Kannadaprabha Wednesday, July 30, 2014 6:37 PM IST
The New Indian Express

ಸುಪ್ರಭತಾ

ನಾವು ಹೊಂದಿರುವ ಉತ್ತಮ ಸಂಬಂಧಗಳೇ..   Jul 30, 2014

ನಾವು ಹೊಂದಿರುವ ಉತ್ತಮ ಸಂಬಂಧಗಳೇ ಜೀವನಕ್ಕೆ ಒಂದು ಮೌಲ್ಯ ಕೊಡುತ್ತದೆ. ಅಂಥ ಶ್ರೇಷ್ಠವಾದ ಸಂಬಂಧಗಳ ಬೆಲೆ ಅರಿವಾಗುವುದೇ ಅದು ಮುರಿದು ಹೋದ ಬಳಿಕ. ಹೀಗಾಗಿ ಸೌಹಾರ್ದಯುತ ಸಂಬಂಧಗಳನ್ನು ಕಾಪಾಡಲು ಪ್ರಯತ್ನಿಸಬೇಕು.
...

ಪ್ರತಿಯೊಂದು ಗುರಿಯೂ ಆರಂಭದಲ್ಲಿ ಕಷ್ಟ ಎನಿಸುತ್ತದೆ.   Jul 29, 2014

ಪ್ರತಿಯೊಂದು ಗುರಿಯೂ ಆರಂಭದಲ್ಲಿ ಕಷ್ಟ ಎನಿಸುತ್ತದೆ. ಆದರೆ, ಅದನ್ನು ತಲುಪು ವಲ್ಲಿ ಮಾಡುವ ಪ್ರಾಮಾಣಿಕ ಪ್ರಯತ್ನ, ಕ್ಷಮತೆ, ತಾಳ್ಮೆಗಳು ಗುರಿಯನ್ನು ಸುಲಭವಾಗಿಸುತ್ತವೆ.

...

ಯಾವ ದಿನವನ್ನೂ ವ್ಯರ್ಥವಾಗಿ ಕಳೆಯಬೇಡಿ...   Jul 28, 2014

ಯಾವ ದಿನವನ್ನೂ ವ್ಯರ್ಥವಾಗಿ ಕಳೆಯಬೇಡಿ. ನಿಮ್ಮ ನಾಳೆಯನ್ನು ಉತ್ತಮಗೊಳಿಸುವ ಯಾವುದಾದರೂ ಒಂದು ಕೆಲಸವನ್ನು ಪ್ರತಿದಿನವೂ ತಪ್ಪದೇ ಮಾಡಿ.
...

ತನಗಿಂತಲೂ ಕೆಳಮಟ್ಟದ ಜನರೊಂದಿಗೆ ವ್ಯಕ್ತಿಯೊಬ್ಬ ಹೇಗೆ ವ್ಯವಹರಿಸುತ್ತಾನೆ...   Jul 27, 2014

ತನಗಿಂತಲೂ ಕೆಳಮಟ್ಟದ ಜನರೊಂದಿಗೆ ವ್ಯಕ್ತಿಯೊಬ್ಬ ಹೇಗೆ ವ್ಯವಹರಿಸುತ್ತಾನೆ ಎಂಬುದು ಆತನ ವ್ಯಕ್ತಿತ್ವವನ್ನು ತಿಳಿಸುತ್ತದೆ. ಮಾನವನ ಗುಣ ಅರಿಯಲು ಇದೊಂದು ಉತ್ತಮ ಮಾರ್ಗ.

...

ಜೀವನವೆಂಬುದು ಒಂದು ನಾಣ್ಯವಿದ್ದಂತೆ...   Jul 26, 2014

ಜೀವನವೆಂಬುದು ಒಂದು ನಾಣ್ಯವಿದ್ದಂತೆ. ಅದನ್ನು ನಿಮಗಿಷ್ಟ ಬಂದ ರೀತಿಯಲ್ಲಿ ವೆಚ್ಚಮಾಡಬಹುದು. ಆದರೆ ಬಳಸುವ ಅವಕಾಶ ಇರುವುದು ಒಂದು ಬಾರಿ ಮಾತ್ರ. ಹಾಗಾಗಿ ಬದುಕನ್ನು ಮೌಲ್ಯಯುತವಾಗಿ ಬಾಳಿ.

