ರಾಜ್ಯ ಬಜೆಟ್ 2015- ಕೃಷಿ ಕ್ಷೇತ್ರಕ್ಕೆ ಏನೇನು..?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2015 ಮತ್ತು 16ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ತೋಟಗಾರಿಕಾ ಇಲಾಖೆಗೆ ರೂ. 760 ಕೋಟಿ ಬಿಡುಗಡೆ ಮಾಡಿದ್ದಾರೆ..
ಕೃಷಿ ಕ್ಷೇತ್ರ
ಕೃಷಿ ಕ್ಷೇತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2015 ಮತ್ತು 16ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ತೋಟಗಾರಿಕಾ ಇಲಾಖೆಗೆ ರೂ. 760 ಕೋಟಿ ಬಿಡುಗಡೆ ಮಾಡಿದ್ದಾರೆ.

ಹಾಪ್‌ಕಾಮ್ಸ್‌ಗಳ ಬಲವರ್ಧನೆಗೆ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ರೈತರಿಗೆ ಸಾವಯವ ಭಾಗ್ಯ. ಹಾವೇರಿಯಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನು ದೇಶದ ಬೆನ್ನುಲುಬಾಗಿರುವ ರೈತ ಮತ್ತು ಕೃಷಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ನೀಡಿರುವ ವಿವಿಧ ಯೋಜನೆಗಳ ಮುಖ್ಯಾಂಶಗಳು ಇಲ್ಲಿವೆ.

ಕೃಷಿ
• ಕೃಷಿ ಕ್ಷೇತ್ರಕ್ಕೆ ಸಮಗ್ರ ದೂರದೃಷ್ಟಿ ರೂಪಿಸಲು `ವಿಶನ್ ಗ್ರೂಪ್' ರಚನೆ.
• ನೀರಿನ ಸಮರ್ಥ ಬಳಕೆಗಾಗಿ `ಲಘು ನೀರಾವರಿ ನೀತಿ 2015-16' ಜಾರಿ.
• ವೈಜ್ಞಾನಿಕ ಕೃಷಿ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಅಧ್ಯಯನ ಮತ್ತು ತರಬೇತಿಗಾಗಿ ಉತ್ಕೃಷ್ಟ ಜ್ಞಾನ ಕೇಂದ್ರದ ಸ್ಥಾಪನೆ.
• ಕೃಷಿ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಕೃಷಿ ಅಭಿಯಾನ ಆಯೋಜನೆ ಮೂಲಕ ರೈತರೊಂದಿಗೆ ಸಂಪರ್ಕ.
• ರೈತ ಸಂಪರ್ಕ ಕೇಂದ್ರ - ಹೋಬಳಿ ಮಟ್ಟದಲ್ಲಿ ಕೃಷಿ ತೋಟಗಾರಿಕೆ, ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಿಬ್ಬಂದಿಗಳು ಒಟ್ಟಾಗಿ ಕಾರ್ಯನಿರ್ವಹಣೆ.
• 7 ಜಿಲ್ಲೆಗಳ ಬರ ಪಿಡೀತ 23 ತಾಲ್ಲೂಕುಗಳಿಗೆ `ಕೃಷಿ ಭಾಗ್ಯ' ಕಾರ್ಯಕ್ರಮ ವಿಶೇಷ ಪ್ಯಾಕೇಜ್.
• 566 ಹೋಬಳಿಗಳಲ್ಲಿ ಸಾವಯವ ಭಾಗ್ಯ ಯೋಜನೆ ಬಲಪಡಿಸಲು ಪ್ರಮಾಣೀಕರಣ ಪ್ರಕ್ರಿಯೆ, ಒಕ್ಕೂಟ ರಚನೆ ಹಾಗೂ ಮಾರುಕಟ್ಟೆ ಸಂಪರ್ಕ ಅಭಿವೃದ್ಧಿ.
• ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಒದಗಿಸುವ 278 ಹೊಸ ಸೇವಾ ಕೇಂದ್ರಗಳ ಸ್ಥಾಪನೆ.
