ಸರಳತೆಯ ಪೂಜೆಗೂ ಒಲಿವನು ಗಣಪ

ಮಹಾಗಣಪತಿಯ ಆರಾಧನೆಯಲ್ಲಿ ಯಾರು ಮಾಡಬೇಕು ಎನ್ನುವ ಭೇದವಿಲ್ಲ. ಪ್ರೀತಿಯಿಂದ ಪೂಜಿಸುವ ಪ್ರತಿಯೊಬ್ಬರಿಗೂ ಅವನು ಒಲಿಯುತ್ತಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲೇಖಕಿ: ಸುಜಲ ಘೋರ್ಪಡೆ

ಭಾದ್ರಪದ ಶುದ್ಧ ಚೌತಿ ಎಂದರೆ ಗಣಪತಿ ಭಕ್ತರಿಗೆ ಎಲ್ಲಿಲ್ಲದ ಸಡಗರ. ಪ್ರಥಮ ಪೂಜಿತಗಣಪತಿ ವಿಘ್ನನಿವಾರಕನಾದ ದೇವ. ಆದುದರಿಂದ ನಾವು ಮೊದಲು ಯಾವುದೇ ಕಾರ್ಯಕ್ರಮವಿರಲಿ ಸಕಲವೂ ಶುಭ ಪ್ರದವಾಗಲೆಂದು ಆಶಿಸುತ್ತಾ ಪ್ರಥಮ ಪೂಜಿತಗೆ ಪೂಜೆಯನ್ನು ಸಲ್ಲಿಸುತ್ತೇವೆ.

‘ಅವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ’ ಎಂದು ಕೈಜೋಡಿಸಿ ಪ್ರಾರ್ಥಿಸುತ್ತೇವೆ. ಈ ವಿಷಯವನ್ನು ತಿಳಿಸುವ ಕಥೆ ಸ್ಕಾಂದ ಪುರಾಣದಲ್ಲಿದೆ.

ವಿನಾಯಕ ಭಕ್ತರನ್ನು ಕರುಣೆಯಿಂದ ನೋಡುವ ಆವರ ಮನದ ಅಭಿಷ್ಟಗಳನ್ನು ನೆರವೇರಿಸಿ ಅವರೆಲ್ಲಾ ಕಾರ್ಯವೂ ನೀರ್ವಿಘ್ನವಾಗಿ ನೆರವೇರಿಸುವ ದೇವತೆ. ನಂಬಿದವರ ಸಂಕಷ್ಟಗಳನ್ನು ಹರಣ ಮಾಡುತ್ತಾನಾದ್ದರಿಂದ ಅವನು ಸಂಕಷ್ಟಹಾರಕ ಗಣಪತಿ.

ಶೋಕವನ್ನು ನಾಶ ಮಾಡುತ್ತಾನೆ ಶೋಕಹರ ಭಕ್ತರಿಗೂ ಗಣಪತಿ ಎಂದರೆ  ಅಕ್ಕರೆ ಪ್ರೀತಿ. ಆದುದರಿಂದಲೇ ಮಕ್ಕಳು ಬೀದಿ-ಬೀದಿಯಲ್ಲಿ ಇವನ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ಅಂಗಳದಿಂದ ಒಳಮನೆಯ ದೇವರಗೂಡಿನವರೆಗೂ ಇವನಿಗೆ ಸ್ವಾಗತವಿದೆ. ಪ್ರಥಮ ಸ್ಥಾನವಿದೆ.

ಆನೆಯ ಮುಖವುಳ್ಳ ಇವನಿಗೆ ಗಜಾನನ, ಉಮಾಸುತ, ಗೌರಿ ತನಯ,ಗಣಪತಿ,ಗಜಮುಖ, ಏಕದಂತ, ಕರೀವದನ, ವಕ್ರತುಂಡ, ಗಜಸ್ಯ,ಲಂಬೋಧರ, ವಿನಾಯಕ ವಿಘ್ನನಾಶ,ಶೂರ್ಪಕರ್ಣ, ಹೆರಂಭ,ಮೋದಕ ಪ್ರಿಯ, ಗಣನಾಯಕ, ಕುಬ್ಜ,ಮೋದಕ ಹಸ್ತ, ಗಣೇಶ್ವರ ಎಂಬ 108 ಹೆಸರುಗಳಿಂದ ಅವನನ್ನು ಅರ್ಚಿಸಿ ಪೂಜಿಸುತ್ತೇವೆ.