...

ಪ್ರತಿಯೊಬ್ಬರಿಗೂ ತೊಂದರೆಗಳು ಇರುತ್ತವೆ...   Jul 25, 2014

ಪ್ರತಿಯೊಬ್ಬರಿಗೂ ತೊಂದರೆಗಳು ಇರುತ್ತವೆ. ಕೆಲವರು ನೋವನ್ನು ವ್ಯಕ್ತಪಡಿಸುತ್ತಾರೆ. ಹಾಗೆಂದ ಮಾತ್ರಕ್ಕೇ ಅವರು ದುರ್ಬಲರಲ್ಲ. ಕೆಲವರು ನೋವು ತೋರಿಸಿಕೊಳ್ಳುವುದಿಲ್ಲ. ಅದರ ಅರ್ಥ ಅವರು ಕಠೋರವೆಂದಲ್ಲ. ಅವರದೇ ಆದ ವ್ಯಕ್ತಿತ್ವವಿರುತ್ತದೆ,...

ಸೋಲು ಎಂಬುದು ಗೆಲವಿನ ವಿರುದ್ಧ ಪದವಲ್ಲ...   Jul 24, 2014

ಸೋಲು ಎಂಬುದು ಗೆಲವಿನ ವಿರುದ್ಧ ಪದವಲ್ಲ. ಬದಲಾಗಿ ಗೆಲವು ಸಾಧಿಸಲು ಎದುರಿಸಬೇಕಾದ ಒಂದು ಸವಾಲು. ಆ ಅಡಚಣೆಯನ್ನು ಮೀರಿದಾಗ ಸೋಲು ಗೆಲವಾಗಿ ಮಾರ್ಪಾಡಾಗುತ್ತದೆ.

...

ನಿಮ್ಮ ಬಗ್ಗೆ ನಿಮ್ಮಲ್ಲಿರುವ ದೃಢ ನಂಬಿಕೆಗೆ ಸದಾ ನೀರುಣಿಸುತ್ತಿದ್ದರೆ...   Jul 23, 2014

ನಿಮ್ಮ ಬಗ್ಗೆ ನಿಮ್ಮಲ್ಲಿರುವ ದೃಢ  ನಂಬಿಕೆಗೆ ಸದಾ ನೀರುಣಿಸುತ್ತಿದ್ದರೆ, ನಿಮ್ಮ ಬಗೆಗಿನ ಸಂದೇಹಗಳು  ಹಸಿವಿನಿಂದ ನರಳಿ ಸತ್ತು ಹೋಗುತ್ತವೆ. ಅನುಮಾನಕ್ಕೆ ಅವಕಾಶ ಮಾಡಿಕೊಡದಿರಿ. ನಿಮ್ಮ ಆತ್ಮಸ್ಥೈರ್ಯ ಜೀವ...

ಗತಕಾಲದಿಂದ ಕಲಿಯಬೇಕಾದದ್ದು ಬಹಳಷ್ಟಿದೆ...   Jul 22, 2014

ಗತಕಾಲದಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡದಿರಬೇಕು ಅಂತಾದರೆ ಪಾಠಗಳನ್ನು ಕಲಿಯಲೇಬೇಕು. ಪಾಠ ಕಲಿತಂತೆಲ್ಲ ಭವಿಷ್ಯವನ್ನು ಎದುರಿಸುವ ಧೈರ್ಯವೂ ನಮ್ಮಲ್ಲಿ ಬರುತ್ತದೆ.

...

ನೀವು ಎಷ್ಟೇ ತಪ್ಪುಗಳನ್ನು ಮಾಡಿ...   Jul 21, 2014

ನೀವು ಎಷ್ಟೇ ತಪ್ಪುಗಳನ್ನು ಮಾಡಿ, ನಿಮ್ಮ ಪ್ರಗತಿ ನಿಧಾನವೇ ಆಗಿರಲಿ. ಅದರ ಬಗ್ಗೆ ಚಿಂತಿಸಬೇಡಿ. ಏಕೆಂದರೆ ಪ್ರಯತ್ನವೇ ಮಾಡದವರಿಗಿಂತ ನೀವು ತುಂಬಾ ಮುಂದಿರುತ್ತೀರಿ. ಅದಕ್ಕೆ ಖುಷಿಪಡಿ.