• `ಭೂ ಸಮೃದ್ಧಿ' ಕಾರ್ಯಕ್ರಮ-4 ಜಿಲ್ಲೆಗಳಿಗೆ ವಿಸ್ತರಣೆ.
• ಆರ್.ಎಸ್.ಕೆ. ಮಟ್ಟದಲ್ಲಿ ಕೆ-ಕಿಸಾನ್ ವಿದ್ಯುನ್ಮಾನ ವೇದಿಕೆ ಸ್ಥಾಪಿಸಿ ಪ್ರತಿಯೊಬ್ಬ ರೈತನಿಗೂ `ರೈತಮಿತ್ರ ಕಾರ್ಡ್ ಹಾಗೂ ಮಣ್ಣು ಆರೋಗ್ಯ ಕಾರ್ಡ್' ನೀಡಲು ಕ್ರಮ.
• ವೈಜ್ಞಾನಿಕ ಜಲಾನಯನ ನಿರ್ವಹಣೆಗೆ ಡಿಜಿಟಲ್ ಗ್ರಂಥಾಲಯ ಹಾಗೂ ನಿರ್ಣಯ ಬೆಂಬಲ ವ್ಯವಸ್ಥೆ ಪ್ರಾರಂಭ.
• ಇಕ್ರಿಸ್ಯಾಟ್, ಐ.ಬಿ.ಎ.ಬಿ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಜೆನೋಮ್ ಅನುಕ್ರಮಣಿಕೆ (ಜಿ.ಎಂ-ರಹಿತ) (Genome Sequencing)) ಕುರಿತು ಸಂಶೋಧನಾ ಯೋಜನೆ ಪ್ರಾರಂಭ.
• ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ- ಹೊಸ ಆವರಣ (Campus) ನಿರ್ಮಾಣ.
• ನೀರಾವರಿ ಪ್ರದೇಶದಲ್ಲಿ ಪರ್ಯಾಯ ಬೆಳೆ ಪದ್ಧತಿ, ಉತ್ಪಾದಕತೆ, ಸುಸ್ಥಿರತೆ ಮತ್ತು ಹೆಚ್ಚಿನ ಲಾಭಗಳಿಕೆ ಕುರಿತು ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆಗಳ ಆಯೋಜನೆ.
• ರಾಗಿ ಮತ್ತು ಜೋಳದ ವಿಶೇಷ ಪ್ಯಾಕೇಜ್-40000 ಹೆಕ್ಟೇರ್‍ಗೆ ವಿಸ್ತರಣೆ, ಕರ್ನಾಟಕ ವಿಶಿಷ್ಠ ಸಾಂಪ್ರದಾಯಿಕ ತೃಣ ಧಾನ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ, ಜಾಗತಿಕ ಸೂಚಕ ಟ್ಯಾಗುಗಳನ್ನು ಪಡೆಯುವ ಮತ್ತು ಅರಿವು ಮೂಡಿಸುವ
ಕಾರ್ಯಕ್ರಮಗಳ ಆಯೋಜನೆ.
• ಪ್ರಾಯೋಗಿಕವಾಗಿ ಖಾಸಗಿ ಏಜೆನ್ಸಿಗಳ/ಸರ್ಕಾರೇತರ ಸಂಸ್ಥೆಗಳ ಮುಖಾಂತರ ಪ್ರಾಯೋಗಿಕವಾಗಿ 4 ಜಿಲ್ಲೆಗಳಲ್ಲಿ ಕೃಷಿ ಸಂಬಂಧಿ ವಿಸ್ತರಣಾ ಸೇವೆಗಳ ಆಯೋಜನೆ.
• ಮಂಡ್ಯ ಮತ್ತು ಮುಧೋಳದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಎರಡು ಸಾವಯವ ಬೆಲ್ಲದ ಪಾರ್ಕುಗಳ ಅಭಿವೃದ್ಧಿ.

ತೋಟಗಾರಿಕೆ
• ಕೃಷಿ ಉತ್ಪಾದಕರ ಸಂಘಗಳ (FPOs) ಮೂಲಕ ರೈತರ ಸಂಘಟನೆ ಮಾಡಿ ಸದೃಢಗೊಳಿಸುವ ಕಾರ್ಯ ಮುಂದುವರಿಕೆ.
