ಶಾಲೆಗಳಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ಮಕ್ಕಳಿಗೆ ಹಬ್ಬಗಳ ಮಹತ್ವ ಹೇಳಿಕೊಡಿ: ಡಾ. ಆರತಿ .ವಿ.ಬಿ

ಭಾರತೀಯ ಸಂಸ್ಕೃತಿಯ ಹೆಗ್ಗುರುತು ಹಬ್ಬಹರಿದಿನಗಳು, ಹಬ್ಬ ಎಂದರೆ ಪರ್ವ ಎಂಬ ಶಬ್ದದಿಂದ ಬಂದ ಪದ. ಪರ್ವ ಎಂದರೆ ಬಹಳ ಪ್ರಧಾನವಾದದ್ದು, ಜೀವನದ ನಮ್ಮ ಕಲೆ,ಸಂಸ್ಕೃತಿ, ಸಾಮಾಜಿಕ ಜೀವನ, ಬಂಧು ಮಿತ್ರರೊಂದಿಗಿನ ಒಡನಾಟ, ದೈವಚಿಂತನೆ, ವ್ಯಾಪಾರ, ದಿನ ನಿತ್ಯದ ಜೀವನಗಳು ಗರಿಗೆದರಿ ನಿಲ್ಲುವ ದಿನವನ್ನು ಹಬ್ಬ ಎಂದು ಕರೆಯುತ್ತೇವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತೀಯ ಸಂಸ್ಕೃತಿಯ ಹೆಗ್ಗುರುತು ಹಬ್ಬಹರಿದಿನಗಳು, ಹಬ್ಬ ಎಂದರೆ ಪರ್ವ ಎಂಬ ಶಬ್ದದಿಂದ ಬಂದ ಪದ. ಪರ್ವ ಎಂದರೆ ಬಹಳ ಪ್ರಧಾನವಾದದ್ದು, ಜೀವನದ ನಮ್ಮ ಕಲೆ,ಸಂಸ್ಕೃತಿ, ಸಾಮಾಜಿಕ ಜೀವನ, ಬಂಧು ಮಿತ್ರರೊಂದಿಗಿನ ಒಡನಾಟ, ದೈವಚಿಂತನೆ, ವ್ಯಾಪಾರ, ದಿನ ನಿತ್ಯದ ಜೀವನಗಳು ಗರಿಗೆದರಿ ನಿಲ್ಲುವ ದಿನವನ್ನು ಹಬ್ಬ ಎಂದು ಕರೆಯುತ್ತೇವೆ.

ಈ ಹಬ್ಬದಂದು ಅದು ನಾಡಹಬ್ಬ ದಸರಾದಿಂದ ಹಿಡಿದು ಯಾವ ಹಬ್ಬವೇ ಆಗಿರಲಿ ಮನೆಮಂದಿಯೆಲ್ಲಾ ಒಟ್ಟಿಗೆ ಸೇರಿ ಸಂತಸ-ಸಂಭ್ರಮದಿಂದ ಒಟ್ಟಿಗೆ ಕೆಲಸ ಮಾಡಿ, ಒಟ್ಟಿಗೆ ಜತೆಯಲ್ಲಿ ಪೂಜೆ ಮಾಡಿ, ಭಕ್ಷ-ಭೋಜ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಒಟ್ಟಿಗೆ ಕುಳಿತು ಊಟ ಮಾಡುವ, ಒಟ್ಟಿಗೆ ಗೀತ-ನೃತ್ಯ ಮಾಡುತ್ತಾ, ನಕ್ಕು ನಲಿಯುತ್ತಾ ಬೆರೆಯುವ ಸುಸಂದರ್ಭಗಳು ಹಬ್ಬಗಳ ದಿನಗಳು.

ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಮನುಷ್ಯರ ಮನಸ್ಸಿನಲ್ಲಿ ಹೊಸ ಉತ್ಸಾಹ, ಸಂಭ್ರಮ ಮೂಡುತ್ತದೆ, ಒಂದು ಸಾಮಾಜಿಕ ಬಾಂಧವ್ಯ ಉಂಟಾಗುತ್ತದೆ, ಭಾವೈಕ್ಯ ಮೂಡುತ್ತದೆ, ದೇಶದ, ಸಂಸ್ಕೃತಿಯ ಅಸ್ಮಿತೆ ನಮ್ಮ ಹಬ್ಬಗಳು. 

