Flydubai ಕಾಕ್‌ಪಿಟ್ ದಾಳಿ: ಸಹ ಪೈಲಟ್ ಗುರುತು ಬಹಿರಂಗ

ಕಳೆದ ವರ್ಷ “ಆಮೂಲಾಗ್ರ ವಿಚಾರಧಾರೆ” ಹೊಂದಿರುವ ಬಗ್ಗೆ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಆತನನ್ನು ಒಮಾನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಹಿಂದಿನ ಉದ್ಯೋಗದಿಂದ ತೆಗೆದುಹಾಕಲಾಗಿತ್ತು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
Omani Co-pilot, who reportedly attacked Captian Smit Machchar in the Flydubai incident has been identified as Hamam Al Hamami.
ಫ್ಲೈದುಬೈ ಘಟನೆಯಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ದಾಳಿ ನಡೆಸಿದ್ದ ಎನ್ನಲಾದ ಒಮಾನ್‌ನ ಸಹ ಪೈಲಟ್‌ ನ್ನು ಹಮಾಮ್ ಅಲ್ ಹಮ್ಮಾಮಿ ಎಂದು ಗುರುತಿಸಲಾಗಿದೆ.
Updated on: 

ಮೊನ್ನೆ ಬುಧವಾರ ದುಬೈ-ಟೆಲ್ ಅವೀವ್ ಮಾರ್ಗದ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ದಾಳಿ ನಡೆಸಿ, ವಿಮಾನವನ್ನು ಹೈಜಾಕ್‌/ಹಾನಿಗೊಳಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಫ್ಲೈದುಬೈ ಸಹ ಪೈಲಟ್‌ ನ ಗುರುತು ಬಹಿರಂಗಪಡಿಸಲಾಗಿದೆ.

ಪೈಲಟ್ ಮೇಲೆ ದಾಳಿ ನಡೆಸಿದ ಸಹ ಪೈಲಟ್ ನ್ನು ಒಮಾನ್ ಪ್ರಜೆ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿದೆ ಎಂದು ಅಮೆರಿಕದ ಮಾಧ್ಯಮ ವರದಿ ತಿಳಿಸಿದೆ.

Omani Co-pilot, who reportedly attacked Captian Smit Machchar in the Flydubai incident has been identified as Hamam Al Hamami.
FlyDubai ವಿಮಾನ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಸಹ ಪೈಲಟ್‌ ಉಗ್ರವಾದ ಹಿನ್ನಲೆಯವನೇ?

ಕಳೆದ ವರ್ಷ “ಆಮೂಲಾಗ್ರ ವಿಚಾರಧಾರೆ” ಹೊಂದಿರುವ ಬಗ್ಗೆ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಆತನನ್ನು ಒಮಾನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಹಿಂದಿನ ಉದ್ಯೋಗದಿಂದ ತೆಗೆದುಹಾಕಲಾಗಿತ್ತು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಇಸ್ರೇಲಿ ಮಾಧ್ಯಮಗಳ ವರದಿ ಪ್ರಕಾರ, ಒಮಾನ್ ಪ್ರಜೆಯಾಗಿರುವ ಈ ವ್ಯಕ್ತಿಯ ಹೆಸರು ಹಮಾಮ್ ಅಲ್-ಹಮ್ಮಾಮಿ. ಒಮಾನ್ ತಂದೆ ಮತ್ತು ಸಿರಿಯಾ ಮೂಲದ ತಾಯಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆತ ಜನಿಸಿದ್ದಾನೆ ಎನ್ನಲಾಗಿದೆ. ಅಲ್-ಹಮ್ಮಾಮಿ ತನ್ನ ಜೀವನದ ಹಲವು ವರ್ಷಗಳನ್ನು ಯುಎಇಯಲ್ಲಿ ಕಳೆದಿದ್ದಾನೆ. ಇಸ್ರೇಲಿ ಅಧಿಕಾರಿಯೊಬ್ಬರೂ ಅಲ್-ಹಮ್ಮಾಮಿ ಗುರುತನ್ನು ದೃಢಪಡಿಸಿದ್ದಾರೆ. ಸೌದಿ ಅರೇಬಿಯಾದ ಸರ್ಕಾರಿ ಮಾಧ್ಯಮವೂ ಇದೇ ಮಾಹಿತಿಯನ್ನು ವರದಿ ಮಾಡಿದೆ.

