ಸೌದಿ ಅರೇಬಿಯಾದ ಮೆಕ್ಕಾದಲ್ಲಿ ವೈಮಾನಿಕ ದಾಳಿಯ ಬೆದರಿಕೆ! ಎಮರ್ಜೆನ್ಸಿ ಅಲರ್ಟ್, ಮುಂದೇನಾಯ್ತು?

ಸೌದಿ ಅಧಿಕಾರಿಗಳು ಜಿದ್ದಾ, ಯಾನ್ಬು ಮತ್ತು ತೈಫ್ ಪ್ರಾಂತ್ಯಗಳಿಗೂ ಎಚ್ಚರಿಕೆಗಳನ್ನು ನೀಡಿದ್ದರು. ತದನಂತರ ಈ ಪ್ರದೇಶಗಳಲ್ಲಿಯೂ ಅಪಾಯವು ದೂರವಾಗಿದೆ ಎಂದು ಖಚಿತಪಡಿಸಿದರು.
Casual Images
ಸಾಂದರ್ಭಿಕ ಚಿತ್ರ
Updated on: 

ಮೆಕ್ಕಾ: ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ 'ವೈಮಾನಿಕ ದಾಳಿಯ ಬೆದರಿಕೆ' (hostile aerial threat) ಕುರಿತು ಅಧಿಕಾರಿಗಳು ಶನಿವಾರ ಎಮರ್ಜೆನ್ಸಿ ಅಲರ್ಟ್ ಘೋಷಿಸಿದ್ದರು. ಬಳಿಕ ಈ ಅಪಾಯವು ದೂರವಾಗಿದೆ ಎಂದು ವರದಿಯಾಗಿದೆ. ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯ ಮೆಕ್ಕಾದಲ್ಲಿ ಪ್ರಾಂತ್ಯದಲ್ಲಿ ಸಂಭವನೀಯ ಅಪಾಯದ ಬಗ್ಗೆ ನಿವಾಸಿಗಳಿಗೆ ಎಚ್ಚರಿಕೆ ನೀಡಿತು.

ಸಾಮಾಜಿಕ ಜಾಲತಾಣ 'ಎಕ್ಸ್' (X) ಪೋಸ್ಟ್ ಒಂದರಲ್ಲಿ, ಮೆಕ್ಕಾ ಪ್ರಾಂತ್ಯದಲ್ಲಿ ಸಂಭವನೀಯ ಅಪಾಯದ ಬಗ್ಗೆ ಎಚ್ಚರಿಸಲು 'ರಾಷ್ಟ್ರೀಯ ಮುನ್ನೆಚ್ಚರಿಕೆ ವೇದಿಕೆ'ಯಿಂದ (National Early Warning Platform) ಎಚ್ಚರಿಕೆಯನ್ನು ನೀಡಲಾಗಿದೆ" ಎಂದು ತಿಳಿಸಲಾಯಿತು. ತದನಂತರ ಮಾಡಿದ ಮತ್ತೊಂದು ಪೋಸ್ಟ್‌ನಲ್ಲಿ, ಎಚ್ಚರಿಕೆ, ಮಕ್ಕಾ ಪ್ರಾಂತ್ಯದಲ್ಲಿ ಅಪಾಯ ದೂರವಾಗಿದೆ ಎಂದು ತಿಳಿಸಲಾಯಿತು.

ಸೌದಿ ಅಧಿಕಾರಿಗಳು ಜಿದ್ದಾ, ಯಾನ್ಬು ಮತ್ತು ತೈಫ್ ಪ್ರಾಂತ್ಯಗಳಿಗೂ ಎಚ್ಚರಿಕೆಗಳನ್ನು ನೀಡಿದ್ದರು. ತದನಂತರ ಈ ಪ್ರದೇಶಗಳಲ್ಲಿಯೂ ಅಪಾಯವು ದೂರವಾಗಿದೆ ಎಂದು ಖಚಿತಪಡಿಸಿದರು.

ನಿವಾಸಿಗಳು ಸುರಕ್ಷತಾ ಸೂಚನೆಗಳನ್ನು ಅನುಸರಿಸುವುದನ್ನು ಮುಂದುವರಿಸುವಂತೆ ಹಾಗೂ ಗುಂಪುಗೂಡುವುದನ್ನು, ವಿಡಿಯೋ ಚಿತ್ರೀಕರಿಸುವುದನ್ನು ತಪ್ಪಿಸುವಂತೆ ಮತ್ತು ತುರ್ತು ಸಂದರ್ಭದಲ್ಲಿ 911 ಸಂಖ್ಯೆಗೆ ಕರೆ ಮಾಡುವಂತೆಯೂ ಅಧಿಕಾರಿಗಳು ಜನರಿಗೆ ಸಲಹೆ ನೀಡಿದ್ದರು.

ಇದೇ ವೇಳೆ, ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲ್ಕಿ ಮಾತನಾಡಿ, ಹೌತಿ ಬಂಡುಕೋರರು ಸೌದಿಯ ತೈಫ್ ಮತ್ತು ಯಾನ್ಬು ನಗರಗಳತ್ತ ಉಡಾಯಿಸಿದ್ದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆಯು ತಡೆಹಿಡಿದು ನಾಶಪಡಿಸಿದೆ ಎಂದು ತಿಳಿಸಿದ್ದಾರೆ.

ಭಯೋತ್ಪಾದಕ ಹೌತಿ ಬಂಡುಕೋರರು ತೈಫ್ ಮತ್ತು ಯಾನ್ಬು ನಗರಗಳತ್ತ ಉಡಾಯಿಸಿದ್ದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಹಿಡಿದು ನಾಶಪಡಿಸಲಾಗಿದೆ" ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿದ್ದಾರೆ.

Casual Images
ಮೆಕ್ಕಾ ಮಸೀದಿಯಲ್ಲಿ ಅಶ್ಲೀಲ ಕೃತ್ಯ: ಬಾಂಗ್ಲಾದ ದಂಪತಿಗೆ ಸಾರ್ವಜನಿಕವಾಗಿ ಮರಣದಂಡನೆ; ವ್ಯಾಪಕ ಆಕ್ರೋಶ!

ಇದಕ್ಕೂ ಮುನ್ನ ರಿಯಾದ್ ನಗರದತ್ತ ಉಡಾಯಿಸಲಾಗಿದ್ದ ಮತ್ತೊಂದು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಕೂಡ ವಾಯು ರಕ್ಷಣಾ ವ್ಯವಸ್ಥೆಯು ತಡೆಹಿಡಿದು ನಾಶಪಡಿಸಿದೆ ಎಂದು ಮೈತ್ರಿಕೂಟದ ವಕ್ತಾರರು ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com