ಈ ಅರ್ಥಪೂರ್ಣವಾದ ವ್ಯವಸ್ಥೆ ಹಬ್ಬಗಳ ಸಮಯದಲ್ಲಿ ಮನೆಯಲ್ಲಿ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಇದರ ಮಹತ್ವವನ್ನು, ಹಬ್ಬಗಳ ಆಚರಣೆ, ಸಂಪ್ರದಾಯ, ಪೂಜಾ ವಿಧಾನ, ಆಚಾರ-ವಿಚಾರಗಳು, ನೈವೇದ್ಯ-ಮನೆಯವರೊಂದಿಗೆ, ಅಕ್ಕಪಕ್ಕದ ಮನೆಯವರು, ಬಂಧು-ಮಿತ್ರರೊಂದಿಗೆ ಬೆರೆಯುವುದನ್ನು ಹೇಳಿಕೊಡಬೇಕು. ಹಬ್ಬಗಳ ದಿನ ಮನೆಯಲ್ಲಿ ಮಕ್ಕಳು ತಮ್ಮ ಪಾಡಿಗೆ ಒಂದು ಶರ್ಟ್, ಚಡ್ಡಿ ಧರಿಸಿಕೊಂಡು ಮೊಬೈಲ್, ಟಿವಿ-ಕಂಪ್ಯೂಟರ್ ಮುಂದೆ ಕುಳಿತುಕೊಂಡಿರುವುದು ಸರಿಯಲ್ಲ ಎನ್ನುತ್ತಾರೆ ಧಾರ್ಮಿಕ, ಆಧ್ಯಾತ್ಮಿಕ ಚಿಂತಕಿ ಡಾ.ಆರತಿ.ವಿ.ಬಿ.

ಅವಿಭಕ್ತ ಕುಟುಂಬಗಳಲ್ಲಿ ಕುಟುಂಬ ಸದಸ್ಯರು ಸೇರಿ ಕೆಲಸ ಮಾಡುತ್ತಾರೆ, ಆದರೆ ವಿಭಕ್ತ ಕುಟುಂಬದಲ್ಲಿ ಕಚೇರಿಗಳಲ್ಲಿ ರಜೆ ಸಿಗದಿದ್ದರೆ ಮಹಿಳೆಯರಿಗೂ ಹಬ್ಬಗಳನ್ನು ಆಚರಿಸಲು, ಮಕ್ಕಳಿಗೆ ಹಬ್ಬಗಳ ಮಹತ್ವ ಹೇಳಿಕೊಡಲು ಕಷ್ಟವಾಗುತ್ತದೆ. ಹಬ್ಬಗಳ ದಿನವಾದರೂ ಮನೆಗಳಲ್ಲಿ ಮಕ್ಕಳು ಬೆಳಗ್ಗೆಯೇ ಆಭ್ಯಂಜನ ಮಾಡಿ, ಶುಚಿಯ ಬಣ್ಣದ ಬಟ್ಟೆ ಧರಿಸಿ ಕೈಗೆ ಬಳೆ, ತಲೆಗೂದಲನ್ನು ಚೆನ್ನಾಗಿ ಬಾಚಿಕೊಂಡು ಹೂ ಮುಡಿದು ಅಕ್ಕಪಕ್ಕದ ಮನೆಗಳಿಗೆ ಕುಂಕುಮಕ್ಕೆ ಹೋಗಿ ಅವರನ್ನೂ ಬರಲು ಹೇಳುವ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. 

ಹಬ್ಬಹರಿದಿನಗಳ ಹಿಂದೆ-ಮುಂದೆ ಶಾಲೆಗಳಲ್ಲಿ ಸಹ ಸಣ್ಣ ಮಕ್ಕಳಿಗೆ ಪರೀಕ್ಷೆ ಇಡುವುದು, ಹಬ್ಬಗಳ ರಜೆಯ ಸಂದರ್ಭದಲ್ಲಿ ಎಲ್ಲಿಗೋ ಪಿಕ್ ನಿಕ್ ಕರೆದುಕೊಂಡು ಹೋಗುವುದು ಸರಿಯಾದ ಸಂಸ್ಕೃತಿ, ಕ್ರಮವಲ್ಲ ಎನ್ನುತ್ತಾರೆ ಅವರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com