ಕನ್ನಡ ಚಿತ್ರ ನಿರ್ದೇಶಿಸಲು ಸಿದ್ಧ: ಮಣಿರತ್ನಂ

ಕನ್ನಡಕ್ಕೆ ನಾನು ಬರುವುದಿಲ್ಲ ಅಂತ ಎಂದೂ ಹೇಳಿಲ್ಲ. ಕನ್ನಡದಲ್ಲಿ ಸಿನಿಮಾ ಮಾಡಲು ಈಗಲೂ ಸಿದ್ಧ. ಆದರೆ, ನನ್ನ ಚಿತ್ರಕ್ಕೆ ನಿರ್ಮಾಪಕರು ಬೇಕು...!...
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಂವಾದದಲ್ಲಿ ಹೆಸರಾಂತ ನಿರ್ದೇಶಕ ಮಣಿರತ್ನಂ
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಂವಾದದಲ್ಲಿ ಹೆಸರಾಂತ ನಿರ್ದೇಶಕ ಮಣಿರತ್ನಂ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಣಿರತ್ನಂ ಘೋಷಣೆ, ತಮ್ಮೆಲ್ಲ ಚಿತ್ರಗಳ ಯಶಸ್ಸಿಗೆ ಕಲಾವಿದರು, ತಂತ್ರಜ್ಞರೇ ಕಾರಣ
ಬೆಂಗಳೂರು:
ಕನ್ನಡಕ್ಕೆ ನಾನು ಬರುವುದಿಲ್ಲ ಅಂತ ಎಂದೂ ಹೇಳಿಲ್ಲ. ಕನ್ನಡದಲ್ಲಿ ಸಿನಿಮಾ ಮಾಡಲು ಈಗಲೂ ಸಿದ್ಧ. ಆದರೆ, ನನ್ನ ಚಿತ್ರಕ್ಕೆ ನಿರ್ಮಾಪಕರು ಬೇಕು...!

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಂವಾದದಲ್ಲಿ ಹೆಸರಾಂತ ನಿರ್ದೇಶಕ ಮಣಿರತ್ನಂ ಹೀಗೆ ಪ್ರೇಕ್ಷಕರ ಸಿಳ್ಳೆ, ಕೇಕೆ, ಚಪ್ಪಾಳೆ, ಸಪ್ಪಳ ಅಬ್ಬರಿಸಿತು. ಅಲ್ಲೇ ಇದ್ದ ನಿರ್ದೇಶಕ ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ ಮಣಿರತ್ನಂ ರೆಡಿಯೆಂದರೆ, ನಿರ್ಮಾಣದ ಜವಾಬ್ದಾರಿ ನನ್ನದು ಎಂದು ಘೋಷಿಸದರು. ಮತ್ತೊಮ್ಮೆ ಸಿನಿರಸಿಕರ ಸಂಭ್ರಮ ಮುಗಿಲುಮುಟ್ಟಿತು.

ಸಿನಿಮೋತ್ಸವದಲ್ಲಿ ಶನಿವಾರ ನಿರ್ದೇಸಕ ಮಣಿರತ್ನಂ ಅವರೇ ಕೇಂದ್ರ ಬಿಂದು. ಬೆಳಗ್ಗೆ 10.30ಕ್ಕೆ ಅವರೊಂದಿಗೆ ಸಂವಾದ ಫಿಕ್ಸ್ ಆಗಿತ್ತು. ಆ ವೇಳೆಗಾಗಲೇ ಒರಾಯನ್ ಮಾಲ್ ನ ಪಿವಿಆರ್ ಚಿತ್ರಮಂದಿರದ 11ನೇ ಸ್ಕ್ಕೀನ್ ಆಸನಗಳು ಭರ್ತಿಯಾಗಿದ್ದವು. ಮಣಿರತ್ನಂ ಅವರೊಂದಿಗಿನ ಮಾತು ಅಂದ್ರೆ ಕೇಳಬೇಕೆ? ರೋಜಾ, ಬಾಂಬೆ ಸೇರಿ ಹಲವು ಹಿಟ್ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಖ್ಯಾತರಾಗಿರುವ ಅವರ ಮಾತು ಕೇಳಲು ಸಿನಿಮಾ ನಿರ್ಮಾಣಕ್ಕಿಳಿದ ಹೊಸ ತಲೆಮಾರಿನ ಯುವಕ-ಯುವತಿಯರು ಅಧಿಕ ಸಂಖ್ಯೆಯಲ್ಲಿದ್ದರು.