...

ನೀವು ಅಪರಾಧಿ ಅಲ್ಲದೇ ಇರಬಹುದು...   Jul 20, 2014

ನೀವು ಅಪರಾಧಿ ಅಲ್ಲದೇ ಇರಬಹುದು. ಆದರೆ ನಿಮ್ಮ ಕಣ್ಣ ಮುಂದೆ ಅಪರಾಧ ನಡೆಯುತ್ತಿದ್ದಾಗ ಅದನ್ನು ತಡೆಯದಿದ್ದರೆ ನೀವು ಅಪರಾಧಿಯಷ್ಟೇ ತಪ್ಪಿತಸ್ಥರಾಗುತ್ತೀರಿ.

...

ಜೀವನದಲ್ಲಿ ನೀವು ಗುಲಾಬಿ ಹೂವುಗಳಾಗಬೇಕೆಂದು ಬಯಸಿದರೆ...   Jul 19, 2014

ಜೀವನದಲ್ಲಿ ನೀವು ಗುಲಾಬಿ ಹೂವುಗಳಾಗಬೇಕೆಂದು ಬಯಸಿದರೆ, ಮುಳ್ಳುಗಳ ನಡುವೆ ಬಾಳುವುದನ್ನು ರೂಢಿಸಿಕೊಳ್ಳಬೇಕು. ಕಷ್ಟಪಡದೇ ಯಾವುದೂ ಸುಲಭವಾಗಿ ದಕ್ಕುವುದಿಲ್ಲ.

...

ಕಷ್ಟ ಎದುರಾದ ಕೂಡಲೇ ಸೋಲೊಪ್ಪಿಕೊಳ್ಳದಿರಿ...   Jul 18, 2014

ಕಷ್ಟ ಎದುರಾದ ಕೂಡಲೇ ಸೋಲೊಪ್ಪಿಕೊಳ್ಳದಿರಿ. ಪ್ರಯತ್ನ ಪಟ್ಟುನೋಡಿ. ಗೆದ್ದರೆ ಒಳ್ಳೆಯದು. ಸೋತರೆ ಪಾಠ ಕಲಿತಂತೆ! ಪ್ರಯತ್ನ ಪಡದೇ ಸೋಲೊಪ್ಪಿಕೊಳ್ಳುವುದು ಹೆಡ್ಡತನ.

...

ದಿನವಿಡೀ ನಿನ್ನೆ ಬಗ್ಗೆ ಗೋಗೆರೆಯುತ್ತಾ ಕುಳಿತರೆ...   Jul 17, 2014

ದಿನವಿಡೀ ನಿನ್ನೆ ಬಗ್ಗೆ ಗೋಗೆರೆಯುತ್ತಾ ಕುಳಿತರೆ ನಿಮ್ಮ ಇಂದು ವ್ಯರ್ಥವಾಗುತ್ತದೆ. ನಿಮ್ಮ ನಾಳೆಯೂ ಒಳ್ಳೆಯದಾಗುವುದಿಲ್ಲ. ನಿನ್ನೆ ನಿನ್ನೆಗೆ, ನಾಳೆ ನಾಳೆಗೆ. ಇಂದಿನ ದಿನ ಚೆನ್ನಾಗಿರಲು ಪ್ರಯತ್ನಿಸಿ.

...

ನೋವು ಪ್ರತಿಯೊಬ್ಬರನ್ನೂ ಬದಲಿಸಿಬಿಡುತ್ತದೆ.   Jul 16, 2014

ನೋವು ಪ್ರತಿಯೊಬ್ಬರನ್ನೂ ಬದಲಿಸಿಬಿಡುತ್ತದೆ. ಕೆಲವರು ನೋವಿನಿಂದ ನರಳುತ್ತಾರೆ. ಕೆಲವರು ನೋವಿನಿಂದ ಕಲಿಯುತ್ತಾರೆ, ಕಲಿತು ಮುನ್ನಡೆಯುತ್ತಾರೆ. ನರಳುವುದು ಅಥವಾ ನಲಿಯುವುದು ನಿಮ್ಮ ಆಯ್ಕೆ.

