ಗೃಹ ಬಳಕೆ ವಸ್ತುಗಳಿಂದಲೇ ವಾಸ್ತು ಸಮಸ್ಯೆ ಪರಿಹಾರ ಸಾಧ್ಯ..!

ಮನೆ ನಮಗೆಲ್ಲಾ ಬೇಕಾಗಿರುವ ಒಂದು ಆಶ್ರಯ ತಾಣ. ಪ್ರತಿಯೊಬ್ಬರ ಜೀವನದಲ್ಲಿಯೂ ಮನೆ ಎಂಬುದು ಪ್ರಮುಖ ಭಾಗವಾಗಿರುತ್ತದೆ. ಯಾವುದೇ ಮನೆಗೆ ಹೋಗುವಾಗ ಮೊದಲು...
ಮನೆ ವಸ್ತು ಬಳಕೆಯಿಂದಲೂ ವಾಸ್ತು ದೋಷ ಪರಿಹಾರ ಸಾಧ್ಯ
ಮನೆ ವಸ್ತು ಬಳಕೆಯಿಂದಲೂ ವಾಸ್ತು ದೋಷ ಪರಿಹಾರ ಸಾಧ್ಯ
Updated on

ಮನೆ ನಮಗೆಲ್ಲಾಬೇಕಾಗಿರುವ ಒಂದು ಆಶ್ರಯ ತಾಣ. ಪ್ರತಿಯೊಬ್ಬರ ಜೀವನದಲ್ಲಿಯೂ ಮನೆ ಎಂಬುದು ಪ್ರಮುಖಭಾಗವಾಗಿರುತ್ತದೆ. ಯಾವುದೇ ಮನೆಗೆ ಹೋಗುವಾಗ ಮೊದಲು ಆ ಮನೆಯ ಹಿನ್ನೆಲೆ, ದೋಷಗಳ ಕುರಿತಂತೆ ಮಾಹಿತಿ ತಿಳಿದುಕೊಂಡು ಹೋಗುವುದಂತಹದ್ದನ್ನು ಹಿಂದಿನಿಂದಲೂಭಾರತೀಯರು ಮುಂದುವರೆಸಿಕೊಂಡು ಬಂದಿರುವ ಸಂಸ್ಕೃತಿ.

ನಮ್ಮ ಹಿರಿಯರುಯಾವುದೇ ಸಂಸ್ಕೃತಿ, ನಿಯಮ, ಆಚರಣೆಗಳನ್ನು ಮಾಡಿದ್ದರೂ ಅದಕ್ಕೆ ಒಂದು ರೀತಿಯಪ್ರಮುಖ ಹಾಗೂ ಬಲವಾದ ಕಾರಣಗಳು ಇದ್ದೇ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವಾಸಿಸಲುಯೋಗ್ಯವಾದುದೇ ವಾಸ್ತು. ಮನೆ ನಿರ್ಮಾಣದ ಪರಿಸರ ಮನೆಗೆ ಜೊತೆಗೆ ಮನಸ್ಸಿಗೆ ಹತ್ತಿರ ಸಂಬಂಧವಿರುವಕಾರಣದಿಂದಲೇ ಪರಿಸರಕ್ಕೆ ಆದ್ಯತೆ ನೀಡಲಾಗಿದೆ. ಸ್ವಚ್ಛ ಮತ್ತು ಶಾಂತಿಯುತವಾದ ಪರಿಸರವಿದ್ದರೆಸಾಕು. ಮನೆಯೊಳಗೆ ಪ್ರವೇಶಿಸಿದ ಯಾವುದೇ ವ್ಯಕ್ತಿ ಮನೆಯಿಂದ ಹೊರಗೆ ಓಡಿ ಬರಬೇಕೆಂಬ ಭಾವನೆ ಬಾರದರೀತಿಯಲ್ಲಿ ಮನೆಯೊಳಗಿನ ಪರಿಸರವಿರಬೇಕು. ಅದು ನಿಜವಾಗಿಯೂ ಒಳ್ಳೆಯ ಮನೆ. ಮನೆ ಬಣ್ಣದಿಂದಕಂಗೊಳಿಸಿದರೆ ಸಾಲದು. ಮನೆಯಲ್ಲಿರುವ ಮನುಜನ ಮನಸ್ಸು ಕೂಡ ಒಳ್ಳೆಯದಾಗಿರಬೇಕು.

