ಅತ್ಯುತ್ತಮ ಜೀವನ ನಡೆಸಲು 5 ಸರಳ ಸೂತ್ರಗಳು

ಸನಾತನ ಧರ್ಮದಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ಈ ಪರಂಪರೆಯನ್ನು ಧರ್ಮ ಎನ್ನುವ ಬದಲು ಜೀವನ ವಿಧಾನವೆಂದೇ ಗುರುತಿಸಲಾಗುತ್ತದೆ. ಸನಾತನ ಧರ್ಮದ ಆಧ್ಯಾತ್ಮ ವಿಶಿಷ್ಟ ರೀತಿಯ ವಿಜ್ಞಾನವು ಹೌದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸನಾತನ ಧರ್ಮದಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ಈ ಪರಂಪರೆಯನ್ನು ಧರ್ಮ ಎನ್ನುವ ಬದಲು ಜೀವನ ವಿಧಾನವೆಂದೇ ಗುರುತಿಸಲಾಗುತ್ತದೆ. ಸನಾತನ ಧರ್ಮದ ಆಧ್ಯಾತ್ಮ ವಿಶಿಷ್ಟ ರೀತಿಯ  ವಿಜ್ಞಾನವು ಹೌದಾಗಿದೆ.

ಲೌಕಿಕ ಜೀವನದಲ್ಲಿದ್ದುಕೊಂಡು ಸಹ ಆಧ್ಯಾತ್ಮಿಕ ಸಾಧನೆ ಮಾಡಿದವರ ಅನೇಕ ಉದಾಹರಣೆಗಳಿದ್ದು, ಇಂತಹ ಆಧ್ಯಾತ್ಮಿಕ ಜೀವನ ನಡೆಸಲು ಸನಾತನ ಧರ್ಮದಲ್ಲಿ ಒಂದಷ್ಟು ನಿಯಮಗಳನ್ನು ನೀಡಲಾಗಿದೆ. ಈ ನಿಯಮಗಳನ್ನು  ಪಾಲಿಸಿದ್ದೇ ಆದಲ್ಲಿ, ಅತ್ಯುತ್ತಮ ಜೀವನವನ್ನು ನಡೆಸಬಹುದಾಗಿದೆ ಎಂಬ ನಂಬಿಕೆ ಇದೆ. ಈ ನಿಯಮಗಳಿಗೆ ಯಮ, ನಿಯಮಗಳೆಂದು ಹೆಸರು ನೀಡಲಾಗಿದ್ದು, ನಿಯಂತ್ರಣ ಹಾಗು ಅಭ್ಯಾಸಗಳೆಂದು ಇವುಗಳನ್ನು  ಕರೆಯಬಹುದಾಗಿದ್ದು ಈ ಕೆಲವು ನಿಯಮಗಳನ್ನು ಪಾಲಿಸಿದರೆ ಉತ್ತಮವಾದ, ಮನಶಾಂತಿ ಹೊಂದಿರುವ ಜೀವನವನ್ನು ನಡೆಸಬಹುದಾಗಿದೆ.

ಅಹಿಂಸೆ ಮತ್ತು ಕೋಪವನ್ನು ನಿಗ್ರಹಿಸುವುದು

ಕೋಪದ ಕೈಗೆ ಬುದ್ಧಿ ಕೊಡಬಾರದು ಎಂದು ಹಿರಿಯರು ಹೇಳುತ್ತಾರೆ, ಕೋಪದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಯಾವುದು ಸಹ ಉತ್ತಮವಾಗುವುದಿಲ್ಲ. ಅಂತೆಯೇ ಅತ್ಯುತ್ತಮ ಜೀವನ ನಡೆಸಲು ಓರ್ವ ವ್ಯಕ್ತಿ ಅಹಿಂಸೆಯನ್ನು  ಅಳವಡಿಸಿಕೊಳ್ಳಬೇಕು ಎನ್ನುತ್ತದೆ ಸನಾತನ ಧರ್ಮ. ಹೀಗೆ ಮಾಡುವುದರಿಂದ ಮನಸ್ಸು ಶಾಂತವಾಗಿರಲಿದ್ದು, ಯಾವುದೇ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ದೃಢವಾಗಿ ಅತ್ಯುತ್ತಮ ಫಲಿತಾಂಶ ಬರಲಿದೆ.

