ಕ್ಯಾರೆಟ್ ಬೆಳೆ ಹರಿಸುತ್ತೆ ಹಣದ ಹೊಳೆ

ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಹಾಗೂ ಕಣ್ಣಿನ ದೃಷ್ಟಿ ದೋಷ ನಿವಾರಿಸುವ ಗುಣ ಹೊಂದಿರುವ ತರಕಾರಿಗಳಲ್ಲಿ ಕ್ಯಾರೆಟ್ ಅತಿ ಫೇಮಸ್.
ಕ್ಯಾರಟ್
ಕ್ಯಾರಟ್
Updated on

ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಹಾಗೂ ಕಣ್ಣಿನ ದೃಷ್ಟಿ ದೋಷ ನಿವಾರಿಸುವ ಗುಣ ಹೊಂದಿರುವ ತರಕಾರಿಗಳಲ್ಲಿ ಕ್ಯಾರೆಟ್ ಅತಿ ಫೇಮಸ್.
ಮೊದಲು ಇದನ್ನು ಯುರೋಪ್ ಮತ್ತು ನೈರುತ್ಯ ಎಷ್ಯಾ ಗಳಲ್ಲಿ  ಮಾತ್ರ ಅತಿ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಕ್ಯಾರೆಟ್ ಬೆಳೆಗೆ 2 ಸಾವಿರದಿಂದ 3 ಸಾವಿರ ವರ್ಷಗಳ ಇತಿಹಾಸವಿದೆ.
ಕ್ಯಾರೆಟ್ ಬೇಯಿಸಿ ತಿನ್ನುವುದಕ್ಕಿಂತ ಹಸಿಯದನ್ನೇ ತಿಂದರೆ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ದೇಹ ಸೇರುತ್ತದೆ. ಕ್ಯಾರೆಟ್ ಅನ್ನು ಎಲ್ಲಾ ರೀತಿಯ ಅಡುಗೆಗಳಲ್ಲಿ
ಬಳಸುತ್ತಾರೆ. ಕ್ಯಾರೆಟ್ ಸಲಾಡ್, ಕ್ಯಾರೆಟ್ ಜ್ಯೂಸ್ ಹೆಚ್ಚು ಫೇಮಸ್. ಇದು ಆಂಗ್ಲ ಪದ ಕನ್ನಡದಲ್ಲಿ ಇದಕ್ಕೆ ಕೆಂಪು ಮೂಲಂಗಿ ಎಂದು ಸಹ ಕರೆಯುತ್ತಾರೆ.
ಪ್ರಮುಖ ಸೌಂಧರ್ಯವರ್ದಕ ವಾಗಿ ಕ್ಯಾರೆಟ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅತಿ ಹೆಚ್ಚು ಕ್ಯಾಲರಿ ಹೊಂದಿರುವ ಕ್ಯಾರೆಟ್ ಆನ್ನು ಡಯಟ್ ಮಾಡುವವರು ಹೆಚ್ಚಿಗೆ ಬಳಸುತ್ತಾರೆ

ಕ್ಯಾರೆಟ್ ಬೆಳೆಯುವ ವಿಧಾನ: ಕ್ಯಾರೆಟ್ ಬೀಜದಿಂದ ಬೆಳೆಯುವ ಒಂದು ತರಕಾರಿ.  ಮೊದಲು ಬೀಜವನ್ನು ಮಣ್ಣಿನಲ್ಲಿ ಹಾಕಿ ಬಿತ್ತನೆ ಮಾಡುತ್ತಾರೆ. 3 ರಿಂದ 5 ವಾರಗಳ ನಂತರ
ಸುಮಾರು 3 ರಿಂದ 4 ಇಂಚು ಬೆಳೆದೆ ಕ್ಯಾರೆಟ್ ಪೈರನ್ನು  ನಾಟಿ ಮಾಡುತ್ತಾರೆ. ಚಳಿಗಾಲ ಕ್ಯಾರೆಟ್ ಬೆಳೆಯಲು ಹೆಚ್ಚು ಸೂಕ್ತ. ಕ್ಯಾರೆಟ್ ಗೆ ಹಿಮದ ಅವಶ್ಯಕತೆ ಇರುವುದರಿಂದ
ಚಳಿಗಾಲದಲ್ಲಿ ಇದನ್ನು ಬೆಳೆಯಲಾಗುತ್ತದೆ. ತೇವಾಂಶ ಇರುವ ಮರಳು ಮಿಶ್ರಿತ ಸಡಿಲ ಮಣ್ಣು ಕ್ಯಾರೆಟ್ ಬೆಳೆಗೆ ಉಪಯುಕ್ತ.
ಕ್ಯಾರೆಟ್ ಗೆ ಬೇವಿನ ಹಿಂಡಿಯನ್ನು ಹಾಕಿದರೆ ಫಸಲು ಚೆನ್ನಾಗಿ ಬರುತ್ತದೆ. ಬಿಸಿಲು ಹೆಚ್ಚಾಗಿದ್ದರೆ ವಾರದಲ್ಲಿ ಒಮ್ಮೆ ನೀರು ಹಾಯಿಸಬೇಕು.
ಜೊತೆಗೆ ಆಗಾಗ ಕಳೆ ತೆಗೆದು ಪೈರುಗಳು ಬೇರು ಬಿಡಲು ಅನುಕೂಲ ಮಾಡಿಕೊಡಬೇಕು. ಇದರಿಂದ ಕ್ಯಾರೆಟ್ ಚೆನ್ನಾಗಿ ಬೆಳೆಯುತ್ತದೆ.

