ಲಿಮ್ಕಾ ದಾಖಲೆಗೆ ಹೆಸರು ಸೇರ್ಪಡಿಸಿದ ಬಾಲ ಕನ್ನಡಿಗ

8ನೇ ವಯಸ್ಸಿಗೆ ಗ್ರಾನೈಟ್ಗಳನ್ನು ತುಂಡು ಮಾಡಿದ ಕನ್ನಡಿಗ ವಿಕ್ರಮಾದಿತ್ಯ ಈಗ ಮತ್ತೊಂದು ಸಾಹಸ ಮಾಡಿದ್ದು, ಒಂದು ನಿಮಿಷದಲ್ಲಿ 42 ಕಾರ್ಟ್ ವೀಲ್ ಅನ್ನು ಕೈಮುಷ್ಠಿಯಿಂದ...
ವಿಕ್ರಮಾದಿತ್ಯ
ವಿಕ್ರಮಾದಿತ್ಯ

ಬೆಂಗಳೂರು: 8ನೇ ವಯಸ್ಸಿಗೆ ಗ್ರಾನೈಟ್ಗಳನ್ನು ತುಂಡು ಮಾಡಿದ ಕನ್ನಡಿಗ ವಿಕ್ರಮಾದಿತ್ಯ ಈಗ ಮತ್ತೊಂದು ಸಾಹಸ ಮಾಡಿದ್ದು, ಒಂದು ನಿಮಿಷದಲ್ಲಿ 42 ಕಾರ್ಟ್ ವೀಲ್ ಅನ್ನು ಕೈಮುಷ್ಠಿಯಿಂದ ಮುರಿಯುವ ಮೂಲಕ ಲಿಮ್ಕಾ ದಾಖಲೆಗೆ ತನ್ನ ಹೆಸರು ಸೇರ್ಪಡೆಗೊಳಿಸಿದ್ದಾರೆ.

ನಗರದ ಲಗ್ಗೆರೆ ಈಶ್ವರ್ ಕುಮಾರ್ ಅವರ ಪುತ್ರ 10ನೆ ತರಗತಿ ವಿದ್ಯಾರ್ಥಿ ವಿಕ್ರಮಾದಿತ್ಯ ತನ್ನ 8ನೇ ವಯಸ್ಸಿಗೆ ಗ್ರಾನೈಟ್ಗಳನ್ನು ತುಂಡು ಮಾಡಿದ ಕನ್ನಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 9ನೇ ವಯಸ್ಸಿನಲ್ಲಿ 3 ಸೆಕೆಂಡಿನಲ್ಲಿ 6 ಗ್ರಾನೈಟ್ಗಳ್ನು ಛಿದ್ರಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಸಾಹಸವನ್ನು ದಾಖಲಿಸಿದ್ದಾನೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈಶ್ವರ್ ಕುಮಾರ್, 2011 ನವೆಂಬರ್ 13ರಂದು ಒಂದು ನಿಮಿಷದಲ್ಲಿ 36 ಸೈಕಲ್ಗಳನ್ನು ತನ್ನ ಹೊಟ್ಟೆಯ ಮೇಲೆ ಹತ್ತಿಸಿಕೊಂಡು ವಿಶ್ವದಾಖಲೆ ಮಾಡಿದ್ದಾನೆ. ಕಳೆದ ವರ್ಷ ಮೇ 14ರಂದು 8 ಸೆಕೆಂಡಿನಲ್ಲಿ 262 ಟ್ಯೂಬ್ ಲೈಟ್ಗಳನ್ನು ಪುಡಿ ಮಾಡುವ ಮೂಲಕ ಸ್ಯೂಪರ್ ಹ್ಯೂಮನ್ ಮತ್ತು ಗಿನ್ನಿಸ್ ದಾಖಲೆ ಮಾಡಿದ್ದಾನೆ. ಇದುವರೆಗೆ ಈತನಿಗೆ 99 ಪ್ರಶಸ್ತಿಗಳು ದೊರೆತಿವೆ. ಕೇವಲ ಸಾಹಸ ಮಾತ್ರವಲ್ಲ ನಟನೆಯಲ್ಲೂ ಈತ ಎತ್ತಿದ ಕೈ. ಅದ್ಧೂರಿ, ಸಾರಥಿ, ಜಟಾಯು, ಪವರ್ ಸ್ಟಾರ್ ಅಭಿನಯದ ಯಾರೇ ಕೂಗಾಡಲಿ, ಲಿಟ್ಲ್ಮಾಸ್ಟರ್, ಸುಪ್ರೀಂ, ಪರಬ್ರಹ್ಮ, ಚರ್ತುಭಜ, ಮರ್ಯಾದೆ ಹಾಗೂ ದುನಿಯಾ ವಿಜಿ ಅಭಿನಯದ ಕೋಬ್ರಾ ಮತ್ತು ಸಿಂಹಾದ್ರಿ ಬೊಂಬೆಯಾಟ, ಬಣ್ಣದ ಕನಸು, ಕೂಗು ಅರಿವು ಮುಂತಾದ ಚಿತ್ರಗಳಲ್ಲಿ ವಿಕ್ರಮಾದಿತ್ಯ ಅಭಿನಯಿಸಿದ್ದಾನೆ ಎಂದು ತಿಳಿಸಿದರು.

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ವಿಕ್ರಮಾದಿತ್ಯನನ್ನು ರಾಜಭವನ್ಗೆ ಕರೆಸಿ ಮಾತನಾಡಿಸಿ, ಗೌರವಿಸಿದ್ದರು. ಈತನಿಗೆ ಹಲವು ಮಠಾಧೀಶರು, ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ. ಪ್ರಸಕ್ತ ವಿಕ್ರಮಾದಿತ್ಯ ನೃತ್ಯ, ಜಿಮ್ನಾಸ್ಟಿಕ್ ಕಲಿಯುತ್ತಿದ್ದು, ಆತನ ಸಾಧನೆಯನ್ನು ಗುರುತಿಸಿ ಸರ್ಕಾರ, ಸಮಾಜ ಆತನ ಕನಸು ನನಸು ಮಾಡಲು ಮುಂದೆ ಬರಬೇಕು ಎಂದು ಅವರು ಮನವಿ ಮಾಡಿದರು.
ನಗರದ ಪ್ರೆಸ್ ಕ್ಲಬ್ ಮುಂಭಾಗ ವಿಕ್ರಮಾದಿತ್ಯ ಕಾರ್ಟ್ ವೀಲ್ ಸಾಹಸ ಪ್ರದರ್ಶಿಸಿದ್ದು, ತಾನು ಮುಂದೆ ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಹೊಂದಿದ್ದೇನೆ ಎಂದು ತಿಳಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com