವನ್ನು ಶೀಘ್ರ ಅಂತ್ಯಗೊಳಿಸಲು ಕರೆ ನೀಡಿದ್ದು, ನಾಗರಿಕರ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿವೆ.

ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಏಪ್ರಿಲ್ 6 ರವರೆಗೆ ಅಂತಿಮ ಗಡುವು ನೀಡಿದ್ದು, ಅಷ್ಟರೊಳಗೆ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ ಇರಾನ್‌ನ ಪ್ರಮುಖ ವಿದ್ಯುತ್ ಕೇಂದ್ರಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದಾರೆ.

ಈ ಬಿಕ್ಕಟ್ಟಿನಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಬ್ಯಾರೆಲ್ ತೈಲದ ಬೆಲೆ 100 ಡಾಲರ್ ಗಡಿ ದಾಟಿದೆ. ಯುರೋಪಿಯನ್ ಒಕ್ಕೂಟದ ದೇಶಗಳು ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದು, ಈ ಸಮಸ್ಯೆಯನ್ನು ಯುದ್ಧದ ಬದಲು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಲು ಒತ್ತು ನೀಡುತ್ತಿವೆ.

ಮಾರ್ಕ್ ರುಬಿಯೋ ಅವರು ಇರಾನ್ ಮೇಲೆ ಒತ್ತಡ ಹೇರಲು ಚೀನಾದ ಸಹಾಯವನ್ನೂ ಕೋರಿದ್ದು, ಮುಂದಿನ ಕೆಲವು ದಿನಗಳು ಈ ವಲಯದ ಭದ್ರತೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com