ಬೆಂಗಳೂರು ಸಿನಿಮೋತ್ಸವ ನಿರ್ದೇಶಕರಾದ ಪಿ.ಶೇಷಾದ್ರಿ, ಗಿರೀಶ್ ಕಾಸರವಳ್ಳಿ ಮಾತುಕತೆಯಲ್ಲಿ ತೊಡಗಿದ್ದರೆ, ದತ್ತಣ್ಣ ತದೇಕಚಿತ್ತದಿಂದಲೇ ಕಿವಿಗೊಟ್ಟು ಆಲಿಸುತ್ತಿರುವುದು.
ಬೆಂಗಳೂರು ಸಿನಿಮೋತ್ಸವ ನಿರ್ದೇಶಕರಾದ ಪಿ.ಶೇಷಾದ್ರಿ, ಗಿರೀಶ್ ಕಾಸರವಳ್ಳಿ ಮಾತುಕತೆಯಲ್ಲಿ ತೊಡಗಿದ್ದರೆ, ದತ್ತಣ್ಣ ತದೇಕಚಿತ್ತದಿಂದಲೇ ಕಿವಿಗೊಟ್ಟು ಆಲಿಸುತ್ತಿರುವುದು.

ಕನ್ನಡ ಚಲನಚಿತ್ರಗಳತ್ತ ಪ್ರೇಕ್ಷಕರ ಚಿತ್ತ

ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಯುತ್ತಿರುವ 8ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯವಾಗಿ ಚಿತ್ರೋತ್ಸವಗಳಲ್ಲಿ ಹೊರ ದೇಶಗಳ...

ಬೆಂಗಳೂರು: ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಯುತ್ತಿರುವ 8ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯವಾಗಿ ಚಿತ್ರೋತ್ಸವಗಳಲ್ಲಿ ಹೊರ ದೇಶಗಳ ಚಿತ್ರಗಳತ್ತ ಮುಖ ಮಾಡುವುದೇ ಹೆಚ್ಚು. ಆದರೆ, ಈ ಬಾರಿಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳಿಗೂ ಪ್ರೇಕ್ಷಕರ ಮೆಚ್ಚಗೆ ಸಿಗುತ್ತಿದೆ.

ಈಗಾಗಲೇ ಹಲವು ಕನ್ನಡ ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿವೆ. ಈ ಪೈಕಿ ಬಿ ಸುರೇಶ್ ನಿರ್ದೇಶನದ ದೇವರ ನಾಡಲ್ಲಿ, ರಾಮ್ ರೆಡ್ಡಿ ನಿರ್ದೇಶನದ ತಿಥಿ, ಅನೂಪ್ ಭಂಡಾರಿ ನಿರ್ದೇಶನದ ಕಿತ್ತೂರು ರಾಣಿ ಚೆನ್ನಮ್ಮ, ಗಿರಿರಾಜ್ ನಿರ್ದೇಶನದ ಮೈತ್ರಿ ಚಿತ್ರಗಳಿಗೆ ಪ್ರೇಕ್ಷಕರು ಮುಗಿಬಿದ್ದಿದ್ದು ಕಂಡುಬಂತು. ಅದರಲ್ಲೂ ದೇವರ ನಾಡಲ್ಲಿ ಚಿತ್ರವನ್ನು ನೋಡಲು ಸಾಕಷ್ಟು ಜನ ಆಗಮಿಸಿದ್ದರು.

ಒಂದು ಸತ್ಯ ಘಟನೆ ಜತೆಗೆ ಪ್ರಸ್ತುತ ರಾಜಕೀಯ ಚಿತ್ರಣವನ್ನು ತೆರೆದಿಡುವ, ಆ ಮೂಲಕ ಪೂರ್ವಗ್ರಹ ಮನಸ್ಸೂಗಳಿಂದ ಉಂಟಾಗುವ ಅಶಾಂತಿಯ ಸುತ್ತ ಮಾತನಾಡುವ ದೇವರ ನಾಡಲ್ಲಿ ಚಿತ್ರವನ್ನು ಮತ್ತೆ ಪ್ರದರ್ಶಿಸಿದರೂ ಜನ ಬರುತ್ತಾರೆಂಬ ನಂಬಿಕೆ ಆ ಚಿತ್ರ ತಂಡದ್ದು.

ಚಿತ್ರೋತ್ಸವದಲ್ಲಿ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಂಡು ಮತ್ತೆ ಒರಾಯನ್ ಮಾಲ್ ನಲ್ಲಿ ಸ್ಕೀನಿಂಗಿ ಆದ ತಿಥಿ ಚಿತ್ರವೂ ಹಾಗೆಯೇ. ಒಂದು ಶೋಗೆ ನಾಲ್ಕೈದು ಪ್ರದರ್ಶನಕ್ಕೆ ಸಾಕಾಗುವಷ್ಟು ಜನರು ಆಗಮಿಸಿದ್ದರು.

ಪ್ರದರ್ಶನ ಮುಗಿದ ಮೇಲೂ ಆದೇ ಚಿತ್ರವನ್ನು ಮರು ಪ್ರದರ್ಶನ ಮಾಡುವಂತೆ ಒತ್ತಾಯ ಮಾಡಿದ್ದೂ ಕಂಡುಬಂತು. ಬಿ.ಸರೋಜಾದೇವಿ ಅವರ ನಟನೆ ಆ ದಿನಗಳಲ್ಲಿ ಹೇಗಿತ್ತು ಎನ್ನುವ ಕುತೂಹಲಕ್ಕಾಗಿ ಕಿತ್ತೂರು ರಾಣಿ ಚೆನ್ನಮ್ಮ ಚಿತ್ರವನ್ನು ನೋಡಲು ಸಾಕಷ್ಟು ಜನ ಬಂದಿದ್ದರು. ಅದೇ ರೀತಿ ಸಾಮಾಜಿಕ ಸಂದೇಶದೊಂದಿಗೆ ಮಾಡಿರುವ ಮೈತ್ರಿ ಸಿನಿಮಾವು ಚಿತ್ರೋತ್ಸವದ ಕೇಂದ್ರ ಬಿಂದುವಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com