ಪ್ರಣವ ವಿದ್ಯೆಯೇ ಗಣೇಶ ವಿದ್ಯೆಯಮೂಲ. ಗಣೇಶ ಸಾಕ್ಷಾತ್‌ ಬ್ರಹ್ಮ. ಅವನು ಬ್ರಹ್ಮ ವಿಷ್ಣು ಮಹೇಶ್ವರ ಸ್ವರೂಪ. ತ್ರಿಗುಣಾತೀತ. ಕಾಲಾತೀತ. ಪ್ರಕೃತಿ ಸ್ವರೂಪನಾಗಿದ್ದು ಪ್ರಕೃತಿಯನ್ನೇ ವಶಪಡಿಸಿಕೊಂಡವ. ಇವನು ಶಕ್ತಿತ್ರಯಾತ್ಮಕ. ಹಾಗಾಗಿ ಮಣ್ಣಿನ ಮೂರ್ತಿಯೇ ಪೂಜೆಗೆ ಸ್ರೇಷ್ಠ ಎನ್ನಲಾಗಿದೆ.

ಮಹಾಗಣಪತಿಯ ಆರಾಧನೆಯಲ್ಲಿ ಯಾರು ಮಾಡಬೇಕು ಎನ್ನುವ ಭೇದವಿಲ್ಲ. ಪ್ರೀತಿಯಿಂದ ಪೂಜಿಸುವ ಪ್ರತಿಯೊಬ್ಬರಿಗೂ ಅವನು ಒಲಿಯುತ್ತಾನೆ.

ಗಣಪತಿ ಮೋದಕ ಪ್ರಿಯ. ಇವನು ರಕ್ತಚಂದನವನ್ನು ಲೇಪಿಸಿಕೊಂಡವನು. ಕೆಂಪುಬಟ್ಟೆಯನ್ನು ಉಟ್ಟವನು. ಕೆಂಪು ಹೂವುಗಳೆಂದರೆ ಇವನಿಗೆ ಇಷ್ಟ. ಗಣಪತಿ ವಿದ್ಯಾವಾರಿಧಿ. ಸಕಲ ವಿದ್ಯೆಗಳೂ ಇವನಲ್ಲಿ ನೆಲೆಗೊಂಡಿವೆ.  ಆದುದರಿಂದ ವಿದ್ಯಾಭ್ಯಾಸಕ್ಕೆ ಮೊದಲು ಗಣಪತಿಯ ಪೂಜೆ. ಶಿವಗಣಕ್ಕೆ ನಾಯಕ.

ಇನ್ನೂ ಗಣಪತಿ ಪೂಜಾ ವಿಧಾನವೆಂದರೆ  ಶುಭ ಮುಹೂರ್ತದಲ್ಲಿ ಗಣಪತಿಯನ್ನೂ ಮನೆಗೇ ತಂದು ಮಂಟಪದಲ್ಲಿ ಕೂರಿಸಿ ಮಂತ್ರೋಚ್ಚಾರಣೆ ಮಾಡುತ್ತಾ ಶುದ್ಧದಕವನ್ನು ಸಿಂಪಡಿಸಿ ಪವಿತ್ರಗೊಳಿಸಿ ಚಂದನ ಸಿಂಧೂರ ತಿಲಕವಿರಿಸಿ. ಪತ್ರ ಪುಷ್ಪ, ಗರಿಗೆ ಎಕ್ಕದ ಹೂವು ಕೆಂಪು ದಾಸವಾಳ ಹೂಗಳಿಂದ  ಗಣಪತಿಯ ನೂರಾ ಎಂಟು ನಾಮಗಳನ್ನು ಹೇಳಿಕೊಂಡು ಅರ್ಚಿಸಿ ಪೂಜಿಸಬೇಕು ಕಡಬು, ಮೋದಕ ಮುಂತಾದ ಭಕ್ಷಗಳು ಗಣಪತಿಗೆ ಪ್ರಿಯ. ಭಕ್ತಿಯಿಂದ ಅರ್ಪಿಸುವ ಒಂದು ಗರಿಕೆಗೂ ಗಣಪತಿ ಒಲಿಯುತ್ತಾನೆ.

ಗಣಪತಿಯ ಕಥೆ ಬಹಳವಿದ್ದರೂ ಈ ಕಥೆ ಎಲ್ಲರಿಗೂ ತಿಳಿದ ಪುರಾಣ ಕಥೆಯಾಗಿದೆ.

