ಇವು ಯಾತ್ರಾರ್ಥಿಗಳು ಅಗತ್ಯವಾಗಿ ಗಮದಲ್ಲಿಡಬೇಕಾದ ಅಂಶಗಳು!

ಭಾರತದಲ್ಲಿ ಪುಣ್ಯಕ್ಷೇತ್ರ, ತೀರ್ಥಯಾತ್ರೆಗಳಿಗೆ ವಿಶೇಷವಾದ ಮಹತ್ವವಿದೆ. ಬಹುತೇಕರು ಒಮ್ಮೆಯಾದರೂ ಈ ರೀತಿಯಲ್ಲಿ ಪುಣ್ಯಕ್ಷೇತ್ರ, ತೀರ್ಥಯಾತ್ರೆಗಳನ್ನು ಕೈಗೊಳ್ಳಬೇಕೆಂದು ಬಯಸುತ್ತಾರೆ.
ತೀರ್ಥಯಾತ್ರೆ
ತೀರ್ಥಯಾತ್ರೆ
Updated on
ಭಾರತದಲ್ಲಿ ಪುಣ್ಯಕ್ಷೇತ್ರ, ತೀರ್ಥಯಾತ್ರೆಗಳಿಗೆ ವಿಶೇಷವಾದ ಮಹತ್ವವಿದೆ. ಬಹುತೇಕರು ಒಮ್ಮೆಯಾದರೂ ಈ ರೀತಿಯಲ್ಲಿ ಪುಣ್ಯಕ್ಷೇತ್ರ, ತೀರ್ಥಯಾತ್ರೆಗಳನ್ನು ಕೈಗೊಳ್ಳಬೇಕೆಂದು ಬಯಸುತ್ತಾರೆ. ತೀರ್ಥಯಾತ್ರೆ ಕೇವಲ ಪುಣ್ಯ ಕ್ಷೇತ್ರಗಳ ಭೇಟಿಯಷ್ಟೇ ಅಲ್ಲದೇ ಅದಕ್ಕಿಂತಲೂ ಹೆಚ್ಚಿನ ಮಹತ್ವವಿದೆ. 
ತೀರ್ಥಯಾತ್ರೆ ಕೈಗೊಳ್ಳುವಾಗ ಮಾಡಿದರೆ ಉಂಟಾಗುವ ಒಳಿತು ಹಾಗೂ ಕೆಲವು ಅಂಶಗಳನ್ನು ಪಾಲಿಸುವುದರಿಂದ ಉಂಟಾಗುವ ಲಾಭಗಳ ಕುರಿತ ಮಾಹಿತಿ ಇಲ್ಲಿದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಪ್ರತಿಯೊಬ್ಬ ಯಾತ್ರಿಕರೂ ಸಹ ಪ್ರಮುಖ 5 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯಾತ್ರೆ ನಡೆಸಿದರೆ ಅದು ಯಶಸ್ವಿಯಾಗುತ್ತದೆ ಹಾಗೂ ತೀರ್ಥಯಾತ್ರೆಯ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 
ತೀರ್ಥಯಾತ್ರೆ ಕೈಗೊಳ್ಳುವಾಗ ಗಮನದಲ್ಲಿಡಬೇಕಾದ 5 ಅಂಶಗಳು: 
  • ತೀರ್ಥಯಾತ್ರೆಯಿಂದ ಮೋಕ್ಷ ಸಾಧನೆ ಸಾಧ್ಯವಿದೆ ಎಂದು ಹೇಳಲಾಗಿದ್ದು, ತೀರ್ಥಯಾತ್ರೆ ಕೈಗೊಳ್ಳುವ ವೇಳೆಯಲ್ಲಿ ಅಗತ್ಯವಿರುವವರಿಗೆ ಸಾಧ್ಯವಾದಷ್ಟು ಸಹಾಯ, ಸೇವೆ ಮಾಡಿದರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ.   