ಸಕ್ಸಸ್ ಗೆ ಕಾರಣ
ಮಣಿರತ್ನಂ ಅವರೊಂದಿಗೆ ಆರಂಭದಲ್ಲಿ ಸಂವಾದ ನಡೆಸಿಕೊಟ್ಟವರು ದೆಹಲಿ ಜವಾಹರ್ ಲಾಲ್ ನೆಹರು ವಿಶ್ವವದ್ಯಾಲಯದ ಪ್ರೊ.ಇರಾ ಭಾಸ್ಕರ್. ಆರಂಭದ ದಿನಗಳಲ್ಲಿ ಮಣಿರತ್ನಂ ಅವರಿಗೆ ಭಾರಿ ಯಶಸ್ಸು ತಂದುಕೊಟ್ಟ ನಾಯಗನ್, ರೋಜಾ, ಬಾಂಬೆ ಚಿತ್ರಗಳ ವಿಷಯ ಪ್ರಸ್ತಾಪಕ್ಕೆ ಬಂತು. ಅಷ್ಟು ದೊಡ್ಡ ಸಕ್ಸಸ್ ಗೆ ಕಾರಣಗಳೇನು? ಪ್ರಚಲಿತ ಸಂಗತಿಗಳನ್ನೇ ಆಧರಿಸಿ ಸಿನಿಮಾ ಮಾಡುವ ನಿಮ್ಮ ಸಾಹಸ ಶುರುವಾದದ್ದು ಏಕೆ? ಎನ್ನುವ ಪ್ರಶ್ನೆಗಳು ಎದುರಾದವು. ಸಕ್ಸಸ್ ನ ಸೂತ್ರಧಾರಿ ತಾವೇ ಆದರೂ, ಮಣಿರತ್ನಂ ಕ್ರೆಡಿಟ್ ನೀಡಿದ್ದು ಮಾತ್ರ ಕಲಾವಿದರು, ತಂತ್ರಜ್ಞರು, ಸಂಗೀತ ನಿರ್ದೇಶರಿಗೆ. ಎಲ್ಲವೂ ನನ್ನ ಅದೃಷ್ಟ, ಒಳ್ಳೆಯ ಕಲಾವಿದರು, ತಂತ್ರಜ್ಞರು, ಸಂಗೀತ ನಿರ್ದೇಶಕರು ಸಿಕ್ಕರು, ಅವರಿಂದಲೇ ಎಲ್ಲವೂ ಸಾಧ್ಯವಾಯಿತು' ಎಂದರು.

ನನ್ನ ಹಿಂದೆ ಇಳಯರಾಜಾ, ರೆಹಮಾನ್
ಮಣಿರತ್ನಂ ಚಿತ್ರಗಳಲ್ಲಿನ ಪ್ರಮುಖ ಆಕರ್ಷಣೆ ಸಂಗೀತ, ಎಲ್ಲ ಚಿತ್ರಗಳೂ ಈಗಲೂ ಪ್ರೇಕ್ಷಕರನ್ನು ಕಾಡಲು ಅವುಗಳಲ್ಲಿನ ಸಂಗೀತವೇ ಕಾರಣ. ಇವರ ಸಕ್ಸಸ್ ನ ಮಂತ್ರವೇನು? ಎನ್ನುವ ಪ್ರಶ್ನೆಗೆ ಅವರು, ಸಂಗೀತ ದಿಗ್ಗಜ ಇಳಯರಾಜಾ ಮತ್ತು ರೆಹಮಾನ್ ಅವರನ್ನು ನೆನಪಿಸಿಕೊಂಡರು. ಕತೆ ಹೇಳುವುದಷ್ಟೇ ನನ್ನ ಕೆಲಸ. ಕತೆ ಕೇಳಿದ ನಂತರ ಇಳಯರಾಜಾ ಅಥವಾ ರೆಹಮಾನ್ ಅವರ ನೀಡುವ ಸಂಗೀತ ಚಿತ್ರದ ಗೆಲುವಿಗೂ ಕಾರಣವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com