

ಮೇಷ
ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸುತ್ತೀರಿ, ಹಳೆಯ ಸಮಸ್ಯೆಗಳು ಬಗೆಹರಿಯುತ್ತವೆ. ದಾಖಲೆಗಳು ಅಥವಾ ಒಪ್ಪಂದಗಳು ಪೂರ್ಣಗೊಳ್ಳುತ್ತವೆ. ಗುಂಪು ಹೂಡಿಕೆಗಳನ್ನು ತಪ್ಪಿಸಿ. ಅಸೂಯೆ, ಕೌಟುಂಬಿಕ ಸಮಸ್ಯೆ ಉಲ್ಬಣ ಅವಿವಾಹಿತರಿಗೆ ವಿವಾಹ ಯೋಗ.
ವೃಷಭ
ದೂರದ ಸ್ನೇಹಿತನೊಬ್ಬನಿಂದ ಅನಿರೀಕ್ಷಿತ ಉಡುಗೊರೆ. ಕೆಲಸ ಮಾಡಲು ಮನಸ್ಸು ಇರುವುದಿಲ್ಲ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಕೃಷಿಯಿಂದ ಹೆಚ್ಚು ಆದಾಯ ಬರುವ ಸಾಧ್ಯತೆಗಳಿವೆ. ಒಡಹುಟ್ಟಿದವರಿಂದ ಸೂಕ್ತ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಯೋಗವಿದೆ.
ಮಿಥುನ
ಶೀತ ಬಾಧೆ .ಆದಾಯದಲ್ಲಿ ಇಳಿಕೆ. ಬಂಧುಗಳಿಂದ ಸಹಕಾರ ದೊರೆಯುವುದು ಕಡಿಮೆ. ಆಸ್ತಿ ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ನಡೆಯುವುದಿಲ್ಲ. ವಿದ್ಯಾರ್ಥಿಗಳಿಗೆ ಬಹಳ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಏರುಪೇರುಗಳಾಗುತ್ತವೆ.
ಕಟಕ
ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚಳ. ವೈರಿಗಳಿಂದ ಸಾಕಷ್ಟು ಪ್ರತಿರೋಧ. ಉದರ ಸಂಬಂಧ ರೋಗಗಳು ಉಲ್ಭಣ, ಹೊಸ ಹುಮ್ಮಸ್ಸಿನಿಂದ ಕೆಲಸ ಮಾಡುವಿರಿ. ಆದಾಯವು ಕಡಿಮೆ ಇದ್ದರೂ, ತೊಂದರೆ ಇರುವುದಿಲ್ಲ. ಜಲ ತಜ್ಞರಿಗೆ ಬೇಡಿಕೆ ಹೆಚ್ಚಳ.
ಸಿಂಹ
ಬಂಧುಗಳಿಂದ ಗೌರವ ದೊರೆಯುತ್ತದೆ. ಆದಾಯವು ಉತ್ತಮಗೊಳ್ಳುತ್ತ ಹೋಗುತ್ತದೆ. ಕೃಷಿಭೂಮಿ ಅಭಿವೃದ್ಧಿಯಲ್ಲಿ ಪ್ರಗತಿ. ಮಕ್ಕಳಿಂದ ಆರ್ಥಿಕ ಸಹಕಾರ ಸಾಧ್ಯತೆಗಳಿವೆ. ಹಲ್ಲಿನ ಸಂಬಂಧ ನೋವುಗಳು ಉಲ್ಬಣ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ.
ಕನ್ಯಾ
ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಮುನ್ನಡೆಯುವಿರಿ. ವಿದೇಶ ಪ್ರಯಾಣ ಯೋಗ. ಗಣಿ ಸಂಶೋಧಕರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಆಹಾರ ಸಂಬಂಧದಿಂದ ಅನಾರೋಗ್ಯ ಸಾಧ್ಯತೆ.ಕುಟುಂಬಸ್ಥರನ್ನು ಭೇಟಿ ಮಾಡುವುದರಿಂದ ಹೊಸ ಹೊಸ ಆಲೋಚನೆಗಳು ಮೂಡಲಿದೆ. ಇದು ನಿಮ್ಮ ಉದ್ಯೋಗವನ್ನು ವಿಸ್ತರಿಸಲು ಅವಕಾಶಗಳನ್ನು ನೀಡುವುದು.