 ಭಾರತೀಯರ ವಾಸ್ತುಶಾಸ್ತ್ರ ಬಹಳ ಹಳೆಯ ಹಾಗೂ ಪುರಾತನವಾದುದು. ಅದು ಅಪ್ಪಟ ವೈಜ್ಞಾನಿಕ ಶಾಸ್ತ್ರ ಎನ್ನುವಷ್ಟರಮಟ್ಟಿಗೆ ಹಲವು ಅಭಿಪ್ರಾಯಗಳು ಮೂಡಿವೆ. ನಾವು ವಾಸಿಸುವ ಪ್ರದೇಶಗಳಲ್ಲಿ ನಿರ್ದಿಷ್ಟ ಶಕ್ತಿಗಳುಆವರಿಸಿರುತ್ತವೆ. ನಮ್ಮ ನಡವಳಿಕೆಗಳು, ಸ್ವಭಾವಗಳು ಈಶಕ್ತಿಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗಾಗಿ, ಬಹುತೇಕ ಭಾರತೀಯರೆಲ್ಲರೂ ಈಗ ಶಾಸ್ತ್ರದ ಮೊರೆ ಹೋಗುತ್ತಿರುವುದು. ಇತ್ತೀಚೆಗೆ ನಾವು ಮನೆಅಥವಾ ಕಚೇರಿ ಇನ್ನಾವುದೇ ವಾಸ ಸ್ಥಾನವನ್ನು ಕಂಡರು ಅಲ್ಲಿ ವಾಸ್ತು ಎಂಬ ಪಾರಂಪರಿಕ ಸಂಸ್ಕೃತಿಕಾಣಸಿಗುತ್ತದೆ.

ವಾಸ್ತು ಶಾಸ್ತ್ರಎಂಬುದರ ಕುರಿತಂತೆ ಹಲವರಿಗೆ ತಪ್ಪು ಕಲ್ಪನೆಗಳಿವೆ. ವಾಸ್ತು ಶಾಸ್ತ್ರವನ್ನು ಮನೆಗೆಅಳವಡಿಸಬೇಕಾದರೆ ಹೆಚ್ಚು ಖರ್ಚು, ದುಬಾರಿಯಾಗಿದೆ. ಸಾಮಾನ್ಯರುಇಂತಹ ಸಂಸ್ಕೃತಿ ಅನುಸರಣೆಗಳನ್ನು ತಮ್ಮ ಮನೆಗೆ ಮಾಡಿಕೊಳ್ಳಲುಸಾಧ್ಯವಿಲ್ಲ ಎಂದು ಆಲೋಚಿಸುತ್ತಾರೆ.  ಆದರೆಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಯೂ ನಮ್ಮ ಮನೆಯಲ್ಲಿರುವ ದೋಷಗಳನ್ನುದೂರಮಾಡಿಕೊಳ್ಳಬಹುದೆಂಬುದರ ಕುರಿತು ಆಲೋಚಿಸಿವವರು ತುಂಬಾ ಕಡಿಮೆ.

ಭಾರತೀಯವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿರುವ ವಸ್ತು ಹಾಗೂ ಸಾಮಾಗ್ರಿಗಳನ್ನೇ ಬಳಸಿ ಹೇಗೆ ನಿಮ್ಮಮನೆಯ ವಾಸ್ತು ದೋಷ ಹಾಗೂ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದುದೆಂಬುದರ ಕುರಿತಂತೆ ಕೆಲವುಸಲಹೆಗಳು ಇಲ್ಲಿವೆ.

ನಾಮಫಲಕ
ಮನೆಯ ಬಾಗಿಲಿನಹೊರಗೆ ನಾಮಫಲಕ ಇದ್ದರೆ ಒಳ್ಳೆಯದು.

ಹಣತೆ ದೀಪ

ಪ್ರತೀ ದಿನಬೆಳಗ್ಗೆ ಮತ್ತು ಸಂಜೆ ಹಣತೆಯ ದೀಪ ಮತ್ತು ಊದು ಬತ್ತಿ ಹಚ್ಚಿದರೆ ಒಳ್ಳೆಯದು.