...

ಈ ಜಗತ್ತಲ್ಲಿ ಯಾರೂ ಪರಿಪೂರ್ಣರೂ ಅಲ್ಲ, ಪರಿಶುದ್ಧರೂ...   Jun 30, 2014

ಈ ಜಗತ್ತಲ್ಲಿ ಯಾರೂ ಪರಿಪೂರ್ಣರೂ ಅಲ್ಲ, ಪರಿಶುದ್ಧರೂ ಅಲ್ಲ. ಪ್ರೀತಿಪಾತ್ರರು ತಪ್ಪು ಮಾಡಿದರೆಂದು ಅವರಿಂದ ದೂರವಾದರೆ, ನೀವು ಏಕಾಂಗಿಯಾಗುತ್ತೀರಿ. ಹಾಗಾಗಿ ಜನರನ್ನು ಜಡ್ಜ್ ಮಾಡುವುದನ್ನು ಕಡಿಮೆ ಮಾಡಿ, ಎಲ್ಲರನ್ನೂ ಪ್ರೀತ...

ಕರುಣೆ ಎಂಬುದೊಂದು ಮಾಯೆ.   Jun 29, 2014

ಕರುಣೆ ಎಂಬುದೊಂದು ಮಾಯೆ. ಪ್ರತ್ಯುಪಕಾರದ ನಿರೀಕ್ಷೆಯಿಲ್ಲದೆ ನೆರೆ-ಹೊರೆಯವರಿಗೆ ಸಹಾಯ ಮಾಡುತ್ತಿರಿ. ಇದರಿಂದ ನಿಮಗೆ ಸಂತಸ ಮತ್ತು ತೃಪ್ತಿ ಸಿಕ್ಕರೆ ಸಾಕಲ್ಲವೇ?

...

ಗೆಲವು ಬಗ್ಗೆ ಕನಸು ಕಾಣುವುದು ತಪ್ಪಲ್ಲ...   Jun 28, 2014

ಗೆಲವು ಬಗ್ಗೆ ಕನಸು ಕಾಣುವುದು ತಪ್ಪಲ್ಲ. ಆದರೆ, ಕನಸು ಕಾಣುತ್ತಲೇ ಕುಳಿತರೆ ಅದು ನಿಜವಾಗುವುದಿಲ್ಲ. ಕನಸಿನಿಂದ ಎಚ್ಚೆತ್ತು ಗೆಲ್ಲಲು ಶ್ರಮಿಸಬೇಕು.

...

ಗೆಲ್ಲಲು ಪ್ರಯತ್ನ ಪಟ್ಟು ಸೋತವರು...   Jun 27, 2014

ಗೆಲ್ಲಲು ಪ್ರಯತ್ನ ಪಟ್ಟು ಸೋತವರು, ಪ್ರಯತ್ನ ಪಡದೇ ಇರುವವರಿಗಿಂತ ಯಾವತ್ತಿಗೂ ಶ್ರೇಷ್ಠರು. ಸೋಲು, ಗೆಲುವು ಮುಖ್ಯವೇ ಅಲ್ಲ. ಮುಖ್ಯವಾದುದು ಪ್ರಯತ್ನ!

...

ನಿಮ್ಮಲ್ಲಿ ಧೈರ್ಯ ಇರದೇ ಇರಬಹುದು.   Jun 26, 2014

ನಿಮ್ಮಲ್ಲಿ ಧೈರ್ಯ ಇರದೇ ಇರಬಹುದು. ಆದರೆ, ಭಯ ನಿಮ್ಮ ಬಾಗಿಲನ್ನು ಬಡಿಯುತ್ತಿದ್ದರೆ, ಅದಕ್ಕೆ ಉತ್ತರ ನೀಡಲು ನಿಮ್ಮಲ್ಲಿರುವ ದೃಢ ನಂಬಿಕೆಯನ್ನು ಕಳುಹಿಸಿ. ಭಯ ತಾನಾಗೇ ಹೊರಟು ಹೋಗುತ್ತದೆ.

