BSFನಿಂದ ಇಬ್ಬರು ಪಾಕಿಗಳ ಹತ್ಯೆ: ಭಾರತೀಯ ರಾಯಭಾರಿ ಕರೆಸಿಕೊಂಡು, ಪ್ರತಿಭಟನೆ ದಾಖಲಿಸಿದ ಪಾಕಿಸ್ತಾನ!

ಪಂಜಾಬ್‌ನ ತರ್ನ್ ತಾರನ್ ಜಿಲ್ಲೆಯಲ್ಲಿ ಶುಕ್ರವಾರ ಪಾಕಿಸ್ತಾನದ ಇಬ್ಬರು ಶಂಕಿತ ಒಳನುಸುಳುಕೋರರನ್ನು ಬಿಎಸ್‌ಎಫ್ ಹೊಡೆದುರುಳಿಸಿದ ನಂತರ ಪಾಕಿಸ್ತಾನ ಈ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
Pakistan summons Indian diplomat, protests killing of two people by BSF
ಸಾಂದರ್ಭಿಕ ಚಿತ್ರ
Updated on: 

ಇಸ್ಲಾಮಾಬಾದ್: ಅಂತರರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ(BSF) ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ಪಾಕಿಸ್ತಾನ ಶನಿವಾರ ಭಾರತದ 'ಚಾರ್ಜ್ ಡಿ ಅಫೇರ್ಸ್'(ತಾತ್ಕಾಲಿಕ ರಾಯಭಾರಿ) ಅವರನ್ನು ಕರೆಸಿಕೊಂಡು "ತೀವ್ರ ಪ್ರತಿಭಟನೆ" ದಾಖಲಿಸಿದೆ.

ಪಂಜಾಬ್‌ನ ತರ್ನ್ ತಾರನ್ ಜಿಲ್ಲೆಯಲ್ಲಿ ಶುಕ್ರವಾರ ಪಾಕಿಸ್ತಾನದ ಇಬ್ಬರು ಶಂಕಿತ ಒಳನುಸುಳುಕೋರರನ್ನು ಬಿಎಸ್‌ಎಫ್ ಹೊಡೆದುರುಳಿಸಿದ ನಂತರ ಪಾಕಿಸ್ತಾನ ಈ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರು ಶಂಕಿತ ಒಳನುಸುಳುಕೋರರು ಎಂಬ ಭಾರತದ ಹೇಳಿಕೆಯನ್ನು ವಿರೋಧಿಸಿದ ಪಾಕಿಸ್ತಾನ, ಮೃತಪಟ್ಟ ಇಬ್ಬರೂ ನಾಗರಿಕರು ಎಂದು ಹೇಳಿಕೊಂಡಿದೆ.

Pakistan summons Indian diplomat, protests killing of two people by BSF
Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

ಪಂಜಾಬ್ ಪಾಕಿಸ್ತಾನದೊಂದಿಗೆ 553 ಕಿ.ಮೀ ಉದ್ದದ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ.

ತರ್ನ್ ತಾರನ್‌ನ ಪೊಲೀಸ್ ಉಪ ಅಧೀಕ್ಷಕ(ಭಿಕಿವಿಂದ್) ಅತುಲ್ ಸೋನಿ ಮಾತನಾಡಿ, ಮೂವರು ಒಳನುಸುಳುಕೋರರು ಭಾರತದ ಕಡೆಗೆ ಬರುತ್ತಿದ್ದರು, ಆದರೆ ಒಬ್ಬರು ನಂತರ ಪಾಕಿಸ್ತಾನಕ್ಕೆ ಹಿಂತಿರುಗಿದರು. ಉಳಿದಿಬ್ಬರು, ಹಿಂತಿರುಗುವಂತೆ ಬಿಎಸ್‌ಎಫ್ ಪಡೆಗಳು ಎಚ್ಚರಿಕೆ ನೀಡಿದರೂ ಭಾರತದ ಕಡೆಗೆ ಮುಂದುವರಿದರು. ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಸೋನಿ ತಿಳಿಸಿದ್ದಾರೆ.

ಬಿಎಸ್‌ಎಫ್ ಕಾವಲುಗಾರರ ಪ್ರಕಾರ, ಆ ಇಬ್ಬರು ವ್ಯಕ್ತಿಗಳು ಭಾರತೀಯ ಪಡೆಗಳನ್ನು ಪ್ರಚೋದಿಸುತ್ತಿದ್ದರು ಮತ್ತು ತಾವು ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಲು ಬಯಸುವುದಾಗಿ ಹೇಳುತ್ತಿದ್ದರು. ನಂತರ ಬಿಎಸ್‌ಎಫ್ ಗುಂಡಿನ ದಾಳಿ ನಡೆಸಿತು, ಇದರಿಂದ ಆ ಇಬ್ಬರು ವ್ಯಕ್ತಿಗಳು ಮೃತಪಟ್ಟರು ಎಂದು ಸೋನಿ ಹೇಳಿದ್ದಾರೆ.

ಮೃತಪಟ್ಟ ಇಬ್ಬರ ಗುರುತನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಆದಾಗ್ಯೂ, ಗಡಿಗೆ ಭೇಟಿ ನೀಡಿದ್ದ ಆ ಇಬ್ಬರು ವ್ಯಕ್ತಿಗಳು ಅರಿವಿಲ್ಲದೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದರು ಮತ್ತು ಅವರು ನಾಗರಿಕರಾಗಿದ್ದರು ಎಂದು ಪಾಕಿಸ್ತಾನದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಅವರು ಒಳನುಸುಳುಕೋರರಾಗಿದ್ದರು ಎಂಬ ವರದಿಗಳನ್ನು ಇಸ್ಲಾಮಾಬಾದ್ ನಿರಾಕರಿಸಿದೆ.

"ಈ ಹತ್ಯೆಯ ಕುರಿತು ಪಾಕಿಸ್ತಾನದ ತೀವ್ರ ಪ್ರತಿಭಟನೆ ದಾಖಲಿಸಲು" ಭಾರತದ 'ಚಾರ್ಜ್ ಡಿ ಅಫೇರ್ಸ್' ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಗಿತ್ತು ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

X
Kannada Prabha
www.kannadaprabha.com