1. ಸಂಗ್ರಹಣ ಕೇಂದ್ರಗಳು, ಶೈತ್ಯಾಗಾರಗಳು, ಕೃಷಿ ಯಾಂತ್ರೀಕರಣ ಸಲಕರಣೆ ಮತ್ತು ಸಂಸ್ಕರಣಾ ಘಟಕಗಳನ್ನು ಹೊಂದಲು 90% ಸಹಾಯಧನ.
2. ಕೃಷಿ ಇಲಾಖೆಯ ಏಕೀಕೃತ ಕಾರ್ಯಕ್ರಮಗಳ (PPP-IAD) ಮುಖಾಂತರ ಸಂಪನ್ಮೂಲ ಹಾಗೂ ಮಾರುಕಟ್ಟೆ ಸಂಪರ್ಕಗಳನ್ನು (backward and forward linkages) ಒದಗಿಸಲು ಕ್ರಮ.
3. ರೈತ ಫಲಾನುಭವಿಗಳ ಆಯ್ಕೆ ಮತ್ತು ತರಬೇತಿ.
• ರಾಷ್ಟ್ರೀಯ ತೋಟಗಾರಿಕೆ ಮಿಶನ್ - ಕೃಷಿ ಉತ್ಪಾದಕರ ಸಂಘಗಳ ಬಲವರ್ಧನೆಗೆ ಕ್ರಮ.
• ರೈತರಿಗೆ ಬಾಡಿಗೆ ಆಧಾರದ ಮೇಲೆ ಹೆಚ್ಚು ಬೆಲೆಯ ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಯಂತ್ರೋಪಕರಣಗಳ ಸೇವೆಯ ಲಭ್ಯ.
• ತೆಂಗು ಉತ್ಪಾದಕರ ಸಂಘಗಳ ಸದಸ್ಯರು ಅವರ ತೆಂಗಿನ ಮರದಿಂದ ಕೆಲಪ್ರಮಾಣದಲ್ಲಿ ನೀರಾ ಉತ್ಪಾದನೆ - ಅಬಕಾರಿ ಅಧಿನಿಯಮ ತಿದ್ದುಪಡಿಗೆ ಕ್ರಮ.
4 ಆಯವ್ಯಯ ಮುಖ್ಯಾಂಶಗಳು 2015 - 16
• ಹಾಪಕಾಮ್ಸ್ ವಹಿವಾಟುಗಳ ಗಣಕೀಕರಣ, ಏಕರೂಪ ಮಾದರೀ ಬೈಲಾಗಳ ರಚನೆ.
• ಸಾವಯವ ಕೃಷಿಯಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಗುರುತಿಸುವಿಕೆಗಾಗಿ ಕಾರ್ಯತಂತ್ರ ಜಾರಿ.
• ಹಾವೇರಿ ಜಿಲ್ಲೆಯ ದೇವಿ ಹೊಸೂರು ಗ್ರಾಮದಲ್ಲಿ ತೋಟಗಾರಿಕೆ ಕಾಲೇಜು ಪ್ರಾರಂಭ.
• ಮೈಸೂರಿನ ಕುಪ್ಪಣ್ಣ ಉದ್ಯಾನವನ, ದಾವಣಗೆರೆ ಜಿಲ್ಲೆಯ ಶಾಮನೂರು ಗ್ರಾಮ ಮತ್ತು ಬಳ್ಳಾರಿ ಗಾಜಿನ ಮನೆ ನಿರ್ಮಾಣ ಮತ್ತು ಮೈಸೂರಿನಲ್ಲಿರುವ ಪಾರಂಪರಿಕ ಸರ್ಕಾರಿ ಅತಿಥಿ ಗೃಹಗಳ ಆವರಣದಲ್ಲಿ ಉದ್ಯಾನವನ ಅಭಿವೃದ್ಧಿ.

ಪಶುಸಂಗೋಪನಾ
• ಸೇವಾ ಶುಲ್ಕ ಸಹಿತ ಪಶುವೈದ್ಯ ಸೇವೆಗಾಗಿ ಕೇಂದ್ರೀಕೃತ ಉಚಿತ ಸಹಾಯವಾಣಿ ಸೌಲಭ್ಯ.
