ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ..... ಧರೆಗೆ ದೊಡ್ಡಣ್ಣ- ಕರ್ಮ ಫಲದಾತ 'ಶನಿ'ಯನ್ನು ಒಲಿಸಿಕೊಳ್ಳೋದೇಗೆ; ಕಂಟಕ ಶನಿ- ಸಾಡೇಸಾತಿಗೆ ವ್ಯತ್ಯಾಸವೇನು?

ಶನಿದೇವನು ಸೂರ್ಯ ಭಗವಂತನೂ ಛಾಯಾದೇವಿಯ ಪುತ್ರನೆಂದು ಪುರಾಣಗಳು ಹೇಳುತ್ತವೆ. ಯಮಧರ್ಮರಾಜನ ಸಹೋದರನಾದುದರಿಂದ ಕರ್ಮಫಲವೂ ಶನಿಯೊಂದಿಗೆ ಬರುತ್ತದೆ
AI Image
ಎಐ ಚಿತ್ರ
Updated on

ಹಿಂದೂ ಪುರಾಣಗಳಲ್ಲಿ ಶನಿದೇವನಿಗೆ ವಿಶೇಷ ಸ್ಥಾನವಿದೆ. ಶನಿ ಎಂದರೆ ಭಯಪಡಿಸುವ ಗ್ರಹವಲ್ಲ. ಮನುಷ್ಯನ ಕರ್ಮಫಲಗಳನ್ನು ನ್ಯಾಯವಾಗಿ ಅನುಭವಿಸುವಂತೆ ಮಾಡುವ ದೈವನೀತಿಯ ಪ್ರತೀಕ. ಶನಿದೇವನನ್ನು ಸ್ಮರಿಸುವುದರಿಂದ ಜೀವನದಲ್ಲಿ ಶಾಂತಿಯು ಸಹನೆ ಮತ್ತು ಧಾರ್ಮಿಕ ಪ್ರಜ್ಞೆ ಬೆಳೆಯುತ್ತದೆ ಎಂಬ ಪ್ರತೀತಿಯಿದೆ.

ಶನಿದೇವನ ಪುರಾಣ ಮಹತ್ವ

ಶನಿದೇವನು ಸೂರ್ಯ ಭಗವಂತನೂ ಛಾಯಾದೇವಿಯ ಪುತ್ರನೆಂದು ಪುರಾಣಗಳು ಹೇಳುತ್ತವೆ. ಯಮಧರ್ಮರಾಜನ ಸಹೋದರನಾದುದರಿಂದ ನೀತಿಯು ಕರ್ಮಫಲವೂ ಶನಿಯೊಂದಿಗೆ ಕಂಡುಬರುತ್ತದೆ. ಮಾನವನು ಮಾಡಿದ ಸತ್ಕರ್ಮಗಳಿಗೂ ದುಷ್ಕರ್ಮಗಳಿಗೂ ಸಮಯಾನುಸಾರ ಫಲಿತಾಂಶ ನೀಡುತ್ತೆನೆ. ದೈವಿಕ ಶಕ್ತಿಯಾಗಿ ಶನಿಯನ್ನು ಆರಾಧಿಸಲಾಗುತ್ತದೆ.

ಒಂದು ಪ್ರಸಿದ್ಧ ಕಥೆಯಲ್ಲಿ, ಶನಿದೇವನ ದೃಷ್ಟಿ ಬೀಳುತ್ತದೆಂದು ಎಲ್ಲರೂ ಭಯಪಡುತ್ತಿದ್ದರು. ಆದರೆ ಧರ್ಮ ನಿಷ್ಠನಾದ ಒಬ್ಬ ಮಹಾತ್ಮಾನನ್ನು ಶನಿ ಪರೀಕ್ಷೆ ಮಾಡಿದಾಗ, ಅವನು ಸತ್ಯವನ್ನು ಬಿಟ್ಟುಕೊಡಲಿಲ್ಲ. ಅಂತಿಮವಾಗಿ ಶನಿದೇವನು ಪ್ರತ್ಯಕ್ಷನಾಗಿ ಹೇಳಿದರು. ನಾನು ಶಿಕ್ಷಿಸಲು ಅಲ್ಲ, ಮಾನವನ ಕರ್ಮದಿಂದ ಪಕ್ವವಾಗಿಸುತ್ತೇನೆ. ಸತ್ಯ- ಧರ್ಮ ಕೈಬಿಡದವರನ್ನು ನಾನು ಅಂತಿಮವಾಗಿ ಅನುಗ್ರಹಿಸುತ್ತೇನೆ ಎಂದು ಹೇಳತ್ತಾನೆ ಶನಿ. ಈ ಕಥೆ ಶನಿಮಹಾತ್ಮನ ಉಪಾಸನೆಯ ನಿಜವಾದ ಸಂದೇಶವನ್ನು ಸ್ಪಷ್ಟಪಡಿಸುತ್ತದೆ.