ಇನ್ನು ಕ್ಯಾರೆಟ್ ಗಿಡಕ್ಕೆ ಹಳದಿ ರೋಗ ತಗುಲುವುದರಿಂದ ಆಗಾಗ್ಗೆ ಔಷಧಿ ಸಿಂಪಡಿಸಬೇಕಾಗುತ್ತದೆ. ಜೊತೆಗೆ ಕಳೆ ಹೆಚ್ಚಾಗಿ ಬೆಳೆಯಲು ಬಿಡಬಾರದು. ಎರಡೂವರೆ ತಿಂಗಳಿಗೆ ಕ್ಯಾರೆಟ್ ಫಸಲು ಬರುತ್ತದೆ.  ನೆಲದೊಳಗಡೆ ಕ್ಯಾರೆಟ್ ಗೆ ಅಗತ್ಯವಿರುವ ತೇವಾಂಶ ದೊರಕುವುದರಿಂದ ಕೊಯ್ಲು ಮಾಡುವವರೆಗೂ ನೆಲದಲ್ಲೆ ಬಿಟ್ಟರೆ ಉತ್ತಮ. ಕ್ಯಾರೆಟ್ ಅನ್ನು ಕಿತ್ತು  ಮೊದಲಿಗೆ ಗಿಡದಿಂದ ಅದನ್ನು ಬೇರ್ಪಡಿಸಬೇಕು. ನೀರಿರುವ ತೊಟ್ಟಿಯಲ್ಲಿ ಮಣ್ಣು ಹೋಗುವವರೆಗೂ ತೊಳೆಯಬೇಕು.  ನಂತರ ನೀರಿನ ಅಂಶವನ್ನು ಒಣಗಿಸಿ ಗಾಳಿಯಾಡದ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ಪ್ರಿಡ್ಜ್ ನಲ್ಲಿ ಸಾಗಿಸಿದರೆ ಕ್ಯಾರೆಟ್ ಫ್ರೆಶ್ ಆಗಿರುತ್ತದೆ.

ಕ್ಯಾರೆಟ್ ನಲ್ಲಿ ಹಲವು ವಿಧದ ತಳಿ ಹಾಗೂ ಬಣ್ಣಗಳಿವೆ. ಬೊಲೆರೊ, ಪುಸಾ ಕೇಸರ್, ಮೆಗಾಲಿ, ಇಂಡಿಯಾ ಓಲ್ಡ್, ನಂಟೆಸಾ ಸೂಪಿರಿಯರ್,
ಸೇರಿದಂತೆ ಹಲವು ಜಾತಿಯ ಕ್ಯಾರೆಟ್ ಬೆಳೆಯಾಲಾಗುತ್ತದೆ. ಕ್ಯಾರೆಟ್ ಕೇವಲ 2 ರಿಂದ 3 ತಿಂಗಳ ಅವಧಿಯಲ್ಲೇ  ಪೂರ್ಣ ಪ್ರಮಾಣದ ಫಸಲು ಬೆಳೆಯುತ್ತದೆ.
ಕ್ಯಾರೆಟ್ ಗೆ ಹೆಚ್ಚಿನ ಬೇಡಿಕೆ ಹಾಗೂ ಹೆಚ್ಚಿನ ಬೆಲೆ ಇರುವುದರಿಂದ ಎಲ್ಲಾ ಋತುವಿನಲ್ಲಿಯೂ ಬೆಳೆಯಲಾಗುತ್ತದೆ.
ಕ್ಯಾರೆಟ್ ಬಿತ್ತನೆ ಬೀಜ ಕೆಜಿಗೆ 1 ಸಾವಿರ ರೂಪಾಯಿಯಿಂದ ಹಿಡಿದು 15 ಸಾವಿರ ರೂಪಾಯಿ ವರೆಗೂ ಬೆಲೆ ಇರುತ್ತದೆ.
ಕ್ಯಾರೆಟ್ ನಲ್ಲಿ ಹಳದಿ, ಕೆಂಪು, ಬಿಳಿ, ಕಿತ್ತಳೆ ಮತ್ತು ನೀಲಿ ಬಣ್ಣದ ಕ್ಯಾರೆಟ್ ಬೆಳೆಯಾಲಾಗುತ್ತದೆ. ಭಾರತದಲ್ಲಿ  ಕೆಂಪು  ಬಣ್ಣದ ಕ್ಯಾರೆಟ್
ಹೆಚ್ಚು ಬೆಳೆಯಲಾಗುತ್ತದೆ. ಕ್ಯಾರೆಟ್ ಅನ್ನು ಅಮೆರಿಕಾ, ಪೋಲ್ಯಾಂಡ್, ಉಕ್ರೇನ್, ಜಪಾನ್, ಟರ್ಕಿ ಸೇರಿದಂತೆ ಹಲವು ದೇಶಗಳಲ್ಲಿ ಕ್ಯಾರೆಟ್
ಬೆಳೆಯಲಾಗುತ್ತದೆ. ಪ್ರಪಂಚದಲ್ಲೇ ಕ್ಯಾರೆಟ್ ಬೆಳೆಯನ್ನು ಚೀನಾದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.

