ಪರಿಸರ ಮಾಲಿನ್ಯ ತಡೆಯುವಲ್ಲಿ ವಿಫಲ ರಾಷ್ಟ್ರಗಳ ಪೈಕಿ ಭಾರತಕ್ಕೆ 4ನೇ ಸ್ಥಾನ

ಪರಿಸರ ಮಾಲಿನ್ಯ ತಡೆಯುವಲ್ಲಿ ಭಾರತ ವಿಫಲವಾಗಿದ್ದು ಜಾಗತಿಕ ಪರಿಸರ ಸಾಧನಾ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 177ನೇ ಸ್ಥಾನ ಪಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪರಿಸರ ಮಾಲಿನ್ಯ ತಡೆಯುವಲ್ಲಿ ಭಾರತ ವಿಫಲವಾಗಿದ್ದು ಜಾಗತಿಕ ಪರಿಸರ ಸಾಧನಾ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 177ನೇ ಸ್ಥಾನ ಪಡೆದಿದೆ. 
ಜಾಗತಿಕ ಪರಿಸರ ಸಾಧನಾ ಸೂಚ್ಯಂಕ(ಜಿಇಪಿಐ) ದ್ವೈವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು ಭಾರತ ಕಳೆದ 2 ವರ್ಷಗಳಿಗಿಂತಲೂ ಕಳಪೆ ಸಾಧನೆ ತೋರಿದೆ. 
ಗ್ರೀನ್ ರ್ಯಾಂಕಿಂಗ್ ನಲ್ಲಿ ಸ್ವಿಜರ್ಲ್ಯಾಂಡ್ ಮೊದಲ ಸ್ಥಾನ ಪಡೆದಿದ್ದರೆ, ಫ್ರಾನ್ಸ್, ಡೆನ್ಮಾರ್ಕ್, ಮಾಲ್ಟಾ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದಿವೆ. 
2016ರಲ್ಲಿ ಜಿಇಪಿಐ ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತ 141ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ 36 ಸ್ಥಾನ ಕುಸಿತ ಕಂಡಿದ್ದು 177ನೇ ಸ್ಥಾನ ಪಡೆದಿದೆ. 
ಜಿಇಪಿಐ ಒಟ್ಟು 180 ದೇಶಗಳ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ಸಮೀಕ್ಷೆಯಲ್ಲಿ ದೇಶದ ಗಾಳಿ, ನೀರಿನ ಗುಣಮಟ್ಟ, ನೈರ್ಮಲ್ಯ, ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಪ್ರಮಾಣ, ಅರಣ್ಯದ ಪ್ರಮಾಣ, ಅರಣ್ಯ ನಾಶದ ತೀವ್ರತೆ ಹೀಗೆ ಒಟ್ಟು 10 ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಿ ಅಂಕಗಳನ್ನು ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com