ಮತ್ತೆ ಆಪೂಸ್ ರಫ್ತು?

ಮಾವು ಬೆಳೆಗಾರರಿಗೆ ಸಿಹಿ ಸುದ್ದಿ. ಐರೋಪ್ಯ ಒಕ್ಕೂಟಗಳು ಕಳೆದ ಮೇನಲ್ಲಿ ಭಾರತದಿಂದ...
ಆಪೂಸ್ ಮಾವು
ಆಪೂಸ್ ಮಾವು

ನವದೆಹಲಿ: ಮಾವು ಬೆಳೆಗಾರರಿಗೆ ಸಿಹಿ ಸುದ್ದಿ. ಐರೋಪ್ಯ ಒಕ್ಕೂಟಗಳು ಕಳೆದ ಮೇನಲ್ಲಿ ಭಾರತದಿಂದ ರಫ್ತಾಗುವ ಆಪೂಸ್ ಮಾವು ಸೇರಿದಂತೆ ಹಲವು ತರಕಾರಿಗಳಿಗೆ ಹೇರಿದ್ದ ನಿಷೇಧವನ್ನು ಈ ಮಾಸಾಂತ್ಯದಲ್ಲಿ ವಾಪಾಸ್ ಪಡೆದುಕೊಳ್ಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಏಪ್ರಿಲ್‌ನಲ್ಲಿ ಭೇಟಿ ಕೊಟ್ಟಿದ್ದ ಐರೋಪ್ಯ ಒಕ್ಕೂಟದ 28 ಸದಸ್ಯರ ತಂಡವು ಭಾರತದಲ್ಲಿ ಆಪೂಸ್ ಮಾವು ಬೆಳೆಯುವ ಹಾಗೂ ಅದನ್ನು  ಪರಿಷ್ಕರಿಸುವ ಪದ್ಧತಿಯನ್ನು ಅಧ್ಯಯನ ನಡೆಸಿತ್ತು. ನಂತರ ಭಾರತದಿಂದ ಇವುಗಳ ಆಮದನ್ನು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ಐರೋಪ್ಯ  ಒಕ್ಕೂಟದ ಆಹಾರ ಮತ್ತು ಪಶುವೈದ್ಯಕೀಯ ಇಲಾಖೆ ತಂಡವು, ಈಚೆಗೆ ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಸಂಸ್ಕರಣಾ ಘಟಕಗಳನ್ನು ಹಾಗೂ ಇತರ ಸೌಲಭ್ಯಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿವೆ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಮತ್ತೆ ಇಲ್ಲಿಂದ ರಫ್ತು ಮಾಡಲು ಅನುಮತಿ ದೊರೆಯಬಹುದು ಎಂದು ಭಾರತೀಯ ರಫ್ತು ಪರಿಶೀಲನಾ ಕೌನ್ಸಿಲ್‌ನ ನಿರ್ದೇಶಕ ಎಸ್.ಕೆ. ಸಕ್ಸೇನಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com