ಭಾರತದಲ್ಲಿ ಹರ್ಯಾಣ ರಾಜ್ಯದಲ್ಲಿ  ಹೆಚ್ಚಿನ ಕ್ಯಾರೆಟ್ ಬೆಳೆಯಲಾಗುತ್ತದೆ. ಉಳಿದಂತೆ ಆಂಧ್ರ ಪ್ರದೇಶ, ಪಂಜಾಬ್, ತಮಿಳುನಾಡು, ಬಿಹಾರ, ಕರ್ನಾಟಕ ಮತ್ತು ಅಸ್ಸಾಂ- ರಾಜ್ಯಗಳಲ್ಲೂ ಕ್ಯಾರೆಟ್ ಬೆಳೆಯಲಾಗುತ್ತದೆ. ಭಾರತದಲ್ಲಿ 2012 13 ರಲ್ಲಿ 64.33 ಸಾವಿರ ಹೆಕ್ಟೇರ್ ಗಳಲ್ಲಿ, 1147.08 ಸಾವಿರ ಮೆಟ್ರಿಕ್ ಟನ್ಸ್ ಕ್ಯಾರೆಟ್ ಬೆಳೆ ಬೆಳೆಯಲಾಗಿತ್ತು.
ಭಾರತದಿಂದ ಯುಎಇ, ಯುಕೆ, ಮಾಲ್ಡೀವ್ಸ್, ಬಾಂಗ್ಲಾ, ಸೇರಿದಂತೆ ಹಲವು ದೇಶಗಳಿಗೆ ಕ್ಯಾರೆಟ್ ರಪ್ತು ಮಾಡಲಾಗುತ್ತದೆ.
2012 13 ರಲ್ಲಿ 278. 97 ಮೆಟ್ರಿಕ್ ಟನ್ ಕ್ಯಾರೆಟ್ ಅನ್ನು ಭಾರತ ರಪ್ತು ಮಾಡಿತ್ತು. ಒಂದು ವೇಳೆ  ಸರ್ಕಾರ ಕ್ಯಾರೆಟ್ ಬೆಳೆಯಲು ರೈತರನ್ನು ಪ್ರೋತ್ಸಾಹಿಸಿದರೆ ಪ್ರಪಂಚದಲ್ಲೇ ಭಾರತ ಕ್ಯಾರೆಟ್ ಬೆಳೆಯುವ 6ನೇ ದೇಶವಾಗುತ್ತದೆ.  ಅಂಕಿ ಅಂಶ ದ ಪ್ರಕಾರ ಭಾರತ ಈಗ 14 ನೇ ಸ್ಥಾನದಲ್ಲಿದೆ. ಬೆಳೆಗೆ ತಗಲುವ ರೋಗ, ಮಾರುಕಟ್ಟೆ ವ್ಯವಸ್ಥೆ, ಸೇರಿದಂತೆ ಇರುವ ಸಮಸ್ಯೆಗಳನ್ನು ಬಗೆಹರಿಸಿದರೆ ಭಾರತದಲ್ಲೂ ಕೂಡ ಅತಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾರೆಟ್ ಬೆಳೆಯಬಹುದು.




Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com