ಅಗತ್ಯಕ್ಕಿಂತ ಹೆಚ್ಚಿನದ್ದನ್ನು ಉಳಿದವರ ಒಳಿತಿಗೆ ನೀಡಿ
ಸನಾತನ ಧರ್ಮದಲ್ಲಿ ಸಂಪತ್ತು ಗಳಿಸುವುದನ್ನು ತಪ್ಪು ಎಂದು ಹೇಳಲಾಗಿಲ್ಲ. ಬದಲಾಗಿ ಓರ್ವ ವ್ಯಕ್ತಿ ತನ್ನ ಅಗತ್ಯಕ್ಕಿಂತ ಹೆಚ್ಚು ಸಂಪಾದಿಸಿದರೆ ಹೆಚ್ಚು ಸಂತೋಷವಾಗಿರುತ್ತಾನೆ. ಆದರೆ ತನ್ನ ಅಗತ್ಯಗಳನ್ನು ಪೂರೈಸಿದ ನಂತರ   ಉಳಿದಿದ್ದನ್ನು ಅಗತ್ಯವಿರುವ ಇತರರಿಗೆ ನೀಡುವುದರಿಂದ ಆತನ ಒಳಗಿನ ಸಂತೋಷ ಮತ್ತಷ್ಟು ಹೆಚ್ಚಾಗಲಿದೆ ಇದರಿಂದ ಮತ್ತಷ್ಟು ನೆಮ್ಮದಿಯ ಜೀವನ ನಡೆಸಬಹುದೆಂದು ಹೇಳಲಾಗಿದೆ.

ನಂಬಿಕೆ, ಆಸ್ತಿಕ್ಯ
ಇದು ಸನಾತನ ಧರ್ಮ ಮಾನವ ಕುಲಕ್ಕೆ ಮಾಡಿರುವ ಬಹು ದೊಡ್ಡ ಬೋಧನೆ, ಯಾವುದೇ ಕೆಲಸ ಮಾಡುವ ಮುನ್ನ ಶ್ರದ್ಧೆಯಿಂದ ಮಾಡಬೇಕೆಂದು ಸನಾತನ ಧರ್ಮದ ಎಲ್ಲಾ ಅವತಾರ ಪುರುಷರು ಹೇಳಿದ್ದಾರೆ. ಅಂತೆಯೇ,  ಮಾಡುವ ಕೆಲಸದಲ್ಲಿ ನಂಬಿಕೆ ಇಡಬೇಕು, ಆಗ ಸಕಾರಾತ್ಮಕ ಫಲಿತಾಂಶವೇ ದೊರೆಯಲಿದೆ ಎಂಬ ನಂಬಿಕೆಯಿದೆ, ನಂಬಿಕೆ ಇದ್ದರೆ ಮೋಕ್ಷವು ಸಾಧ್ಯ ಎಂದು ಹೇಳಲಾಗಿದೆ.

ಮತ್ಸರ ತ್ಯಜಿಸುವುದು
ಯಾರನ್ನು ಸಹ ದ್ವೇಷಿಸದೆ, ಸೇಡು ತೀರಿಸಿಕೊಳ್ಳದೆ, ಕೇವಲ ತನ್ನ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿದರೆ, ಅದರಿಂದ ಮನುಷ್ಯನ ಅಭಿವೃದ್ಧಿ ಮತ್ತಷ್ಟು ಉತ್ತಮವಾಗಲಿದೆ

ಧ್ಯಾನ, ದೇವರ ಪೂಜೆ
ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವುದಕ್ಕೆ ಧ್ಯಾನ ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಇದರಿಂದಾಗಿ ಚಿತ್ತ ಶುದ್ಧಿ ಸಾಧ್ಯವಾಗಲಿದ್ದು, ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com