ಮನೆಯಲ್ಲಿ ಜೇನುಗೂಡು ಕಟ್ಟುವುದು ಅದೃಷ್ಟವೇ?; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೇನುಹುಳು ಯಾವುದರ ಪ್ರತೀಕ?

ಮನೆಯೊಳಗಿನ ಪರಿಸರದಲ್ಲಿ ಜೇನುಗೂಡು ಕಟ್ಟುವುದು ಶುಭ ಸಂಕೇತ, ಆದರೆ ಕೆಲವು ಆತಂಕಗಳು ಸಹ ಇರುತ್ತದೆ. ಮನೆಯಲ್ಸಿ ಜೇನು ಗೂಡು ಕಟ್ಟುವ ಸಂಬಂಧ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ವಿವಿಧ ನಂಬಿಕೆಗಳು ಅಸ್ತಿತ್ವದಲ್ಲಿವೆ
Representational image
ಸಾಂದರ್ಭಿಕ ಚಿತ್ರ
Updated on

ಪ್ರಕೃತಿಯ ಅತ್ಯಂತ ಅಚ್ಚುಕಟ್ಟಾದ ಜೀವಿಗಳಲ್ಲಿ ಒಂದಾಗಿದೆ ಜೇನು ಹುಳು. ಸಹಭಾಗಿತ್ವ, ಸಂಪಾದನೆ, ನಿಯಮಬದ್ಧ ಜೀವನಕ್ಕೆ ಜೇನುಹುಳುಗಳು ಸಂಕೇತವಾಗಿವೆ.

ಮನೆಯೊಳಗಿನ ಪರಿಸರದಲ್ಲಿ ಜೇನುಗೂಡು ಕಟ್ಟುವುದು ಶುಭ ಸಂಕೇತ, ಆದರೆ ಕೆಲವು ಆತಂಕಗಳು ಸಹ ಇರುತ್ತದೆ. ಮನೆಯಲ್ಸಿ ಜೇನು ಗೂಡು ಕಟ್ಟುವ ಸಂಬಂಧ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ವಿವಿಧ ನಂಬಿಕೆಗಳು ಅಸ್ತಿತ್ವದಲ್ಲಿವೆ. ಪ್ರಾಚೀನ ನಂಬಿಕೆಯ ಪ್ರಕಾರ ಜೇನುಗೂಡು ಐಶ್ವರ್ಯದ ಸಂಕೇತವಾಗಿದೆ.

ಪೂರ್ವ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ ಉತ್ತಮ ಫಲ ನೀಡುತ್ತದೆ. ಆಗ್ನೇಯ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ ಸಂಬಂಧಿಕರಿಂದ ಅನುಕೂಲವಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ ಮನೆಯ ಪರಿಸ್ಥಿತಿ ಉತ್ತಮವಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ, ಉತ್ತಮ ಕಾರ್ಯ ನಡೆಯುತ್ತದೆ. ಇನ್ನು ಕೆಲಸ ಸಂಪೂರ್ಣವಾಗುವ ಸೂಚನೆ ಅಂದ್ರೆ ವಾಯುವ್ಯ ದಿಕ್ಕಿನಲ್ಲಿ ಜೇನುಗೂಡು ಕಟ್ಟುವ ಸೂಚನೆ. ಇದರಿಂದ ಕೈಗೊಂಡ ಕಾರ್ಯ ಸಂಪೂರ್ಣವಾಗುತ್ತದೆ ಎಂದರ್ಥ.ಉತ್ತರ ದಿಕ್ಕಿನಲ್ಲಿ, ಈಶಾನ್ಯ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದ್ರೆ, ಶುಭಸೂಚನೆ, ಶುಭ ಫಲ ದೊರಕುತ್ತದೆ. ಆದರೆ ನೈರುತ್ಯ ಭಾಗದಲ್ಲಿ ಜೇನುಗೂಡು ಕಟ್ಟಿದರೆ ಉತ್ತಮವಲ್ಲ. ಕಷ್ಟಕಾಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಮನೆಯಲ್ಲಿ ಜೇನುಗೂಡು ಕಟ್ಟಿದಾಗ ಮಕ್ಕಳಿರುವ ಮನೆಗಳಲ್ಲಿ ವಿಶೇಷ ಎಚ್ಚರಿಕೆ ಅಗತ್ಯ. ಆದ್ದರಿಂದ  ಶುಭ ಫಲಗಳಿದ್ದರೂ ಸುರಕ್ಷತೆಯನ್ನು ನಿರ್ಲಕ್ಷಿಸಬೇಡಿ. ಮನೆಯಲ್ಲಿ ಜಗಳ, ನೈರ್ಮಲ್ಯದ ಕೊರತೆ, ಅತಿಯಾದ ಶಬ್ದಗಳು ಇರುವ ಮನೆಗಳಲ್ಲಿ ಜೇನುಹುಳುಗಳು ಹೆಚ್ಚು ಕಾಲ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಪ್ರಕೃತಿಯೊಂದಿಗಿನ ಸಂಬಂಧವು ಭಾರತೀಯ ಆಧ್ಯಾತ್ಮಿಕ ಪರಂಪರೆಗಳಲ್ಲಿ ಯಾವಾಗಲೂ ಉತ್ತೇಜಿಸಲ್ಪಟ್ಟಿದೆ. ಪ್ರಕೃತಿಯೊಂದಿಗಿನ ಸಹವರ್ತಿತ್ವದ ಜೊತೆ ಭಾವನೆಯನ್ನು ತೋರಿಸುವುದು ಉತ್ತಮ. ಜೇನು ಗೂಡು ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದ ಪ್ರಕಾರ ಐಶ್ವರ್ಯದ ಪ್ರತೀಕವಾಗಿ ಕಾಣಿಸುತ್ತದೆ, ಆದರೆ ಪ್ರಾಯೋಗಿಕ ಜೀವನದಲ್ಲಿ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಗಮನಿಸಬೇಕು.

ಸಾಕಷ್ಟು ಸ್ಥಳವಿದ್ದರೆ ಜೇನು ಕೃಷಿ ಮಾಡಡಬಹುದು, ಇದರಿಂದ ಅಧಿಕ ಲಾಭವಿದೆ. ಕಾಫಿ ತೋಟಗಳಲ್ಲಿ ರಬ್ಬರ್ ತೋಟಗಳಲ್ಲಿ ಜೇನು ಬೆಳೆದು ಹಲವು ರೈತರು ಯಶಸ್ವಿಯಾಗಿದ್ದಾರೆ. ಪರಿಸರದಲ್ಲಿನ ಜೇನುಹುಳುಗಳ ಉಪಸ್ಥಿತಿಯು ಸುತ್ತಮುತ್ತಲಿನ ಸಸ್ಯಗಳಿಗೆ ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತದೆ ಮತ್ತು ಮನೆಯ ಸುತ್ತಮುತ್ತಲು ಉತ್ತಮ ವಾತಾವರಣ ಇರುವುದನ್ನು ಸೂಚಿಸುತ್ತದೆ. ಆದರೆ ಮನೆಯ ಪ್ರವೇಶದ್ವಾರ, ಕಿಟಕಿ ಅಥವಾ ಮನುಷ್ಯರ ಓಡಾಟವಿರುವ ಸ್ಥಳಗಳಲ್ಲಿ ಜೇನುಗೂಡು ಇದ್ದರೆ, ಜೇನುಹುಳುಗಳು ಕಚ್ಚುವ ಅಪಾಯವಿರುತ್ತದೆ. ಇದು ಅಲರ್ಜಿ ಅಥವಾ ತೀವ್ರ ನೋವಿಗೆ ಕಾರಣವಾಗಬಹುದು.

ಮನೆಯ ಒಳಗೆ ಅಥವಾ ಜನನಿಬಿಡ ಪ್ರದೇಶದಲ್ಲಿ ಜೇನು ಗೂಡಿದ್ದರೆ, ಅದನ್ನು ನೀವೇ ತೆಗೆಯಲು ಹೋಗಬೇಡಿ.ಜೇನು ಸಾಕಾಣಿಕೆದಾರರು ಅಥವಾ ನುರಿತ ತಜ್ಞರನ್ನು ಸಂಪರ್ಕಿಸಿ ಗೂಡನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಿ.

Representational image
ಮನೆಯಿಂದ ಹೊರಡುವಾಗ ಅಪಶಕುನಗಳು ಎದುರಾದರೆ ಏನು ಮಾಡಬೇಕು: ಪ್ರಯಾಣಕ್ಕೆ ಶುಭ ಶಕುನ ಯಾವುದು?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com