ಪ್ರಮುಖವಾಗಿ ಪಿಎಂ2.5 ಮಾಲಿನ್ಯಕಾರಕವನ್ನು ಹೊರಸೂಸುವ ಕಾರ್ಖಾನೆಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳು ಮತ್ತು ಸಾರಿಗೆ ವಾಹನಗಳು ಕೂಡ 2015ರಲ್ಲಿ ಅತಿ ಹೆಚ್ಚು ಭಾರತೀಯರ ಸಾವಿಗೆ ಕಾರಣವಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಲ್ಯಾನ್ಸೆಟ್ ವರದಿಯಂತೆ 1980ರಿಂದೀಚೆಗೆ ಭಾರತ ತನ್ನ ವಿದ್ಯುತ್ ಉತ್ಪಾದನೆಯನ್ನು ತ್ರಿಗುಣಗೊಳಿಸಿದ್ದು, ಈ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಉಪಯೋಗಿಸುವ ಪ್ರಮಾಣ ಶೇ. 22ರಿಂದ ಶೇ. 44ಕ್ಕೆ ಏರಿದೆ. ಅಂತೆಯೇ 2015ರ ಸಮಯದಲ್ಲೂ ಭಾರತದ ಹಲವು ಮನೆಗಳಲ್ಲಿ ಇಂದಿಗೂ ಸೌದೆ ಒಲೆಯನ್ನೇ ಬಳಕೆ ಮಾಡುತ್ತಿದ್ದು, ಅದರಿಂದ ಹೊರ ಸೂಸುವ ಪಿಎಂ 2.5 ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.