ಹಮಾಮ್ ಅಲ್-ಹಮ್ಮಾಮಿ ಹೆಸರಿನ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಆತ ಒಮಾನ್ ಏರ್ನಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದಾಗಿ ತಿಳಿಸಲಾಗಿತ್ತು. 2025ರ ಫೆಬ್ರವರಿಯಲ್ಲಿ ಒಮಾನ್ ಏರ್ ತೊರೆದ ಬಳಿಕ, 2025ರ ಜೂನ್‌ನಲ್ಲಿ ರಾಯಲ್ ಏರ್ ಮರೋಕ್ ಸೇರಿ, ಕಳೆದ ಜನವರಿಯಲ್ಲಿ ಅಲ್ಲಿಂದ ನಿರ್ಗಮಿಸಿದ್ದಾಗಿ ಪ್ರೊಫೈಲ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಫ್ಲೈದುಬೈನಲ್ಲಿ ಆತ ಕೆಲಸ ಮಾಡಿದ್ದ ಬಗ್ಗೆ ಆ ಪುಟದಲ್ಲಿ ಯಾವುದೇ ಉಲ್ಲೇಖ ಇರಲಿಲ್ಲ. ಆದಾಗ್ಯೂ, ಆ ಪ್ರೊಫೈಲ್ ಅಲ್-ಹಮ್ಮಾಮಿಗೆ ಸೇರಿದ್ದೇ ಎಂದು ತಮ್ಮ ಮೂಲವೊಂದು ದೃಢಪಡಿಸಿದೆ ಎಂದು CNN ವರದಿ ಮಾಡಿದೆ. ಬಳಿಕ ಆ ಲಿಂಕ್ಡ್‌ಇನ್ ಪುಟವನ್ನು ಅಳಿಸಲಾಗಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶಂಕಿತ ವ್ಯಕ್ತಿ “ಇಸ್ಲಾಮಿಸ್ಟ್ ಮೂಲಭೂತವಾದಿ ವಿಚಾರಧಾರೆಗೆ ಆಮೂಲಾಗ್ರವಾಗಿ ಒಳಗಾಗಿದ್ದ” ಎಂದು ಹೇಳಿದ ಕೆಲವೇ ದಿನಗಳ ಬಳಿಕ ಈ ವಿವರಗಳು ಬಹಿರಂಗವಾಗಿವೆ.

ಅಲ್-ಹಮ್ಮಾಮಿ ಫ್ಲೈದುಬೈನಲ್ಲಿ ಕೇವಲ ಎಂಟು ತಿಂಗಳು ಕೆಲಸ ಮಾಡಿದ್ದ ಎಂದು ಇಸ್ರೇಲಿ ಅಧಿಕಾರಿಯೊಬ್ಬರು CNNಗೆ ತಿಳಿಸಿದ್ದಾರೆ. ಮತ್ತೊಂದೆಡೆ, ಆರೋಪಿತ ದಾಳಿಕೋರ ಈ ಹಿಂದೆ ರಾಯಲ್ ಏರ್ ಮರೋಕ್‌ನಲ್ಲಿ ಕೆಲಸ ಮಾಡಿದ್ದ ಎಂದು ನಾಲ್ಕನೇ ಮೂಲವೊಂದು ತಿಳಿಸಿದೆ ಎಂದು CNN ವರದಿ ಮಾಡಿದೆ.

