Google Maps ಬಳಸಿ Traffic Fine ತಪ್ಪಿಸೋದು ಹೇಗೆ? ಇಲ್ಲಿದೆ ಗೂಗಲ್ ಮ್ಯಾಪ್ ಬಳಸಿ ಪೆಟ್ರೋಲ್-ಡೀಸೆಲ್ ಉಳಿಸೋ ಟಿಪ್ಸ್!

ಗೂಗಲ್ ಮ್ಯಾಪ್ಸ್ ಕೇವಲ ದಾರಿ ತೋರಿಸುವ ಆಪ್ ಅಲ್ಲ. ಇದರಲ್ಲಿರುವ ಕೆಲವು ಹಿಡನ್ ಸೆಟ್ಟಿಂಗ್‌ಗಳನ್ನು ಆನ್ ಮಾಡಿಕೊಳ್ಳುವುದರಿಂದ ನಿಮ್ಮ ಪ್ರಯಾಣವನ್ನು ಬಜೆಟ್ ಸ್ನೇಹಿಯಾಗಿಸಬಹುದು! ಆ ಕುರಿತ ವರದಿ ಇಲ್ಲಿದೆ:
Google Maps
ಗೂಗಲ್ ಮ್ಯಾಪ್Online Desk

Google Maps Hidden Tips: ಬೆಂಗಳೂರಿನ ರಾಜಾಜಿನಗರದಿಂದ ಜಯನಗರಕ್ಕೆ ಕಾರೋ - ಬೈಕ್‌ನಲ್ಲೋ ಹೋಗಬೇಕು ಎಂದ ತಕ್ಷಣ ನಾವು ನೋಡೋದು ಗೂಗಲ್ ಮ್ಯಾಪ್; ಟಾಫಿಕ್ ಹೇಗಿದೆ? ಯಾವ ಮಾರ್ಗದಲ್ಲಿ ಹೋದರೆ ಕಡಿಮೆ ಟೈಮ್ ಹಾಗೂ ಬೇಗ ಹೋಗಬಹುದು? ಎಂದು ನೋಡುತ್ತೇವೆ ಆದರೆ, ನಿಮಗೆ ಗೊತ್ತಾ ಇದೇ ಗೂಗಲ್ ಮ್ಯಾಪ್ ಬಳಸಿ ಟೋಲ್ ಚಾರ್ಜ್, ಇಂಧನ, ಅನಗತ್ಯ ಟ್ರಾಫಿಕ್ ದಂಡವನ್ನೂ ಸುಲಭವಾಗಿ ಉಳಿಸಬಹುದು ಎಂದು?

ಹೌದು, ಗೂಗಲ್ ಮ್ಯಾಪ್ಸ್ ಕೇವಲ ದಾರಿ ತೋರಿಸುವ ಆಪ್ ಅಲ್ಲ. ಇದರಲ್ಲಿರುವ ಕೆಲವು ಹಿಡನ್ ಸೆಟ್ಟಿಂಗ್‌ಗಳನ್ನು ಆನ್ ಮಾಡಿಕೊಳ್ಳುವುದರಿಂದ ನಿಮ್ಮ ಪ್ರಯಾಣವನ್ನು ಬಜೆಟ್ ಸ್ನೇಹಿಯಾಗಿಸಬಹುದು! ಆ ಕುರಿತ ವರದಿ ಇಲ್ಲಿದೆ:

1. ಟೋಲ್ ಶುಲ್ಕವನ್ನು ತಪ್ಪಿಸೋದು ಹೇಗೆ?

Google Maps
ಗೂಗಲ್ ಮ್ಯಾಪ್Online Desk

ಹೆದ್ದಾರಿಗಳಲ್ಲಿ ಅನಗತ್ಯವಾಗಿ ಟೋಲ್ ಗೇಟ್‌ಗಳಿಗೆ ಹಣ ನೀಡುವುದನ್ನು ತಪ್ಪಿಸಲು ಗೂಗಲ್ ಮ್ಯಾಪ್ಸ್‌ನಲ್ಲಿ ಈ ಸೆಟ್ಟಿಂಗ್ ಲಭ್ಯವಿದೆ. ಇದನ್ನು ಆನ್ ಮಾಡಿದರೆ ಮ್ಯಾಪ್ ನಿಮಗೆ ಟೋಲ್ ಇಲ್ಲದ ಪರ್ಯಾಯ ರಸ್ತೆಗಳನ್ನು ತೋರಿಸುತ್ತದೆ.

ಹೇಗೆ ಆನ್ ಮಾಡುವುದು?:

ಗೂಗಲ್ ಮ್ಯಾಪ್ಸ್ ಓಪನ್ ಮಾಡಿ ➔ ನಿಮ್ಮ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ ➔ Settings ➔ Navigation ➔ ಕೆಳಗೆ ಸ್ಕ್ರಾಲ್ ಮಾಡಿ 'Avoid tolls' ಆಯ್ಕೆಯನ್ನು ಆನ್ ಮಾಡಿ.

Google Maps
ನಿಮ್ಮ ಗಾಡಿಗೂ 1234, 999, 1111 ಫ್ಯಾನ್ಸಿ ನಂಬರ್ ಬೇಕಾ? ಹೀಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿ!