• `ಪಶು ಭಾಗ್ಯ' ಹೊಸ ಯೋಜನೆ ಜಾರಿ.
• ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪಶುಸಂಗೋಪನಾ ಘಟಕಗಳನ್ನು ಸ್ಥಾಪಿಸಲು ಕ್ರಮವಾಗಿ ಶೇ.33 ಮತ್ತು ಶೇ.25 ರಷ್ಟು ಸಹಾಯಧನದೊಂದಿಗೆ ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಟ ರೂ.1.20 ಲಕ್ಷ ವರೆಗೆ ಸಾಲ ಸೌಲಭ್ಯ.
• ಪಶು ಆಹಾರ ಮತ್ತು ಇತರ ನಿರ್ವಹಣೆಗೆ ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ರೂ.50,000 ವರೆಗೆ ಅಲ್ಪಾವಧಿ ಸಾಲ.
• ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳಿಗೆ 5 ಹೈನು ರಾಸುಗಳವರೆಗೆ ವಿಮಾ ಕಂತುಗಳನ್ನು ಪಾವತಿಸಲು ಸಹಾಯಧನ.
• ಕುರಿಗಾಹಿ ಸುರಕ್ಷಾ ಯೋಜನೆ ಮುಂದುವರಿಕೆ - 5 ಕೋಟಿ ರೂ.
• ಜಿಲ್ಲಾ ಪಂಚಾಯತ್ ಹಂತದಲ್ಲಿ ಪಶುಗಳಿಗೆ ಅಗತ್ಯವಿರುವ ವಿವಿಧ ಔಷಧಿಗಳ ಖರೀದಿ/ ನಿರ್ವಹಣೆ.
• ಹಿತ್ತಲ ಕೋಳಿ ಸಾಕಾಣಿಕೆಗೆ ಕೆ.ಸಿ.ಪಿ.ಎಫ್. ಸಂಸ್ಥೆಗಳ ಮೂಲಕ ಉತ್ತೇಜನೆ.
• ಕುರಿ, ಮೇಕೆ ಸಾಕಾಣಿಕೆಗೆ ಕೆ.ಎಸ್.ಡಬ್ಲೂ.ಡಿ.ಸಿ. ಸಂಸ್ಥೆಗಳಿಗೆ - 25 ಕೋಟಿ ರೂ. ಅನುದಾನ.
• ಜಾನುವಾರು ಕ್ಷೇಮಾಭಿವೃದ್ಧಿ ಚಟುವಟಿಕೆಗಳ ಬಲವರ್ಧನೆ ಮತ್ತು ಜಿಲ್ಲೆ/ತಾಲ್ಲೂಕುಗಳಲ್ಲಿ ಗೋಶಾಲೆಗಳಿಗೆ ಮೂಲಭೂತ ಸೌಕರ್ಯ/ನಿರ್ವಹಣೆ - 7 ಕೋಟಿ ರೂ.
• ರಾಸುಗಳಿಗೆ UID ಒಳಗೊಂಡ ಕಿವಿ ಓಲೆ ಅಳವಡಿಕೆ ಮತ್ತು ಆ ಸೇವೆಗಳ tracking ಮಾಹಿತಿ ಕೋಶ (database) ಸೃಜನೆ - 10 ಕೋಟಿ ರೂ.
• ಮೇವು ಉತ್ಪಾದನೆಗೆ ಪ್ರೋತ್ಸಾಹ ಮತ್ತು ಅಮೃತ್ ಮಹಲ್ ಕಾವಲ್ ಜಮೀನುಗಳ ಸಂರಕ್ಷಣೆಗೆ ಕಾನೂನು ರಚನೆ ಮತ್ತು ಅಭಿವೃದ್ಧಿ- 10 ಕೋಟಿ ರೂ.