ಶನಿ ಸ್ತೋತ್ರ ಜಪದ ಪ್ರಾಮಖ್ಯತೆ

ಶನಿ ಸ್ತೋತ್ರವನ್ನು ಭಕ್ತಿಯಿಂದ ಜಪಿಸುತ್ತಿರುವವರಿಗೆ ಅಂದುಕೊಂಡ ಕೆಲಸ ಕಾರ್ಯಗಳು ನೆರವೇರುತ್ತವೆ.

ಮನಶಾಂತಿ

ಶನಿವಾರದಂದು ಬೆಳಗಿನ ಸಮಯದಲ್ಲಿ ಅಥವಾ ಸಂಧ್ಯಾಸಮಯದಲ್ಲಿ ಈ ಸ್ತೋತ್ರವನ್ನು ಜಪಿಸುವುದು ಶ್ರೇಯಸ್ಕರವೆಂದು ಭಾವಿಸಲಾಗಿದೆ.

ಏಳರ ಶನಿ :- ಸಾಡೇ ಸಾತಿ

ಜ್ಯೋತಿಷ್ಯದಲ್ಲಿ 'ಏಳರ ಶನಿ' ಅಥವಾ ಹೆಚ್ಚಾಗಿ ಕರೆಯಲ್ಪಡುವ ಸಾಡೇ ಸತಿ ಶನಿ ಎಂದರೆ ವ್ಯಕ್ತಿಯ ಜನ್ಮ ರಾಶಿಯ ಸುತ್ತ ಶನಿಯು ಸಂಚರಿಸುವ ಒಟ್ಟು ಏಳೂವರೆ ವರ್ಷಗಳ ದೀರ್ಘ ಕಾಲ. ಇದು ವ್ಯಕ್ತಿಯ ಜೀವನದಲ್ಲಿ ಕಷ್ಟ, ಸವಾಲುಗಳು ಹಾಗೂ ಕಠಿಣ ಪಾಠಗಳನ್ನು ತರುವ ಸಮಯವೆಂದು ನಂಬಲಾಗಿದೆ

ಜನ್ಮ ರಾಶಿಗೆ ಹಿಂದಿನ ರಾಶಿಯಲ್ಲಿ ಶನಿ ಪ್ರವೇಶಿಸಿದಾಗ ಮಾನಸಿಕ ಚಿಂತೆ ಮತ್ತು ಖರ್ಚುಗಳು ಹೆಚ್ಚಾಗುತ್ತವೆ.

ದ್ವಿತೀಯ ಹಂತ (ಜನ್ಮ ಶನಿ): ಸ್ವತಃ ಜನ್ಮ ರಾಶಿಯ ಮೇಲೆಯೇ ಶನಿ ಇರುವಾಗ ಆರೋಗ್ಯ ಸಮಸ್ಯೆಗಳು ಮತ್ತು ವೃತ್ತಿಯಲ್ಲಿ ಅಡಚಣೆ ಉಂಟಾಗುತ್ತದೆ.

ತೃತೀಯ ಹಂತ (ಧನ ಶನಿ): ಜನ್ಮ ರಾಶಿಯ ಮುಂದಿನ ರಾಶಿಗೆ ಶನಿ ಹೋದಾಗ ಆರ್ಥಿಕ ಹಾಗೂ ಕುಟುಂಬದ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯವಿರುತ್ತದೆ.

ಜ್ಯೋತಿಷದಲ್ಲಿ ಇದು ಕಷ್ಟಕಾಲ ಎಂಬ ಮಾತಿದೆ. ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಯುವುದರಿಂದ ವ್ಯಕ್ತಿಯು ಪಕ್ವವಾಗುತ್ತಾನೆ.