2. ಪೆಟ್ರೋಲ್ - ಡೀಸೆಲ್ ಉಳಿಸೋದು ಹೇಗೆ?

Google Maps
ಗೂಗಲ್ ಮ್ಯಾಪ್Online Desk

ಪ್ರಯಾಣದ ವೇಳೆ ಪೆಟ್ರೋಲ್ - ಡೀಸೆಲ್ ಉಳಿಸಲು ಇಕೋ-ಫ್ರೆಂಡ್ಲಿ ರೂಟ್ಸ್ ಎಂಬ ವೈಶಿಷ್ಟ್ಯವನ್ನು ಆನ್ ಮಾಡಬೇಕು. ಇದು, ನಿಮ್ಮ ವಾಹನದ ಇಂಧನ ಪ್ರಕಾರಕ್ಕೆ (ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಅಥವಾ ಎಲೆಕ್ಟ್ರಿಕ್) ತಕ್ಕಂತೆ ಅತ್ಯಂತ ಕಡಿಮೆ ಇಂಧನ ಬಳಕೆಯಾಗುವ ರಸ್ತೆಯನ್ನು ಹುಡುಕಿಕೊಡುತ್ತದೆ. ಇದರಿಂದ ಮೈಲೇಜ್ ಹೆಚ್ಚಿ ಇಂಧನದ ವೆಚ್ಚವೂ ಉಳಿತಾಯವಾಗುತ್ತದೆ.

ಹೇಗೆ ಆನ್ ಮಾಡುವುದು?:

Settings ➔ Navigation ➔ ಕೆಳಗೆ ಸ್ಕ್ರಾಲ್ ಮಾಡಿ 'Prefer fuel-efficient routes' ಆನ್ ಮಾಡಿ. ನಂತರ ನಿಮ್ಮ ವಾಹನದ ಇಂಧನ ಪ್ರಕಾರವನ್ನು (Engine type) ಆಯ್ಕೆ ಮಾಡಿ.

3. ಟ್ರಾಫಿಕ್ ಫೈನ್ ತಪ್ಪಿಸೋದು ಹೇಗೆ?

Google Maps
ಗೂಗಲ್ ಮ್ಯಾಪ್Online Desk

ಪ್ರಯಾಣದ ವೇಳೆ ಅನೇಕ ಬಾರಿ ರಸ್ತೆಯ ಸ್ಪೀಡ್ ಲಿಮಿಟ್ ತಿಳಿಯದೆ ಅತಿ ವೇಗವಾಗಿ ಚಲಿಸಿ ಟ್ರಾಫಿಕ್ ಪೊಲೀಸರಿಗೆ ದಂಡ ಕಟ್ಟುವುದುಂಟು. ಇದನ್ನು ತಪ್ಪಿಸಲು ಗೂಗಲ್ ಮ್ಯಾಪ್ಸ್ ಸ್ಕ್ರೀನ್ ಮೇಲೆಯೇ ಸ್ಪೀಡ್ ಲಿಮಿಟ್ ಎಚ್ಚರಿಕೆಯನ್ನು ನೀಡುತ್ತದೆ.

ಹೇಗೆ ಆನ್ ಮಾಡುವುದು?:

Settings ➔ Navigation ➔ 'Driving options' ಅಡಿಯಲ್ಲಿ 'Speed limits' ಮತ್ತು 'Speedometer' ಎರಡನ್ನೂ ಆನ್ ಮಾಡಿಕೊಳ್ಳಿ.

Google Maps
ಮಳೆಗೆ ನಿಮ್ಮ ವಾಹನ ನೀರಿನಲ್ಲಿ ಮುಳುಗಿದರೆ ಏನು ಮಾಡಬೇಕು? ಇನ್ಸೂರೆನ್ಸ್ ಹಣ ಬೇಕು ಅಂದ್ರೆ ಮೊದಲು ಈ ಕೆಲಸ ಮಾಡಿ!

4. ಆಫ್‌ಲೈನ್ ಮ್ಯಾಪ್ಸ್:

Google Maps
ಗೂಗಲ್ ಮ್ಯಾಪ್Online Desk

ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿ ಜಿಪಿಎಸ್ ಕನೆಕ್ಟ್ ಆಗದೆ ದಾರಿ ತಪ್ಪುವುದು ಅಥವಾ ಇಂಟರ್ನೆಟ್ ಡೇಟಾ ಖಾಲಿಯಾಗುವುದನ್ನು ಇದು ತಪ್ಪಿಸುತ್ತದೆ. ಹಾಗಾಗಿ, ವೈ-ಫೈ ಇದ್ದಾಗಲೇ ನಿಮ್ಮ ನಗರ ಅಥವಾ ಪ್ರಯಾಣಿಸುವ ರಸ್ತೆಯ ಮ್ಯಾಪ್ ಅನ್ನು ಡೌನ್‌ಲೋಡ್ ಮಾಡಿಟ್ಟುಕೊಂಡರೆ ಇಂಟರ್ನೆಟ್ ಇಲ್ಲದಿದ್ದರೂ ಮ್ಯಾಪ್ ಕೆಲಸ ಮಾಡುತ್ತದೆ.

ಹೇಗೆ ಆನ್ ಮಾಡುವುದು?:

ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ ➔ Offline maps ➔ Select your own map ಕ್ಲಿಕ್ ಮಾಡಿ, ನಿಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com