• ಮುಂದಿನ ಮೂರು ವರ್ಷದಲ್ಲಿ, ಉತ್ತರ ಕರ್ನಾಟಕದಲ್ಲಿ ಹೊಸದಾಗಿ  750 ಹಾಲು ಉತ್ಪಾದಕರ ಸಂಘಗಳ ಸ್ಥಾಪನೆ - 16 ಕೋಟಿ ರೂ.
• ಹೈನು ರಾಸುಗಳು ಮತ್ತು ಕುರಿ ಮೇಕೆಗಳ ತಳಿ ಅಭಿವೃದ್ಧಿ ನೀತಿ ಮತ್ತು ಕಾನೂನು ನಿಯಮಾವಳಿಗಳ ಜಾರಿ.
• ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 300 ಜನ ವಿಸ್ತರಣಾ ಕಾರ್ಯಕರ್ತರ ಸೇವೆ (MAITRI) ಒದಗಿಸಲು-15 ಕೋಟಿ ರೂ.
• ಸಣ್ಣ ಮತ್ತು ಮಧ್ಯಮ ಗಾತ್ರದ ಕೋಳಿ ಸಾಕಾಣಿಕಾ ಘಟಕವನ್ನು ಕೃಷಿ ವಲಯವೆಂದು ಪರಿಗಣಿಸಿ ಕುಕ್ಕುಟ ವಲಯ ನಿಯಂತ್ರಣಕ್ಕೆ ಶಾಸನ ರಚನೆ.
• ದೇಸಿ ತಳಿಯಾದ ದೇವಣಿ ಮತ್ತು ಮಲೆನಾಡು ಗಿಡ್ಡ ಹಸುಗಳ ಸಂರಕ್ಷಣೆ - ಗೋಕುಲ ಗ್ರಾಮ ಸ್ಥಾಪನೆ-10 ಕೋಟಿ ರೂ.
• ಉತ್ತಮ ಜಾನುವಾರು ಸಾಕಾಣಿಕೆ ಮಾಡಿದ ರೈತರಿಗೆ ಬಹುಮಾನ.
• ರೈತರಿಗೆ ಶೇ.50ರ ಸಹಾಯಧನದಲ್ಲಿ ಲಿಂಗ ನಿರ್ಧರಿತ ವೀರ್ಯ (sexedsemen) ನಳಿಕೆಗಳನ್ನು ಒದಗಿಸಲು ಕ್ರಮ.
• ರೋಗನಿರ್ಧಾರ ಪ್ರಯೋಗಾಲಯಗಳು ಹಾಗೂ ಸಂಚಾರಿ ರೋಗನಿರ್ಧಾರ ಪ್ರಯೋಗಾಲಯಗಳನ್ನು ಒದಗಿಸುವುದು.
• ಬೀದರ್ ಜಿಲ್ಲೆ-Milk Shed ಪ್ರದೇಶವಾಗಿ ಅಭಿವೃದ್ಧಿ.
• ದೇಶಿ ತಳಿ ಹಾಲಿಗೆ Premium Product ದರ್ಜೆ ನೀಡಿಕೆ ಹಾಗೂ ಮಾರಾಟ ವ್ಯವಸ್ಥೆ.
• ಸಂಕಷ್ಟದಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರೋತ್ಸಾಹ ಧನ ನೀಡಿಕೆ - 20 ಕೋಟಿ ರೂ.

ರೇಷ್ಮೆ
• ಅಧಿಕ ಇಳುವರಿ ನೀಡುವ ಹಿಪ್ಪುನೇರಳೆ ತಳಿಗಳನ್ನು ಜನಪ್ರಿಯಗೊಳಿಸಲು ಕ್ರಮ, ಘಟಕ ವೆಚ್ಚದ ಶೇ.75ರಷ್ಟು ಪ್ರೋತ್ಸಾಹ ಧನ.
• ಕೆಳಕಂಡ ಸೇವೆ ಒದಗಿಸಲು ಪ್ರಾಯೋಗಿಕವಾಗಿ ಉತ್ತರ ಕರ್ನಾಟಕದಲ್ಲಿ 2 ಮತ್ತು ದಕ್ಷಿಣ ಕರ್ನಾಟಕದಲ್ಲಿ 3 ರೈತ ಉತ್ಪಾದಕ ಸಂಘಗಳ ಸಂಘಟನೆ.