ತುಲಾ
ಗುರುವಿನ ಸ್ಥಾನ ಬಲವಾಗಿರುವುದರಿಂದ ನಿಮ್ಮೆಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ. ಈ ರಾಶಿಯ ವೈದ್ಯಕೀಯ, ವಕೀಲ ಹಾಗೂ ಪೊಲೀಸ್ ವೃತ್ತಿಯಲ್ಲಿ ಇರುವವರಿಗೆ ಲಾಭದಾಯಕ ಸಮಯ. ಹಣದ ಹರಿವು ವೇಗವಾಗುವುದು. ಬಯಸಿದ್ದೆಲ್ಲವನ್ನೂ ಖರೀದಿ ಮಾಡುವಿರಿ. ಆದರೆ ಈ ದಿನ ನಿಮ್ಮ ಹಣಕಾಸಿನ ಬಗ್ಗೆ ಜಾಗರೂಕರಾಗಿರುವುದು ಉತ್ತಮ.
ವೃಶ್ಚಿಕ
ಐಷಾರಾಮಿ ವಸ್ತುಗಳ ಖರೀದಿಗೆ ಹೆಚ್ಚು ಹಣವನ್ನು ಖರ್ಚು ಮಾಡುವಿರಿ. ರೈಲ್ವೆ, ರಾಜಕೀಯ, ಬ್ಯಾಂಕಿಂಗ್ ವ್ಯವಹಾರದಲ್ಲಿ ಇರುವವರಿಗೆ ನೆಮ್ಮದಿಯ ಅವಧಿ. ಕೀಲು ಸಂಬಂಧಿ ನೋವುಗಳು ನಿಮ್ಮನ್ನು ಕಾಡಬಹುದು. ನಿಮ್ಮ ಸಂಗಾತಿಯ ಶ್ರಮದಿಂದ ಸಂಸಾರಕ್ಕೆ ಅನುಕೂಲವಾಗುತ್ತದೆ.
ಧನಸ್ಸು
ಕೃಷಿಯಿಂದ ಅನಿರೀಕ್ಷಿತ ಆದಾಯ ಗಳಿಕೆ. ಶತ್ರುಗಳ ಮದ್ಯಸ್ಥಿಕೆಯಿಂದ ನಿಮ್ಮ ಕಾರ್ಯಗಳು ವಿಫಲ. ಹಣದ ವಿಚಾರದಲ್ಲಿ ನೀವು ಮೋಸ ಹೋಗುವ ಸಾಧ್ಯತೆ ಇದೆ. ಬಡ್ಡಿ ವ್ಯವಹಾರ ಮಾಡುವ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರು ಈ ಸಮಯದಲ್ಲಿ ಜಾಗರೂಕರಾಗಿರುವುದು ಉತ್ತಮ.
ಮಕರ
ಈ ರಾಶಿಯ ಉದ್ಯಮಿಗಳು, ರಾಜಕಾರಣಿಗಳು ಕೊಂಚ ಜಾಗರೂಕರಾಗಿರಬೇಕು. ಸೂರ್ಯ ದೇವರನ್ನು ಆರಾಧಿಸುವುದರಿಂದ ನಿಮ್ಮ ಮೇಲಿನ ಕೆಟ್ಟ ಪ್ರಭಾವ ಕಡಿಮೆಯಾಗಲಿದೆ. ಚರ್ಮ ಸಂಬಂಧಿ ಕಾಯಿಲೆಗಳು ಕಾಡಲಿವೆ. ಸಂಗಾತಿಯೊಡನೆ ಮುಸುಕಿನ ಗುದ್ದಾಟ. ಉದ್ದಿಮೆ ನಡೆಸುವವರಿಗೆ ನಿರೀಕ್ಷಿತ ಬೆಂಬಲ.
ಕುಂಭ
ಕೆಲಸದ ಒತ್ತಡದಿಂದ ಅನಾರೋಗ್ಯ. ಸಂಗಾತಿಗೆ ವೃತ್ತಿಯಲ್ಲಿ ಅಭಿವೃದ್ಧಿ. ತಂದೆಯಿಂದ ಸೂಕ್ತ ಮಾರ್ಗದರ್ಶನ . ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಆದಾಯ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಹೊಸ ಆಸ್ತಿ ಖರೀದಿಸಬಹುದು. ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪಡೆಯಲು ಸುಲಭವಾಗುತ್ತದೆ.
ಮೀನ
ಸೋಮಾರಿತನದಿಂದ ದೂರವಿರಿ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟ. ವೃತ್ತಿಪರ ಜೀವನದಲ್ಲಿ, ನೀವು ದೊಡ್ಡ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ. ಕೆಲಸದ ಸವಾಲುಗಳು ಸಹ ಹೆಚ್ಚು. ದೂರ ಪ್ರಯಾಣ ಸಾಧ್ಯತೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸು
Advertisement