ಆಲಿಸಿರಿ ಗಣಪತಿಯ ಜನನದ ಕಥೆಯ. 
ಗೌರಿದೇವಿಯು ಸ್ನಾನಕೆ ತಾ ಹೊರಟಿರಲು. 
ಹಚ್ಚಿಕೊಂಡಿದ್ದ ಅರಶಿಣ ಚಂದನ ಲೇಪನದಿಂದ 
ಮಾಡಿದಳೊoದು ಬಾಲಕನ ಸುಂದರ ಮೂರುತಿ.
ಜೀವವನಿತ್ತಳು ಅದಕೆ. ನಗುತಾ ಅಮ್ಮ ಎಂದನು ಬಾಲಕ. ಸ್ನಾನಕೇ ಹೋಗುವೆ ಮಗನೇ ಕಾವಲಿರು 
ನೀ ಬಾಗಿಲೊಳು ಬಿಡದಿರು ಒಳಗೆ ಯಾರನ್ನೂ. 
ಆಗಲಿ ಎಂದನು ಬಾಲಕ ಕಾವಲು ನಿಂದು ಬಾಗಿಲೊಳು ಕಾವಲು ಕಾಯುತಲಿದ್ದನು. 

ಶಿವನು ಬಂದನು ಗಿರಿಜೆಯ ನೋಡುವ ತವಕದಲಿ. 
ಬಾಗಿಲಲಿ ನಿಂತ ಹುಡುಗನ ಕಂಡು  ಅವನ ಸುಂದರವದನವ ಕಂಡು ಮುಗುಳು ನಗುತಾ ಒಳಗೆ ಹೋಗಲು ನೋಡಿದನು.  ಬಿಡಲಾರೆನೆಂದವಗೆ 
ಪರಿಪರಿ ರೀತಿಯಲ್ಲಿ ಹೇಳಿದರೂ ಕೇಳೇನೆಂದನು 
ಹುಡುಗನು ಬಿಡಲಾರೆ ನಾನು ನೀನ್ಯಾರೆ ಆಗಿದ್ದರೂ 
ಅಮ್ಮನ ಅಪ್ಪಣೆಯಾಗಿದೆ ನನಗೇ. ನಾನವಳಪತಿ ಎಂದರೂ ಕೇಳದೇ ವಾದಕ್ಕೆ ಇಳಿದನು. ಗಣಗಳ 
ಸೋಲಿಸಿ ಓಡಿಸಿದಾಗ ಕೋಪವು ಬಂದಿತು ಶಿವನಿಗೆ.

ತಾಳಿದ ಶಿವನು ರೌದ್ರಾವತಾರವ  ಬಾಲಕನ 
ತಲೆಯ ತಿರಿದೇ ಬಿಟ್ಟನ್ನು ಶಿರವ ತುಂಡರಿಸಿದನು. 
ಸ್ನಾನವ ಮುಗಿಸಿ ಹೊರಗೆ ಬಂದ ಗೌರಿಯು 
ಕಂಡಳು ರುಂಡ ಮುಂಡ ಬೇರಾದ ಬಾಲಕನ 
ದ್ರವಿಸಿ ಹೋಯಿತು ಅವಳ ಹೃದಯ ಅತ್ತು 
ಗೋಳಾಡಿದಳು ಬದುಕಿಸಿರೆನ್ನ ಮುದ್ದು ಕಂದನ 
ಎನ್ನುತ ಪತಿಯನ್ನು ಬೇಡಿದಳು. ಅಪ್ಪಣೆಯಿತ್ತನು 
ಶಿವಗಣಗಳಿಗೆ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿದ
ಪ್ರಾಣಿಯ ಶಿರವ ಕತ್ತರಿಸಿ ತರಲು ಹೇಳಿದನು. 

ಉತ್ತರಕೆ ತಲೆಯಿಟ್ಟು ಮಲಗಿದ ಗಜಾಸುರನಿಗೆ 
ಧೋರಕಿತು ಮುಕುತಿಯು. ಬಾಲ ಗಣಪಗೆ 
ಶಿರವು ದೊರೆಯಿತು ಮತ್ತೇ ಎದ್ದು ಕುಳಿತನು 
ಬಾಲಕನು ವಂದಿಸಿದನು ಮಾತ ಪಿತರಿಗೆ 
ಪ್ರಥಮ ಪೂಜಿತನೆಂದು ಪೂಜಿಸಲಿ ನಿನ್ನನುಎನ್ನುತ. 
ಗಜಾನನ ಹರಿಸಿದನು ಮಹಾದೇವನು. 
ಪ್ರಥಮನು ಗಣಪತಿಯೇ ಅಂಗ ಜೋಡಣೆಗೆ. 
ಪರಶಿವನಾದನು ಧನ್ವಂತರಿ ಬೇಡುವ ಎಲ್ಲರೂ 
ಶುಭವನ್ನು ಕೋರಿ ನಮಿಸುವ ಗಣನಾಥನಿಗೆ. 
ಜೈ ಗಣೇಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com