1. ರೇಷ್ಮೆ ಕೃಷಿ ಮತ್ತು ಕೈಗಾರಿಕೆಯಲ್ಲಿ ಪಾಲ್ಗೊಂಡಿರುವ ಎಲ್ಲರ ನಡುವೆ ಸಂಪರ್ಕ ಕಲ್ಪಿಸಿ ಆರ್ಥಿಕ ಸಹಾಯ ಒದಗಿಸುವುದು.
2. ವಿವಿಧ ಸಲಕರಣೆಗಳು, ಸೌಲಭ್ಯಗಳನ್ನು ಒದಗಿಸಿ, ಸಾಗಣೆ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿ.
3 ರೇಷ್ಮೆ ಕೃಷಿ ಚಟುವಟಿಕೆಗಳ ಮತ್ತು ರೇಷ್ಮೆ ನೂಲು ಬಿಚ್ಚುವ ತಂತ್ರಜ್ಞಾನ ಪದ್ಧತಿಗೆ ಪ್ರೋತ್ಸಾಹ.
• ಖಾಸಗಿ ವಲಯದಲ್ಲಿ 10 ಆರ್.ಎಸ್.ಪಿ.ಗಳ ಮೂಲಕ 50 ಲಕ್ಷ ಬೈವೊಲ್ಟೈನ್ ಮೊಟ್ಟೆ ಉತ್ಪಾದನೆಯ ಗುರಿ- 4.86 ಕೋಟಿ ರೂ.ಗಳ ಸಹಾಯಧನ.
• ವಾಕ್ ಇನ್ ಶೈತ್ಯಾಗಾರ, ಫೇಸ್ ಕಾಂಟ್ರಾಸ್ಟ್ ಸೂಕ್ಷ್ಮದರ್ಶಕ, ಸೆಂಟ್ರಿಪ್ಯೂಜ್ ಮುಂತಾದ ಸೂಕ್ಷ್ಮ ಸಾಧನ ಸಾಮಗ್ರಿಗಳ ಸಂಗ್ರಹಣೆ.
• ಕಚ್ಚಾ ಸಾಮಗ್ರಿಗಳ ವೆಚ್ಚಕ್ಕಾಗಿ ಆವರ್ತಕ ನಿಧಿಯನ್ನು ಒದಗಿಸುವುದು.
• ಸಿ.ಆರ್.ಸಿ.ಗಳಲ್ಲಿ ಇನ್‍ಕ್ಯುಬೇಷನ್ ಛೇಂಬರ್‍ಗಳ ಸ್ಥಾಪನೆಗೆ ಬೆಂಬಲ.
• ರಾಮನಗರ, ಶಿಡ್ಲಘಟ್ಟ ಮತ್ತು ಕೊಳ್ಳೆಗಾಲಗಳಲ್ಲಿ ರೀಲಿಂಗ್ ಪಾರ್ಕ್‍ಗಳ ಸ್ಥಾಪನೆ- 10 ಕೋಟಿ ರೂ.
• ಉತ್ತರ ಕರ್ನಾಟಕದಲ್ಲಿ ಶೇ.90 ರಷ್ಟು ಸಹಾಯಧನದೊಂದಿಗೆ 3 ಸ್ವಯಂಚಾಲಿತ ರೀಲಿಂಗ್ ಯಂತ್ರದ ಅಳವಡಿಕೆ.
• ಗೂಡು ರೇಷ್ಮೆಯ ಹುಳು ಒಣಗಿಸುವ ಯಂತ್ರ ಖರೀದಿಸಲು 5 ಉದ್ಯಮಿಗಳಿಗೆ ಶೇ.75ರಷ್ಟು ಸಹಾಯಧನದ ಬೆಂಬಲ.
• ಸ್ಪರ್ಧಾತ್ಮಕ ದರ ಮತ್ತು ರೇಷ್ಮೆ ವಹಿವಾಟಿನ ಉತ್ತೇಜನಕ್ಕೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಬಲವರ್ಧನೆ.

ಮೀನುಗಾರಿಕೆ
• ರಾಜ್ಯದ ಮೀನು ಕೃಷಿಕರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲ.