  • ದೇವರು ಎಂದಿಗೂ ಹಣ-ಅಥವಾ ಇನ್ನಿತರ ಉತ್ಪನ್ನಗಳನ್ನು ಬಯಸುವುದಿಲ್ಲ "ಪತ್ರಂ , ಪುಷ್ಪಂ , ಫಲಂ , ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ । ತದಹಂ ಭಕ್ತ್ಯುಪಹೃತಮಶ್ನಾಮಿ , ಪ್ರಯತಾತ್ಮನಃ॥ ಎಂದು ಭಗವದ್ಗೀತೆಯಲ್ಲಿ ಭಗವಂತನೇ ಹೇಳಿದ್ದಾನೆ. ಅಂದರೆ ನನಗೆ ಯಾರಾದರೂ ಭಕ್ತಿಯಿಂದ ಒಂದು ಎಲೆ , ಒಂದು ಹೂವು , ಒಂದು ಫಲ , ಕೊನೆಗೆ ಒಂದು ಬೊಗಸೆ ನೀರನ್ನು ಸಮರ್ಪಿಸುವರೋ ಅದನ್ನು ನಾನು ಸಂತೋಷದಿಂದ ಸ್ವೀಕರಿಸಿ , ಸಂತುಷ್ಟನಾಗಿ ಅನುಗ್ರಹಿಸುವೆ ಎಂಬ ಅರ್ಥವಿದೆ. ಈ ಹಿನ್ನೆಲೆಯಲ್ಲಿ ಭಗವಂತನಿಗೆ ಹಣ ಅಥವಾ ಇನ್ನಿತರ ಉತ್ಪನ್ನಗಳನ್ನು ಎಥೇಚ್ಛವಾಗಿ ಸಮರ್ಪಿಸದೇ ಇದ್ದರೂ ಪರೋಪಕಾರ ಮಾಡಿದರೆ ಅದರಿಂದ ಪರಮಾತ್ಮ ಸಂತುಷ್ಟನಾಗಿ ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ತೀರ್ಥ ಯಾತ್ರೆ ವೇಳೆಯಲ್ಲಿ ಅಗತ್ಯವಿರುವವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿದರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ. 
  • ತಿಳಿದೋ ತಿಳಿಯದೆಯೋ ಮಾಡಿದ್ದ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ತನ್ಮೂಲಕ ಮನಸ್ಸನ್ನು ಹಗುರವಾಗಿಸಿಕೊಳ್ಳುವುದಕ್ಕೂ ಸಹ ತೀರ್ಥಯಾತ್ರೆ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ತೀರ್ಥಯಾತ್ರೆ ನಂತರ, ಅಥವಾ ಅದಕ್ಕೂ ಮುನ್ನ ತಪ್ಪುಗಳನ್ನು ಮಾಡದೇ ಇರುವಂತೆ ಎಚ್ಚರ ವಹಿಸಿ. 
  • ತೀರ್ಥಕ್ಷೇತ್ರಗಳಲ್ಲಿ ಪುಣ್ಯ ಸ್ನಾನ ಮಾಡಬೇಕಾದರೆ ನಿಮ್ಮ ಆಲೋಚನೆಗಳು ಸದ್ಭಾವನೆಯಿಂದ ಕೂಡಿದ್ದರೆ ಅದರಿಂದ ತೀರ್ಥಯಾತ್ರೆಯ ಫಲ ಪ್ರಾಪ್ತಿಯಾಗುತ್ತದೆ. 
  • ನಿಮಗೆ ತೀರ್ಥಯಾತ್ರೆಗೆ ಯಾವುದೇ ರೀತಿಯಲ್ಲಿ ಮತ್ತೊಬ್ಬರು ಸಹಾಯ ಮಾಡಿದ್ದರೂ ಸಹ ಅವರಿಗೂ ಆ ಪುಣ್ಯ ಲಭ್ಯವಾಗುತ್ತದೆ. ನಿಜವಾಗಿಯೂ ತೀರ್ಥಯಾತ್ರೆ ಮಾಡಬೇಕೆಂದು ಮನಸ್ಸಿನಲ್ಲಿ ಆಲೋಚನೆ ಮೂಡಬೇಕೆ ಹೊರತು ದುರಾಸೆಯಿಂದ ಮಾಡುವುದು ಸೂಕ್ತವಲ್ಲ. ಈ ಎಲ್ಲಾ 5 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಥಯಾತ್ರೆ ಮಾಡಿದರೆ ಅದಕ್ಕೆ ಖಂಡಿತವಾಗಿಯೂ ಸಕಾರಾತ್ಮಕ ಫಲ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com