ಕದನ ವಿರಾಮ ಉಲ್ಲಂಘಿಸಿ ಲೆಬನಾನ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ; 380 ಜನ ಸಾವು

ಮಾರ್ಚ್ 2 ರಂದು ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವೆ ಯುದ್ಧ ಭುಗಿಲೆದ್ದ ನಂತರ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಒಟ್ಟು 2,882 ಜನರು ಸಾವನ್ನಪ್ಪಿದ್ದಾರೆ, ಇದರಲ್ಲಿ 279 ಮಹಿಳೆಯರು ಮತ್ತು 200 ಮಕ್ಕಳು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.
Israeli strikes on Lebanon have killed 380 people despite ceasefire
ಲೆಬನಾನ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ
Updated on

ಬೈರುತ್: ಏಪ್ರಿಲ್ 17 ರಂದು ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವೆ ಕದನ ವಿರಾಮ ಘೋಷಿಸಿದ್ದರೂ, ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರೆಸಿದ್ದು, 380 ಜನರನ್ನು ಕೊಂದಿದೆ ಎಂದು ಲೆಬನಾನ್‌ನ ಆರೋಗ್ಯ ಸಚಿವ ರಕನ್ ನಸ್ಸೆರೆದ್ದೈನ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 2 ರಂದು ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವೆ ಯುದ್ಧ ಭುಗಿಲೆದ್ದ ನಂತರ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಒಟ್ಟು 2,882 ಜನರು ಸಾವನ್ನಪ್ಪಿದ್ದಾರೆ, ಇದರಲ್ಲಿ 279 ಮಹಿಳೆಯರು ಮತ್ತು 200 ಮಕ್ಕಳು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

ಕದನ ವಿರಾಮದ ನಂತರವೂ ಇಸ್ರೇಲ್ ದಾಳಿ ಮುಂದುವರೆಸಿದ್ದು, "380 ಜನ ಸಾವನ್ನಪ್ಪಿದ್ದಾರೆ ಮತ್ತು 1,122 ಜನ ಗಾಯಗೊಂಡಿದ್ದಾರೆ" ಎಂದು ನಸ್ಸೆರೆದ್ದೈನ್ ಅವರು ತಿಳಿಸಿದ್ದಾರೆ.

Israeli strikes on Lebanon have killed 380 people despite ceasefire
ಕದನ ವಿರಾಮ ಇದ್ದರೂ, ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ನಾಲ್ವರು ಸಾವು!

ಸಚಿವಾಲಯದ ಅಧಿಕಾರಿಯೊಬ್ಬರು AFP ಗೆ ನೀಡಿದ ಮಾಹಿತಿಯ ಪ್ರಕಾರ, ಈ ಸಂಖ್ಯೆಯಲ್ಲಿ 39 ಮಹಿಳೆಯರು ಮತ್ತು 22 ಮಕ್ಕಳು ಸೇರಿದ್ದಾರೆ.

ವಾಷಿಂಗ್ಟನ್ ಬಿಡುಗಡೆ ಮಾಡಿದ ಕದನ ವಿರಾಮದ ನಿಯಮಗಳ ಅಡಿಯಲ್ಲಿ, ಇಸ್ರೇಲ್ "ಯೋಜಿತ, ಸನ್ನಿಹಿತ ಅಥವಾ ನಡೆಯುತ್ತಿರುವ ದಾಳಿಗಳ" ವಿರುದ್ಧ ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿದೆ.

ಒಟ್ಟಾರೆ ಸಾವಿನ ಸಂಖ್ಯೆಯಲ್ಲಿ ಸುಮಾರು 108 ತುರ್ತು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ. ಆದರೆ ಸಂಘರ್ಷದ ಆರಂಭದಿಂದಲೂ 249 ಜನ ಗಾಯಗೊಂಡಿದ್ದಾರೆ ಮತ್ತು "16 ಆಸ್ಪತ್ರೆಗಳು ಹಾನಿಗೊಳಗಾಗಿವೆ" ಎಂದು ನಾಸ್ರೆದ್ದೈನ್ ಮಾಹಿತಿ ನೀಡಿದ್ದಾರೆ.

"ಇದು ಒಂದು ಹತ್ಯಾಕಾಂಡ... ಈ(ಆಂಬ್ಯುಲೆನ್ಸ್) ವಾಹನಗಳಲ್ಲಿ ಯಾವುದೇ ಶಸ್ತ್ರಸಜ್ಜಿತ ವ್ಯಕ್ತಿಗಳು ಅಥವಾ ಹೋರಾಟಗಾರರು ಇಲ್ಲ, ಇಸ್ರೇಲ್ ಈ(ಆಂಬ್ಯುಲೆನ್ಸ್) ವಾಹನಗಳಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಅಥವಾ ಹೋರಾಟಗಾರರು ಇದ್ದಾರೆ ಎಂದು ಹೇಳುತ್ತಿದೆ. ಆದರೆ ಅದರಲ್ಲಿ ಕೇವಲ ವೈದ್ಯಕೀಯ ಉಪಕರಣಗಳು ಮತ್ತು ವೈದ್ಯಕೀಯ ಸಿಬ್ಬಂದಿ ಇದ್ದರು" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com