• ರಾಷ್ಟ್ರಿಯ ಕೃಷಿ ವಿಕಾಸ ಯೋಜನೆಯಡಿ ಕ್ಲಸ್ಟರ್ ಮಾದರಿಯಲ್ಲಿ ಆಯ್ದ 4 ತಾಲ್ಲೂಕುಗಳಲ್ಲಿ ಸಮಗ್ರ ಮತ್ತು ಸುಸಂಘಟಿತ ಮೀನು ಕೃಷಿಯ ಅಭಿವೃದ್ಧಿ.
• ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋ ಲೀಟರ್ ಡೀಸೆಲ್ ಮೇಲಿನ ಮಾರಾಟ ಕರದ ಹಿಂಪಾವತಿ- ದೋಣಿ ಮಾಲೀಕರ ಖಾತೆಗೆ ನೇರ ವರ್ಗಾವಣೆ-105 ಕೋಟಿ ರೂ. ಅನುದಾನ.
• ಪಂಜರಗಳಲ್ಲಿ ಮೀನು ಕೃಷಿ-5 ಜಲಾಶಯಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನ.
• ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ 10 ಮಾರಾಟ ಮತ್ತು ಮಾಹಿತಿ ಕೇಂದ್ರಗಳ ಮತ್ತು 5 ಮೊಬೈಲ್ ಮೀನು ಮಾರಾಟ / ಉಪಹಾರ ಗೃಹಗಳ ಪ್ರಾರಂಭ - 5 ಕೋಟಿ ರೂ.
• ಪ್ರತಿ ಕಂದಾಯ ವಿಭಾಗಕ್ಕೆ ಮೀನುಗಾರಿಕೆ ಸಂಚಾರಿ ವಿಸ್ತರಣ ಮತ್ತು ರೋಗ ಪತ್ತೆ ವಾಹನ.
• ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬೃಹತ್ ಮತ್ಸ್ಯಮೇಳಗಳ ಆಯೋಜನೆ.
• ಮತ್ಸ್ಯಾಶ್ರಯ ಯೋಜನೆ-ಮೀನುಗಾರ ಕುಟುಂಬಗಳಿಗೆ 3000 ಮನೆಗಳ ನಿರ್ಮಾಣ.

ಸಹಕಾರ
• 23 ಲಕ್ಷ ರೈತರಿಗೆ ವಿವಿಧ ಸಾಲ ನೀಡುವ ಗುರಿ - 10000 ಕೋಟಿ ರೂ. ಸಾಲ.
• `ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ' _ 110 ಕೋಟಿ ರೂ.
• ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಸ್ವಂತ ಗೋದಾಮು ನಿರ್ಮಾಣ - 5 ಕೋಟಿ ರೂ.
• ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಶುದ್ಧೀಕರಣ ಮತ್ತು ವರ್ಗೀಕರಣ ಯಂತ್ರೋಪಕರಣಗಳ ಖರೀದಿ ಹಾಗೂ ಉತ್ತಮ ಮಾರುಕಟ್ಟೆ ವ್ಯವಸ್ಥೆಗೆ - 3 ಕೋಟಿ ರೂ.
• ಬಿಪಿಎಲ್ ಕುಟುಂಬದ ಕನಿಷ್ಟ ಒಬ್ಬರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯತ್ವಕ್ಕೆ ಷೇರು ಧನ ಸೌಲಭ್ಯ - 32 ಕೋಟಿ ರೂ.
• ಕೊಳವೆ ಬಾವಿ ವಿಫಲ-ಸಾಲ ಮನ್ನಾ -2 ಕೋಟಿ ರೂ.
• ಹಾವೇರಿ ಹಾಗೂ ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಸ್ಥಾಪನೆ.
• ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ಸೇರಿ ಪ್ರತ್ಯೇಕ ಸಹಕಾರ ಹಾಲು ಒಕ್ಕೂಟ ರಚನೆ.
