
ಲಂಡನ್: ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ನಿಂತು ಸೆಲ್ಫಿ ಕ್ಲಿಕ್ ಮಾಡುವ ಮೂಲಕ ಬ್ರಿಟಿಷ್ ಛಾಯಾಗ್ರಾಹಕರೊಬ್ಬರು ದಾಖಲೆ ಸೃಷ್ಟಿಸಿದ್ದಾರೆ.
ಗಗನಚುಂಬಿ ಕಟ್ಟಡವಾದ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಅಂದರೆ ಭೂಮಿಯಿಂದ 2,723 ಅಡಿ ಎತ್ತರದಲ್ಲಿ ನಿಂತು ಸೆಲ್ಫಿ ಕ್ಲಿಕ್ ಮಾಡುವ ಮೂಲಕ 47ರ ಹರೆಯದ ಜೆರಾಲ್ಡ್ ಡೋನಾವನ್ "ಸೆಲ್ಫಿ ವೀರ" ಎಂದೆನಿಸಿಕೊಂಡಿದ್ದಾರೆ.
ಅರಬ್ ಮೂಲದ ಡೋನಾವನ್ ಐಫೋನ್ ಆ್ಯಪ್ ನಿಯಂತ್ರಿತ ಪನೋರಮಿಕ್ ಕ್ಯಾಮೆರಾ ಬಳಸಿ ಈ ಸೆಲ್ಫಿ ತೆಗೆದಿದ್ದು, ಇದು ಜಗತ್ತಿನ ಅತೀ ಎತ್ತರದಲ್ಲಿ ತೆಗೆದ ಸೆಲ್ಫಿ ಎಂಬ ಖ್ಯಾತಿಗೆ ಅರ್ಹವಾಗಿದೆ.
Advertisement