...

ಜೀವನದಲ್ಲಿ ಎಷ್ಟಿದೆಯೊ ಅದರ ಬಗ್ಗೆ ತೃಪ್ತಿ ಇರಲಿ...   Jun 25, 2014

ಜೀವನದಲ್ಲಿ ಎಷ್ಟಿದೆಯೊ ಅದರ ಬಗ್ಗೆ ತೃಪ್ತಿ ಇರಲಿ. ಆಗ ನಮಗೆ ಇನ್ನೂ ಹೆಚ್ಚು ಸಿಗುತ್ತದೆ. ನಮ್ಮ ಬಳಿ ಯಾವುದು ಇಲ್ಲವೊ ಅದರ ಬಗ್ಗೆ ಚಿಂತಿಸುತ್ತಾ ಕುಳಿತರೆ ಇದ್ದುದ್ದನ್ನೂ ಕಳೆದುಕೊಳ್ಳುತ್ತೇವೆ.

...

ಕೆಲಸವಿದ್ದಾಗ ಮಾತ್ರ ಜನರು...   Jun 24, 2014

ಕೆಲಸವಿದ್ದಾಗ ಮಾತ್ರ ಜನರು
ನಮ್ಮನ್ನು ನೆನಪಿಸಿಕೊಳ್ಳುತ್ತಾರೆ
ಎಂಬ ಬೇಸರ ಬೇಡ.
ಕತ್ತಲಾದಾಗಲೇ ದೀಪದ ಮಹತ್ವ
ತಿಳಿಯುವುದು. ಆದ್ದರಿಂದ ಸರ್ವರ ಬಾಳಲ್ಲಿ ಬೆಳಕಾಗಿ ಬಾಳೋಣ.

...

ಕೆಲವರು ಕಷ್ಟದ ಸಂದರ್ಭದಲ್ಲಿ ಮಾತ್ರ ನಿಮ್ಮನ್ನು...   Jun 23, 2014

ಕೆಲವರು ಕಷ್ಟದ ಸಂದರ್ಭದಲ್ಲಿ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಬೇಸರಿಸಬೇಡಿ. ಕತ್ತಲು ಆವರಿಸಿದಾಗ ಅವರು ಹುಡುಕುವ ದೀಪ ನೀವು. ಅವರ ಬದುಕಲ್ಲಿ ಬೆಳಕು ತುಂಬಲು ನಿಮ್ಮನ್ನು ಹುಡುಕುತ್ತಾರೆ ಎಂಬುದನ್ನು ಅರಿತು...

ನಿಮಗೆ ಜೀವನದಲ್ಲಿ ಸಂಕಷ್ಟ, ಸಮಸ್ಯೆಗಳು ಎದುರಾದರೆ...   Jun 22, 2014

ನಿಮಗೆ ಜೀವನದಲ್ಲಿ ಸಂಕಷ್ಟ, ಸಮಸ್ಯೆಗಳು ಎದುರಾದರೆ ನಿಮ್ಮಲ್ಲಿರುವ ಸಾಮರ್ಥ್ಯ, ನಿಮ್ಮ ತಾಕತ್ತನ್ನು ಪ್ರದರ್ಶಿಸಲು ಮತ್ತೊಂದು ಸದವಕಾಶ ಸಿಕ್ಕಿದೆಯೆಂದು ಭಾವಿಸಿ. ನೀವು ಸಮಸ್ಯೆಯನ್ನು ನೋಡುವ ರೀತಿಯೇ ಬದಲಾದೀತು.   ...

ಜೀವನದಲ್ಲಿ ಹಿನ್ನಡೆಯಾದಾಗ ನಿರಾಸೆಗೆ ಒಳಗಾಗುವುದು...   Jun 21, 2014

ಜೀವನದಲ್ಲಿ ಹಿನ್ನಡೆಯಾದಾಗ ನಿರಾಸೆಗೆ ಒಳಗಾಗುವುದು ಬೇಡ. ಬಿಲ್ಲಿನಿಂದ ಬಾಣ ಬಿಡಬೇಕಾದರೆ, ಅದನ್ನು ಹಿಂದಕ್ಕೆ ಎಳೆದೇ ಬಿಡಬೇಕು. ಇಲ್ಲವಾದಲ್ಲಿ ಬಾಣ ಗುರಿ ಮುಟ್ಟುವುದಿಲ್ಲ.