• ಆರ್.ಕೆ.ವಿ.ವೈ. ಅನುದಾನ ಹಾಗೂ ನಬಾರ್ಡ್‍ನಿಂದ ಸಾಲ - ವೈಜ್ಞಾನಿಕ ಉಗ್ರಾಣಗಳ ನಿರ್ಮಾಣ - 650 ಕೋಟಿ ರೂ.
• ಆನ್‍ಲೈನ್ ಉಗ್ರಾಣ ಆಧಾರಿತ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯ ಉಗ್ರಾಣಗಳ ಕಾರ್ಯಾಚರಣೆ ಮತ್ತು ನಿರ್ವಹಣೆ.
• ಇ-ಪರ್ಮಿಟ್ ಪದ್ಧತಿ ಜಾರಿ - ಕೇಂದ್ರೀಕೃತ ಪರ್ಮಿಟ್ ಪರಿಶೀಲನೆ ವ್ಯವಸ್ಥೆಗೆ ಅವಕಾಶ
• ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಕೈಗೊಳ್ಳಲಾಗುವ ಸುಧಾರಣಾ ಕಾರ್ಯಗಳು:
1 50 ಕೋಟಿ ರೂ. ವೆಚ್ಚದಲ್ಲಿ 25 ಎ.ಪಿ.ಎಂ.ಸಿ. `ಮಾರುಕಟ್ಟೆ ಆಧುನೀಕರಣ' ಯೋಜನೆ - ಶೇ.25 ಸರ್ಕಾರದ ಅನುದಾನ ನಿಗಧಿ. 2 ಮೈಸೂರು, ಹುಬ್ಬಳ್ಳಿ, ಉಡುಪಿ, ಕಲ್ಬುರ್ಗಿ, ಬಳ್ಳಾರಿ, ಬೆಳಗಾವಿ, ದಾವಣಗೆರೆಯಲ್ಲಿ `ಭಾನುವಾರದ ಮಾರುಕಟ್ಟೆ'ಯಲ್ಲಿ ಅಗತ್ಯ ಮೂಲ ಸೌಕರ್ಯ - 7 ಕೋಟಿ ರೂ. `ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ `ನಿರ್ಮಲ ಮಾರುಕಟ್ಟೆ' ಯೋಜನೆ ಜಾರಿ. 3 ಮೈಸೂರು, ಶಿವಮೊಗ್ಗ, ವಿಜಯಪುರ, ಹುಬ್ಬಳ್ಳಿ, ಬೆಂಗಳೂರಿನ ಸಿಂಗೇನ
ಅಗ್ರಹಾರ- ಮಾರುಕಟ್ಟೆಗಳಲ್ಲಿ `ಘನತ್ಯಾಜ್ಯ ನಿರ್ವಹಣಾ' ಘಟಕ ಸ್ಥಾಪನೆ - 3 ಕೋಟಿ ರೂ. 4 50 ಪ್ರಮುಖ ಎ.ಪಿ.ಎಂ.ಸಿ. ಮಾರುಕಟ್ಟೆಗಳಲ್ಲಿ `ಶುದ್ಧ ಕುಡಿಯುವ ನೀರಿನ ಘಟಕ' ಸ್ಥಾಪನೆ - 5 ಕೋಟಿ ರೂ. 5 ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹುಬ್ಬಳ್ಳಿ, ತುಮಕೂರು ಮತ್ತು ಬೆಂಗಳೂರುಗಳಲ್ಲಿ `ಶೀತಲಗೃಹ ಘಟಕ' ನಿರ್ಮಾಣ ಮತ್ತು ಆಯ್ದ ಎ.ಪಿ.ಎಂ.ಸಿ. ಮಾರುಕಟ್ಟೆಗಳಲ್ಲಿ ಮಿನಿ ಸೈಲೋಸ್‍ಗಳ ನಿರ್ಮಾಣ.  6 ಮೈಸೂರು, ತುಮಕೂರು, ಹುಬ್ಬಳ್ಳಿ ಮತ್ತು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ `ವೈಜ್ಞಾನಿಕ ವಿಶ್ಲೇಷಣಾ ಪ್ರಯೋಗಾಲಯಗಳ' ಸ್ಥಾಪನೆ- 3 ಕೋಟಿ ರೂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com