US Midterm Polls: ಗವರ್ನರ್ ಚುನಾವಣೆಯಲ್ಲಿ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿಗೆ ಸೋಲು, ಇತಿಹಾಸ ನಿರ್ಮಿಸಿದ ಆಮಿ!

ಆಮಿ ಅವರು ವಿವೇಕ್ ರಾಮಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಳೆದ 20 ವರ್ಷಗಳಲ್ಲಿ ಈ ಸ್ಥಾನವನ್ನು ಗೆದ್ದ ಮೊದಲ ಡೆಮೋಕ್ರಾಟಿಕ್ ಮತ್ತು ರಾಜ್ಯದ ಉನ್ನತ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
US Midterm Polls: Vivek Ramaswamy, Indian-Origin Republican, Loses Ohio Governor's Race, Democrat Amy Acton Wins
ಆಮಿ - ವಿವೇಕ್ ರಾಮಸ್ವಾಮಿ
Updated on: 

ನವದೆಹಲಿ: ಭಾರತೀಯ ಮೂಲದ ರಿಪಬ್ಲಿಕನ್ ಪಕ್ಷದ ವಿವೇಕ್ ರಾಮಸ್ವಾಮಿ ಅವರು ಓಹಿಯೋ ಗವರ್ನರ್ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಪಕ್ಷದ ಆಮಿ ಆಕ್ಟನ್ ಅವರು ವಿರುದ್ಧ ಸೋಲು ಅನುಭವಿಸಿದ್ದಾರೆ.

ಆಮಿ ಅವರು ವಿವೇಕ್ ರಾಮಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಳೆದ 20 ವರ್ಷಗಳಲ್ಲಿ ಈ ಸ್ಥಾನವನ್ನು ಗೆದ್ದ ಮೊದಲ ಡೆಮೋಕ್ರಾಟಿಕ್ ಮತ್ತು ರಾಜ್ಯದ ಉನ್ನತ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಚುನಾವಣಾ ಫಲಿತಾಂಶದ ಪ್ರಕಾರ, ಡೆಮಾಕ್ರಟಿಕ್ ಪಕ್ಷದ ಆಮಿ ಆಕ್ಟನ್ ಅವರು ಶೇ. 50.92 ರಷ್ಟು ಮತಗಳನ್ನು ಪಡೆದು ಜಯಭೇರಿ ಬಾರಿಸಿದರೆ, ಪ್ರತಿಸ್ಪರ್ಧಿ ವಿವೇಕ್ ರಾಮಸ್ವಾಮಿ ಶೇ. 45.73 ರಷ್ಟು ಮತಗಳನ್ನಷ್ಟೇ ಗಳಿಸಲು ಶಕ್ತರಾದರು. ಈ ಐತಿಹಾಸಿಕ ವಿಜಯದೊಂದಿಗೆ ಆಮಿ ಆಕ್ಟನ್ ಓಹಿಯೋ ರಾಜ್ಯದ ಮೊದಲ ಮಹಿಳಾ ಗವರ್ನರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

US Midterm Polls: Vivek Ramaswamy, Indian-Origin Republican, Loses Ohio Governor's Race, Democrat Amy Acton Wins
ಅಮೆರಿಕ ಮಧ್ಯಂತರ ಚುನಾವಣೆ: ಡೆಮೋಕ್ರಾಟ್ ಪಕ್ಷ ಮುನ್ನಡೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹಿನ್ನಡೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವೇಕ್ ರಾಮಸ್ವಾಮಿ ಪರ ಬಹಿರಂಗವಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಅಷ್ಟೇ ಅಲ್ಲದೆ, ಮಾಜಿ ಫಾರ್ಮಾಸ್ಯುಟಿಕಲ್ ಉದ್ಯಮಿಯಾದ ರಾಮಸ್ವಾಮಿ ತಮ್ಮ ವೈಯಕ್ತಿಕ ಸಂಪತ್ತಿನಿಂದಲೇ ಬರೋಬ್ಬರಿ 36 ಮಿಲಿಯನ್ ಡಾಲರ್‌ಗೂ ಅಧಿಕ ಹಣವನ್ನು ಪ್ರಚಾರಕ್ಕೆ ಸುರಿದಿದ್ದರು. ಆದರೆ ಟ್ರಂಪ್ ಬೆಂಬಲವಾಗಲಿ ಅಥವಾ ರಾಮಸ್ವಾಮಿಯವರ ಆರ್ಥಿಕ ಬಲವಾಗಲಿ ಮತದಾರರ ಮೇಲೆ ನಿರೀಕ್ಷಿತ ಪ್ರಭಾವ ಬೀರಲಿಲ್ಲ. ಆಮಿ ಆಕ್ಟನ್ ಅವರ ಜನಪ್ರಿಯತೆ ಹಾಗೂ ವ್ಯವಸ್ಥಿತ ಪ್ರಚಾರದ ಮುಂದೆ ಇವೆಲ್ಲವೂ ಮಂಕಾದವು.

ಚುನಾವಣೆಯ ಅಂತಿಮ ಹಂತದಲ್ಲಿ ರಾಮಸ್ವಾಮಿ ಅವರ ಪ್ರಚಾರ ತಂಡ ಬಿಡುಗಡೆ ಮಾಡಿದ ಟಿವಿ ಜಾಹೀರಾತು ಅವರ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. ಸುಮಾರು 4 ಮಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಿಸಲಾದ ಈ ಜಾಹೀರಾತಿನಲ್ಲಿ ಆಮಿ ಆಕ್ಟನ್ ಅವರ ತಾಯಿಯನ್ನು ಬಳಸಿಕೊಂಡು, ಆಮಿ ಸುಳ್ಳುಗಾರ್ತಿ ಎಂದು ಬಿಂಬಿಸಲು ಯತ್ನಿಸಲಾಗಿತ್ತು.ಬಾಲ್ಯದಲ್ಲಿ ಆಮಿ ಎದುರಿಸಿದ್ದ ಕೌಟುಂಬಿಕ ಲೈಂಗಿಕ ದೌರ್ಜನ್ಯದ ಕಹಿ ಘಟನೆಗಳನ್ನು ರಾಜಕೀಯ ಲಾಭಕ್ಕಾಗಿ ಎಳೆದು ತಂದಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಯಿತು. ಕೇವಲ ಡೆಮಾಕ್ರಟ್‌ಗಳಷ್ಟೇ ಅಲ್ಲದೆ, ರಿಪಬ್ಲಿಕನ್ ಪಕ್ಷದ ಪ್ರಮುಖ ನಾಯಕರು ಕೂಡ ಈ ತಂತ್ರವನ್ನು ತೀವ್ರವಾಗಿ ಖಂಡಿಸಿದರು. ಈ ವಿವಾದವು ರಾಮಸ್ವಾಮಿ ವಿರುದ್ಧ ಮತದಾರರಲ್ಲಿ ನಕಾರಾತ್ಮಕ ಅಲೆ ಎಬ್ಬಿಸಿತು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X