ಅಡುಗೆ ಮನೆ

ಆಗ್ನೇಯದಿಕ್ಕಿನಲ್ಲಿ, ಅಂದರೆ ದಕ್ಷಿಣಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ನಾದರೂ ಇಡಬೇಕು.

ನಿಂಬೆಹಣ್ಣು

ಒಂದು ಗ್ಲಾಸ್ನೀರಿನಲ್ಲಿ ನಿಂಬೆ ಹಣ್ಣು ಇಡಿ, ಪ್ರತೀ ಶನಿವಾರಅದನ್ನು ಬದಲಿಸುತ್ತಾ ಹೋಗಿ. ಇದರಿಂದ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ನಶಿಸುತ್ತದೆ.

ಅಡುಗೆ ಮನೆಯಲ್ಲಿಔಷಧಿ ಸಾಮಾನು ಬೇಡ

ಅಡುಗೆ ಮನೆಯಲ್ಲಿಔಷಧಗಳನ್ನ ಇಡಬಾರದು. ನೆಗಟಿವ್ ಎನರ್ಜಿ ವಕ್ಕರಿಸುವ ಅಪಾಯವಿರುತ್ತದೆ.

ಧ್ಯಾನ

ದಿನಕ್ಕೆಒಮ್ಮೆಯಾದರೂ ಧ್ಯಾನ ಮತ್ತು ಮಂತ್ರೋಪಚಾರ ಮಾಡಿ. ಇದರಿಂದ ಸಕಾರಾತ್ಮಕ ಶಕ್ತಿ ಸಂಚಯವಾಗುತ್ತದೆ.

ಬೆಡ್ ರೂಂನಲ್ಲಿನಕನ್ನಡಿ...

ನೀವು ಮಲಗುವಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ. ಒಂದು ವೇಳೆ, ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ಬೆಡ್ನಿಂದ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನ ದೂರ ಇಡಿ. ಅಥವಾ ಕನ್ನಡಿಯನ್ನ ಬಟ್ಟೆಯಿಂದ ಮುಚ್ಚಿದಬಳಿಕವಷ್ಟೇ ಮಲಗಿಕೊಳ್ಳಿ. ಈ ಕನ್ನಡಿಯಿಂದ ಆರೋಗ್ಯ ಕೆಡುತ್ತದೆ. ಕುಟುಂಬ ವೈಮನಸ್ಸಿಗೆಕಾರಣವಾಗುತ್ತದೆ.

ತೀರ್ಥ

ಮನೆಯಮೂಲೆಯಲ್ಲಿರುವ ಕತ್ತಲೆಯ ಜಾಗದಲ್ಲಿ ದೇವರ ತೀರ್ಥವನ್ನು ಇಟ್ಟು ವಾರಕ್ಕೊಮ್ಮೆ ಬದಲಿಸಿ

ಓಂ,
ಸ್ವಸ್ತಿಕ್ ಚಿಹ್ನೆಗಳು

ಸ್ವಸ್ತಿಕ್ ಮತ್ತುಓಂ ಚಿಹ್ನೆಗಳನ್ನ ಮನೆಯ ಬಾಗಿಲಿನಲ್ಲಿ ಹಾಕಿ.

ಗಂಟೆ

ಪೂಜೆಯ ವೇಳೆ ಗಂಟೆಭಾರಿಸುತ್ತೇವೆ. ಗಂಟೆಯ ಸದ್ದು ಪಾಸಿಟಿವ್ ಎನರ್ಜಿಯನ್ನ ಉತ್ತೇಜಿಸುತ್ತದೆ. ಹೀಗಾಗಿ, ಕಾಂಪೌಂಡ್ ನ ಗೇಟ್ ಗೆ ಗಂಟೆಗಳನ್ನ ಹಾಕಿರಿ.