...

ಉದ್ಯಾನದಲ್ಲಿ ಅರಳಿರುವ ಗುಲಾಬಿಯಂತೆ ಆಗಬೇಕು ಎಂದು...   Jun 20, 2014

ಉದ್ಯಾನದಲ್ಲಿ ಅರಳಿರುವ ಗುಲಾಬಿಯಂತೆ ಆಗಬೇಕು ಎಂದು ನೀವು ಬಯಸುವುದಾದರೆ, ಮೊದಲು ಮುಳ್ಳಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಲಿಯಬೇಕು. ಜೀವನದಲ್ಲಿ ಹೊಂದಾಣಿಕೆ ಇದ್ದರೆ ಮಾತ್ರ ನೀವು ಗೆಲವು ಸಾಧಿಸಲು ಸಾಧ್ಯ.

...

ವಿಶ್ವಾಸ ಗಳಿಸುವುದು ಕಷ್ಟ, ಕಳೆದುಕೊಳ್ಳುವುದು...   Jun 19, 2014

ವಿಶ್ವಾಸ ಗಳಿಸುವುದು ಕಷ್ಟ, ಕಳೆದುಕೊಳ್ಳುವುದು ಸುಲಭ. ಯಾರಾದರೂ ನೀವು ಹೇಳುವ ಸುಳ್ಳುಗಳನ್ನು ನಂಬುತ್ತಾರೆ ಎಂದರೆ ಅವರು ಹೆಡ್ಡರಲ್ಲ, ಅವರ ವಿಶ್ವಾಸಕ್ಕೆ ನೀವು ಅರ್ಹರಲ್ಲ ಎಂದರ್ಥ! ವಿಶ್ವಾಸಿಗಳಾಗಿರಿ, ದ್ರೋಹಿಗಳಾಗದಿರಿ.

...

ಪ್ರತಿ ದಿನದ ಬೆಳಗೂ ಹೊಸ ಹೊರುಪು ತರುತ್ತದೆ...   Jun 18, 2014

ಪ್ರತಿ ದಿನದ ಬೆಳಗೂ ಹೊಸ ಹೊರುಪು ತರುತ್ತದೆ. ಅದರ ಪ್ರವೇಶಕ್ಕೆ ಮಾತ್ರ ಹೆಚ್ಚಿನ ಹುರುಪು ಬೇಕು. ಅದಕ್ಕಾಗಿ ತಯಾರಿಯೂ ಅಗತ್ಯ

...

ಸೋಲು ಎಂಬುದು ಸೋಲಲ್ಲ.   Jun 17, 2014

ಸೋಲು ಎಂಬುದು ಸೋಲಲ್ಲ. ಅದು ನಮ್ಮನ್ನು ನಾವು ತಿದ್ದಿಕೊಳ್ಳಲು ಸಿಗುವ ಅವಕಾಶ. ನಾವು ನಡೆಯಲು ಕಲಿತಾಗ ಮತ್ತು ಸೈಕಲ್ ತುಳಿದಾಗ ಬೀಳಲಿಲ್ಲವೇ? ಬಿದ್ದ ನಂತರ ಹೇಗೆ ಎದ್ದು ನಿಂತೆವೋ ಅದೇ ರೀತಿ ಈಗಲೂ ಎದ್ದು ನಿಲ್ಲಬೇಕು,ಕಲಿಯಬೇಕು,...

ಮೊದಲು ಕನಸು ಕಾಣಲು ಆರಂಭಿಸಿ.   Jun 16, 2014

ಮೊದಲು ಕನಸು ಕಾಣಲು ಆರಂಭಿಸಿ. ನಿಮ್ಮಲ್ಲಿ ಕನಸುಗಳಿವೆ ಅಂತಾದರೆ ಅದನ್ನು ನನಸು ಮಾಡಿಕೊಳ್ಳುವುದು ಕಷ್ಟವೇನೂ ಅಲ್ಲ.

...

    Next