ಕಂಟಕ ಶನಿ:-

ಜ್ಯೋತಿಷ್ಯದಲ್ಲಿ ಕಂಡಕ ಶನಿ (ಕಂಟಕ ಶನಿ) ಎಂದರೆ ಜನ್ಮ ಚಂದ್ರನಿಂದ ಶನಿಯು 4ನೇ, 7ನೇ ಅಥವಾ 10ನೇ ಮನೆಯಲ್ಲಿ ಸಂಚರಿಸುವ ಸುಮಾರು ಎರಡೂವರೆ ವರ್ಷಗಳ ಕಾಲ. 'ಕಂಟಕ' ಎಂದರೆ ಮುಳ್ಳು. ಇದು ಕಾಲ್ಮುಳ್ಳಿನಂತೆ ನಿರಂತರವಾದ ಅಡಚಣೆ, ಮಾನಸಿಕ ಒತ್ತಡ ಹಾಗೂ ಸವಾಲುಗಳನ್ನು ಉಂಟುಮಾಡುತ್ತದೆ.

ಕೌಟುಂಬಿಕ ಕಲಹ, ತಾಯಿಯ ಆರೋಗ್ಯದಲ್ಲಿ ಏರಿಳಿತ, ಮನೆ ಅಥವಾ ವಾಹನಕ್ಕೆ ಸಂಬಂಧಿಸಿದ ನಷ್ಟ ಹಾಗೂ ಅಶಾಂತಿ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ, ಪಾಲುದಾರಿಕೆ ವ್ಯಾಪಾರದಲ್ಲಿ ತೊಂದರೆ ಮತ್ತು ನಿಕಟ ವ್ಯಕ್ತಿಗಳೊಂದಿಗೆ ಮನಸ್ತಾಪ. ಉದ್ಯೋಗ ಅಥವಾ ವೃತ್ತಿಜೀವನದಲ್ಲಿ ಅನಿರೀಕ್ಷಿತ ಸಮಸ್ಯೆಗಳು, ಕೆಲಸದ ಹೊರೆ, ಸ್ಥಾನಪಲ್ಲಟ ಹಾಗೂ ಅಪವಾದಗಳು ಬರುತ್ತವೆ

ಶನಿದೆಶೆ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೆಸೆ ಎಂದರೆ ಶನಿಗ್ರಹದ ಪ್ರಭಾವದಿಂದ ಮನುಷ್ಯನ ಜೀವನದಲ್ಲಿ ಉಂಟಾಗುವ 19 ವರ್ಷಗಳ ದೀರ್ಘ ಅವಧಿ. ಶನಿಯನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಇದು ವ್ಯಕ್ತಿಯ ಹಿಂದಿನ ಒಳ್ಳೆಯ ಅಥವಾ ಕೆಟ್ಟ ಕರ್ಮಗಳಿಗೆ ತಕ್ಕಂತೆ ಫಲಗಳನ್ನು, ಕಷ್ಟ-ಸುಖಗಳನ್ನು ಹಾಗೂ ಜೀವನದ ಪಾಠಗಳನ್ನು ಕಲಿಸುತ್ತದೆ. ಜಾತಕದಲ್ಲಿ ಶನಿ ಉತ್ತಮ ಸ್ಥಾನದಲ್ಲಿದ್ದರೆ ರಾಜಯೋಗವನ್ನೂ, ಕೆಟ್ಟ ಸ್ಥಾನದಲ್ಲಿದ್ದರೆ ಕಷ್ಟಗಳನ್ನೂ ನೀಡುತ್ತಾನೆ.

ಪರಿಹಾರಗಳು - ಆಚರಣೆಗಳು

1. ಪ್ರತಿ ಶನಿವಾರ ಶನಿ ಮಹಾತ್ಮನಿಗೆ ಎಳ್ಳೆಣ್ಣೆ ದೀಪ ಹಚ್ಚುವುದು

2. ಎಳ್ಳುಪಾಯಸಂ ನೇವೇದ್ಯ ಮಾಡುವುದು

3. ಶನಿ ಮಹಾತ್ಮನ ದೇವಾಲಯಗಳಿಗೆ ಹೋಗುವಾಗ ಕಪ್ಪು ಅಥವಾ ಕಡುನೀಲಿ ಬಣ್ಣದ ವಸ್ತ್ರ ಧರಿಸಿಕೊಂಡು ಹೋಗುವುದು.

4. ಶನಿವಾರದಂದು ಅರ್ಹರಿಗೆ ಎಳ್ಳು, ಕಬ್ಬಿಣದ ಪಾತ್ರೆ, ಎಣ್ಣೆ ದಾನ ಮಾಡುವುದು

5. ಕಾಗೆಗಳಿಗೆ ಆಹಾರ ನೀಡುವುದು, ಕಾಗೆ ಶನಿಯ ವಾಹನ ಎಂಬ ನಂಬಿಕೆ ಇದೆ.