ಉಪ್ಪು

ಮನೆಯ ಎಲ್ಲಾಮೂಲೆಗಳಲ್ಲೂ ಒಂದೊಂದು ಡಬ್ಬಿಯಲ್ಲಿ ಉಪ್ಪುನ್ನು ಇಡಿ. ಈ ಉಪ್ಪು ನೆಗಟಿವ್ ಎನರ್ಜಿಯನ್ನಹೀರಿಕೊಳ್ಳುತ್ತದೆ. ಒಂದು ವಾರದ ನಂತರ ಈ ಉಪ್ಪನ್ನು ಒಂದು ಪಾತ್ರೆಗೆ ನೀರು ಹಾಕಿ ಕರಗಿಸಿ ನಂತರಅದನ್ನು ನಿಮ್ಮ ಶೌಚಾಲಯದಲ್ಲಿ ಚೆಲ್ಲಿ. ಮತ್ತೆ ಉಪ್ಪನ್ನು ಡಬ್ಬಿಯಲ್ಲಿ ಮನೆಯ ಎಲ್ಲಾ ಮೂಲೆಯಲ್ಲಿಇಡಿ. ಹೀಗೆ ಪ್ರತೀ ವಾರ ಬದಲಿಸುತ್ತಿರಬೇಕು.

ಗಣೇಶ ಪೂಜೆ

ಮೂರು ವರ್ಷಕ್ಕೆಒಮ್ಮೆಯಾದರೂ ಗಣೇಶ ಪೂಜೆ ಮತ್ತು ನವಗ್ರಹ ಶಾಂತಿ ಪೂಜೆಯನ್ನು ಮಾಡಿಸಿದರೆ ಮನೆಯ ವಾಸ್ತು ದೋಷವನ್ನನಿವಾರಿಸಿಕೊಳ್ಳಬಹುದು.

ನಿರ್ದಿಷ್ಠಫೋಟೋಗಳು

ಅಳುತ್ತಿರುವಹೆಂಗಸು, ಯುದ್ಧದ ದೃಶ್ಯ,ಲೈಂಗಿಕವಾಗಿ ಉದ್ರೇಕಿಸುವಭಂಗಿಗಳು, ಕೋಪೋದ್ರಿಕ್ತವ್ಯಕ್ತಿ, ಗೂಬೆ, ರಣಹದ್ದು ಇವೆಲ್ಲವೂ ಅಪಶಕುನಗಳಾಗಿವೆ. ಈ ಫೋಟೋಗಳನ್ನಮನೆಯ ಗೋಡೆಗೆ ತೂಗುಹಾಕಬಾರದು.

ವಾಸುದೇವ ಮಂತ್ರ

ಓಂ ನಮೋ ಭಗವತೇವಾಸುದೇವಾಯ ಎಂಬ ಮಂತ್ರವನ್ನ ಪಠಿಸಿದರೆ ಮನೆಯ ವಾಸ್ತು ದೋಷವನ್ನ ನಿವಾರಿಸಬಹುದು.

ಅಕ್ವೇರಿಯಂ

ಲಿವಿಂಗ್ ರೂಮಿನಆಗ್ನೇಯ (ಸೌಥ್ ಈಸ್ಟ್) ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಐಶ್ವರ್ಯ ತುಂಬುತ್ತದೆ.

ಗೋಮೂತ್ರಸಿಂಪಡಿಸುವುದು
ವಾರಕ್ಕೊಮ್ಮೆಯಾದರೂಮನೆಗೆ ಗೋಮೂತ್ರವನ್ನು ಹಾಕಬೇಕು. ಇದರಿಂದ ಕೆಟ್ಟಶಕ್ತಿಗಳ ತೊಂದರೆಯ ನಿವಾರಣೆಯಾಗುತ್ತದೆ.

ಧೂಪ ಹಾಕುವುದು

ಪ್ರತಿದಿನ ಎರಡು ಸಲಮನೆಯಲ್ಲಿ ಧೂಪವನ್ನು ಹಾಕಬೇಕು. ಇದರಿಂದ ವಾಸ್ತುವಿನಲ್ಲಿ ಒಳ್ಳೆಯ ಶಕ್ತಿಗಳು ಆಕರ್ಷಿತವಾಗಿವಾಸ್ತುವಿನ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಹಾಗೆಯೇ ಕೆಲವೊಂದು ಕೆಟ್ಟಶಕ್ತಿಗಳುವಾಸ್ತುವಿನಿಂದ ದೂರ ಹೋಗುತ್ತವೆ. ಮನಸ್ಸಿಗೂ ಶಾಂತಿ ದೊರೆತು, ಧನಾತ್ಮಕ ಚಿಂತನೆಗಳು ಹೆಚ್ಚುತ್ತವೆ.