ಲಿಂಕ್ಡ್‌ಇನ್ ಪೋಸ್ಟ್‌ಗಳು

ಸಹ ಪೈಲಟ್‌ನ ಹಿಂದಿನ ಉದ್ಯೋಗದ ಕುರಿತ ಬಹಿರಂಗ ಮಾಹಿತಿಯು ವಿಮಾನಯಾನ ಸಂಸ್ಥೆಗಳಲ್ಲಿ ನೇಮಕಾತಿ ಸಂದರ್ಭದಲ್ಲಿ ಹಿನ್ನೆಲೆ ಪರಿಶೀಲನೆಯ ಮಹತ್ವದ ಬಗ್ಗೆ ಆತಂಕಗಳನ್ನು ಹುಟ್ಟುಹಾಕಿದೆ. ತನಿಖೆ ನಡೆಯುತ್ತಿರುವುದರಿಂದ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಫ್ಲೈದುಬೈ ತಿಳಿಸಿದೆ.

ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಕೇವಲ ಎರಡು ಪೋಸ್ಟ್‌ಗಳನ್ನು ಪ್ರಕಟಿಸಲಾಗಿತ್ತು. ಎರಡೂ ಪೋಸ್ಟ್‌ಗಳನ್ನು ಬುಧವಾರ, ಘಟನೆ ನಡೆದ ಸುಮಾರು ಒಂಬತ್ತು ಗಂಟೆಗಳ ಬಳಿಕ ಅಲ್ಪಾವಧಿಯ ಅಂತರದಲ್ಲಿ ಪ್ರಕಟಿಸಲಾಗಿತ್ತು. ಈ ಪೋಸ್ಟ್‌ಗಳನ್ನು ಯಾರು ಪ್ರಕಟಿಸಿದರು ಅಥವಾ ಅವುಗಳನ್ನು ಮೊದಲೇ ನಿಗದಿಪಡಿಸಲಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ.

ಮೊದಲ ಪೋಸ್ಟ್‌ನಲ್ಲಿ ಬೋಯಿಂಗ್ 737 MAX ವಿಮಾನದ ಕಾಕ್‌ಪಿಟ್‌ಗಳಲ್ಲಿ ಚಿತ್ರೀಕರಿಸಲಾದ ಹಲವು ವಿಡಿಯೊ ತುಣುಕುಗಳಿದ್ದವು. ಬುಧವಾರದ ಘಟನೆಯ ಸಂದರ್ಭದಲ್ಲಿ ಸೌದಿ ಅರೇಬಿಯಾಕ್ಕೆ ಮಾರ್ಗ ಬದಲಾಯಿಸಿದ್ದ ವಿಮಾನವು ಫ್ಲೈದುಬೈಗೆ ಸೇರಿದ 737 MAX 8 ಆಗಿತ್ತು ಎಂಬುದು ಗಮನಾರ್ಹ.

ವಿಡಿಯೊ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಇಸ್ರೇಲಿ ವಿಮಾನಯಾನ ಸಂಸ್ಥೆ ಎಲ್ ಅಲ್ಗೆ ಸೇರಿದ ವಿಮಾನದತ್ತ ಜೂಮ್ ಮಾಡಿದ್ದ. ವಿಡಿಯೊದಲ್ಲಿನ ಕಾಕ್‌ಪಿಟ್ ಪರದೆಯಲ್ಲಿ OMA624 ಎಂಬ ವಿಮಾನ ಸಂಖ್ಯೆ ಮತ್ತು ಅಕ್ಟೋಬರ್ 11, 2023 ಎಂಬ ದಿನಾಂಕ ಕಾಣಿಸುತ್ತಿತ್ತು.

OMA624 ವಿಮಾನ ಸಂಖ್ಯೆ ಸಾಮಾನ್ಯವಾಗಿ ದುಬೈಯಿಂದ ಮಸ್ಕತ್‌ಗೆ ಸಂಚರಿಸುವ ವಿಮಾನಕ್ಕೆ ಸಂಬಂಧಿಸಿದ್ದು, ಆತ ಒಮಾನ್ ಏರ್‌ನಲ್ಲಿ ಕೆಲಸ ಮಾಡುತ್ತಿದ್ದ ಅವಧಿಗೂ ಆ ದಿನಾಂಕ ಹೊಂದಿಕೆಯಾಗುತ್ತದೆ. ಇತರ ವಿಡಿಯೊ ತುಣುಕುಗಳಲ್ಲಿ ಎಲ್ ಅಲ್‌ಗೆ ಸೇರಿದ ಇನ್ನಷ್ಟು ವಿಮಾನಗಳು ಹಾಗೂ ಮತ್ತೊಂದು ಇಸ್ರೇಲಿ ವಿಮಾನಯಾನ ಸಂಸ್ಥೆ ಆರ್ಕಿಯಾಗೆ ಸೇರಿದ ವಿಮಾನವೂ ಕಾಣಿಸುತ್ತವೆ.