6. ಶನಿದೋಷ ಶಮನಕ್ಕಾಗಿ ಹನುಮಾನ್ ಆರಾಧನೆಗೆ ವಿಶೇಷ ಮಹತ್ವವಿದೆ. ಹನುಮಾನ್ ಚಾಲೀಸ ಪಾರಾಯಣ ಬಹಳ ಉತ್ತಮ

ಶನಿವಾರ ಅನುಸರಿಸಬಹುದಾದ ಸರಳ ಪೂಜಾಕ್ರಮ

ಬೆಳಿಗ್ಗೆ ಸ್ನಾನ ಮಾಡಿ ಶನಿಮಂತ್ರಗಳನ್ನು ಪಠಿಸುವುದು.

ಮೂಲಮಂತ್ರ

ಓಂ ಶಂ ಶನೈಶ್ಚರಾಯ ನಮಃ

ಧ್ಯಾನಶ್ಲೋಕಮ್

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ

ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ॥

ಶನಿ ಉಪಾಸನೆಯ ನಿಜವಾದ ಸಂದೇಶ

ಶನಿ ಭಯದ ಪ್ರತೀಕವಲ್ಲ; ಮನಸ್ಸಿನ ನಿಯಂತ್ರಣ ಮತ್ತು ಧರ್ಮ ಮತ್ತು ಕರ್ಮಪ್ರಜ್ಞೆಯ ಗುರುವಾಗಿದ್ದಾನೆ.

ಶನಿ ಮನುಷ್ಯನಿಗೆ ಹೇಳುವ ಮಹತ್ತಾಯ ಪಾಠಗಳು:

ಸತ್ಯವನ್ನು ಪಾಲಿಸು, ಹಿರಿಯರು ಅಸಹಾಯಕರಿಗೆ ಸಹಾಯ ಮಾಡು, ಧಾರ್ವಿುಕ ಜೀವನದೊಂದಿಗೆ ಸೇರಿಕೊಂಡರೆ ಮಾತ್ರ ಆಧ್ಯಾತ್ಮಿಕಫಲ ಸಿಗುತ್ತದೆ ಎಂಬುದು ಪ್ರಮುಖ ಸಂದೇಶ.

ಶನಿ ಗ್ರಹ ಸ್ತೋತ್ರಂ ಜಪಿಸುವುದರಿಂದ ಜೀವನದಲ್ಲಿ ಸತ್ಕರ್ಮಗಳನ್ನು ಮಾಡಲು ಪ್ರೇರೇಪಣೆಯಾಗುತ್ತದೆ. ಜೀವನದಲ್ಲಿ ತಾಳ್ಮೆ, ಆತ್ಮವಿಶ್ವಾಸ, ಧಾರ್ಮಿಕ ಭಾವನೆಗಳು ಬೆಳೆಯುತ್ತವೆ. ಭಾರತೀಯ ಪರಂಪರೆಯಲ್ಲಿದೆ. ಏಳರ ಶನಿ, ಕಂಡಕ ಶನಿ ಅಥವಾ ಶನಿದಶೆಗೆ ಮನುಷ್ಯ ಭಯಪಡಬೇಕಾದ ಅಗತ್ಯವಿಲ್ಲ, ಈ ಸಮಯ ಜೀವನದ ಸಂಪೂರ್ಣ ಜವಾಬ್ದಾರಿಯುತ ಆಧ್ಯಾತ್ಮಿಕ ತರಬೇತಿ ಕಾಲವಾಗಿದೆ. ಧರ್ಮಂ ಕೈಬಿಡದವರನ್ನು ಶನಿ ಅಂತಿಮವಾಗಿ ಅನುಗ್ರಹಿಸುತ್ತದೆ ಎಂಬ ಪುರಾಣಸಂದೇಶವು ನಮ್ಮ ಜೀವನಕ್ಕೂ ಮಾರ್ಗದರ್ಶಕವಾಗಲಿ.

ಓಂ ಶಂ ಶನೈಶ್ಚರಾಯ ನಮಃ

ಡಾ: ಪಿ. ಬಿ.ರಾಜೇಶ್

ಜ್ಯೋತಿಷಿಗಳು ಮತ್ತು ಸಂಖ್ಯಾಶಾಸ್ತ್ರಜ್ಞರು

AI Image
ಡೈಲಿ ಕರ್ಪೂರ ಸ್ನಾನ ಮಾಡಿದರೆ ಬದಲಾಗುತ್ತೆ ಅದೃಷ್ಟ! ಜ್ಯೋತಿಷ್ಯದ ಪ್ರಕಾರ ಏನೆಲ್ಲಾ ಲಾಭ ಗೊತ್ತಾ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com