ಉಪ್ಪು ನೀರಿನಲ್ಲಿಮನೆ ಶುದ್ಧಗೊಳಿಸಿ

ನಿಮ್ಮ ಮನೆಯನ್ನುಉಪ್ಪುನೀರಿನಲ್ಲಿ ವಾರದಲ್ಲಿ ಎರಡು ಬಾರಿ ಸ್ವಚ್ಛಗೊಳಿಸಬೇಕು ಇದರಿಂದ ನಿಮ್ಮ ಮನೆಯಲ್ಲಿ ದುಷ್ಟಶಕ್ತಿಗಳೇನಾದರೂ ಇದ್ದರೆ ದೂರವಾಗುವುದು.

ಬೋನ್ಸಾಯಿ ಗಿಡ

ನಿಮ್ಮ ಮನೆಯೊಳಗೆಬೋನ್ಸಾಯಿ ಗಿಡಗಳನ್ನು ಎಂದಿಗೂ ಇಡಬೇಡಿ ಇವು ನಿಮ್ಮ ಜೀವನದ ಯಾವುದೇ ಒಂದು ಭಾಗವನ್ನುಋಣಾತ್ಮಕವಾಗಿ ಪ್ರಭಾವಿಸುವ ಸಾಧ್ಯತೆ ಇದೆ.

ದೇವರ ಮನೆಯ ಬಗ್ಗೆಕಾಳಜಿ ವಹಿಸಿ

ನಿಮ್ಮ ಮನೆಯ ದೇವರಮನೆಯನ್ನು ಯಾವುದೇ ಕಪ್ ಬೋರ್ಡ್ ಅಥವಾ ಸೆಲ್ಫ್ ನ ಕೆಳಗೆ ಇಡಬೇಡಿ ಹೀಗೆ ಮಾಡಿದ್ದಲ್ಲಿ ನೀವುಯಾವಾಗಲೂ ಒತ್ತಡದಲ್ಲಿರಬೇಕಾದ ಅನಿವಾರ್ಯತೆ ಬರುತ್ತದೆ.

ಮಲಗುವ ದಿಕ್ಕು

ಮಲಗುವಾಗ ಯಾವಾಗಲೂನಿಮ್ಮ ತಲೆ ದಕ್ಷಿಣ ಅಥವಾ ಪಶ್ಚಿಮಕ್ಕೆ ತಲೆ ಮಾಡಿ ಮಲಗಿ. ಆದರೆ ಮನೆಯ ಮುಖ್ಯ ದುಡಿಯುವ ಯಜಮಾನಈಶಾನ್ಯ ದಿಕ್ಕಿಗೆ ತಲೆ ಮಾಡಿ ಮಲಗಲಿ.

ಮನೆಗೆ ಕೆಂಪು ಬಣ್ಣಬೇಡ

ಮನೆಗೆ ಬಣ್ಣಬಳಿಯುವಾಗ ಬಹಳ ಪ್ರಕಾಶಮಾನವಾದ ಬಣ್ಣಗಳಾದ ಕೆಂಪು ಮತ್ತು ನೇರಳೆ ಬಣ್ಣಗಳನ್ನು ಬಳಸಬೇಡಿ. ಇವುಅನಾರೋಗ್ಯವನ್ನು ಉಂಟುಮಾಡುವ ಶಕ್ತಿಯನ್ನು ನಿಮ್ಮ ಮನೆಯಲ್ಲಿ ಹೆಚ್ಚಿಸುತ್ತವೆ.

ಅನಾವಶ್ಯಕವಸ್ತುಗಳನ್ನು ಮನೆಯಲ್ಲಿರಿಸಬೇಡಿ
ಮನೆಯಲ್ಲಿ ಬೇಡದಅನಾವಶ್ಯಕ ವಸ್ತುಗಳನ್ನು ಇಡಬೇಡಿ. ಕೆಲಸ ಮುಗಿಯುತ್ತಿದ್ದಂತೆ ಅವುಗಳನ್ನು ಬಿಸಾಡಿ. ಇದರಿಂದಮಾನಸಿಕ ಶಕ್ತಿ ಹೆಚ್ಚುತ್ತದೆ.

-ಮಂಜುಳ.ವಿ.ಎನ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com