ಇನ್ನಷ್ಟು ಆತಂಕ ಮೂಡಿಸಿದ ಸಂಗತಿಯೆಂದರೆ, ವಿಡಿಯೊದ ಕೊನೆಯಲ್ಲಿ ಒಸಾಮಾ ಬಿನ್ ಲಾಡೆನ್ ಸಾವಿನ ಬಳಿಕ ಅಲ್-ಖೈದಾ ಸಂಘಟನೆಯ ನೇತೃತ್ವ ವಹಿಸಿದ್ದ ಅಯ್ಮನ್ ಅಲ್-ಜವಾಹಿರಿ ಅವರ ಫೋಟೊ ಕಾಣಿಸುತ್ತದೆ. 2009ರಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಏಳು ಅಮೆರಿಕದ CIA ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿದಂತೆ ಒಂಬತ್ತು ಮಂದಿಯನ್ನು ಹತ್ಯೆ ಮಾಡಿದ ಹಾಗೂ ಅಲ್-ಖೈದಾಗೆ ನಿಷ್ಠನಾಗಿದ್ದ ಹುಮಾಮ್ ಖಲೀಲ್ ಅಬು-ಮುಲಾಲ್ ಅಲ್-ಬಲಾವಿ ಅವರ ಫೋಟೊ ಕೂಡ ಇತ್ತು.

ಇದೇ ವೇಳೆ, ಎರಡನೇ ಪೋಸ್ಟ್‌ನಲ್ಲಿ ಇಸ್ಲಾಂ ಧರ್ಮದ ಮೂರು ಪವಿತ್ರ ಸ್ಥಳಗಳಾದ ಮೆಕ್ಕಾ, ಮದೀನಾ ಮತ್ತು ಜೆರುಸಲೇಂಗಳನ್ನು ನಿರಂತರವಾಗಿ ಹೊಳೆಯುವ ಮಾರ್ಗವೊಂದರಿಂದ ಸಂಪರ್ಕಿಸಿರುವಂತೆ ತೋರಿಸುವ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ಚಿತ್ರವಿತ್ತು.

ಅಲ್-ಹಮ್ಮಾಮಿ ಇಂಗ್ಲೆಂಡ್‌ನ ಬಕಿಂಗ್‌ಹ್ಯಾಮ್‌ಶೈರ್ ನ್ಯೂ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದ್ದ ಎಂದು ಆತನ ಲಿಂಕ್ಡ್‌ಇನ್ ಪುಟದಲ್ಲಿ ಉಲ್ಲೇಖಿಸಲಾಗಿತ್ತು. ಇದೇ ಎರಡು ವಿಡಿಯೊಗಳನ್ನು ಅದೇ ಸಮಯದಲ್ಲಿ ಅದೇ ಹೆಸರು ಮತ್ತು ಫೋಟೊಗಳನ್ನು ಹೊಂದಿದ್ದ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಪ್ರಕಟಿಸಲಾಗಿತ್ತು. ಬಳಿಕ ಆ ಖಾತೆಯನ್ನೂ ಅಳಿಸಲಾಗಿದೆ.

ಒಮಾನ್‌ನ ಸಹ ಪೈಲಟ್‌ನ ಆನ್‌ಲೈನ್ ಚಟುವಟಿಕೆಗಳ ಬಗ್ಗೆಯೂ ಯುಎಇ ಮತ್ತು ಇಸ್ರೇಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com