ಹಲವು ಸವಾಲುಗಳೊಂದಿಗೆ ಜೇಟ್ಲಿ ಬಜೆಟ್ ಮಂಡನೆ

ರಾಷ್ಟ್ರದ ಆರ್ಥಿಕತೆಯ ಆರೋಗ್ಯಕ್ಕೆ ಚಿಕಿತ್ಸಾ ಸ್ವರೂಪದ ಬಜೆಟ್ ಅನ್ನು ಅರುಣ್ ಜೇಟ್ಲಿ ವಿತ್ತ ಸಚಿವ ಶನಿವಾರ ಮಂಡಿಸಲಿದ್ದಾರೆ...
ಜೇಟ್ಲಿ ಬಜೆಟ್ ಮಂಡನೆ
ಜೇಟ್ಲಿ ಬಜೆಟ್ ಮಂಡನೆ

ನವದೆಹಲಿ: ರಾಷ್ಟ್ರದ ಆರ್ಥಿಕತೆಯ ಆರೋಗ್ಯಕ್ಕೆ ಚಿಕಿತ್ಸಾ ಸ್ವರೂಪದ ಬಜೆಟ್ ಅನ್ನು ಅರುಣ್ ಜೇಟ್ಲಿ ವಿತ್ತ ಸಚಿವ ಶನಿವಾರ ಮಂಡಿಸಲಿದ್ದಾರೆ.

ಸವಾಲುಗೇಳೇನು?
ಮೊದಲನೆಯದು ಮೋದಿ ಸರ್ಕಾರದ ಪ್ರಮುಖ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನಕ್ಕೆ ಒತ್ತು ನೀಡಬೇಕು. ಜತೆಜತೆಗೆ ತೆರಿಗೆ ವ್ಯವಸ್ಥೆ ಸುಧಾರಣೆ, ಸಬ್ಸಿಡಿ ಪ್ರಮಾಣ ಕಡಿತ, ವಿತ್ತೀಯ ಕೊರತೆ ಮಿತಿ ಕಾಯ್ದು ಕೊಳ್ಳುವುದು, ಚಾಲ್ತಿ ಖಾತೆ ಠೇವಣಿ ಕೊರತೆ ನಿಭಾಯಿಸಬೇಕಿದೆ. ದೇಶೀಮಾರುಕಟ್ಟೆಯಲ್ಲಿರುವ ಕಪ್ಪು ಹಣವನ್ನು (ಲೆಕ್ಕಕ್ಕೆ ಸಿಗದ ಹಣ) ತೆರಿಗೆ ವ್ಯಾಪ್ತಿಗೆ ತರುವುದು ಜೇಟ್ಲಿ ಅವರ ಮುಂದಿರುವ ಅತಿ ದೊಡ್ಡ ಸವಾಲು.

ಜೇಟ್ಲಿ ಅವರಿಗೆ ಈ ಸವಾಲುಗಳನ್ನು ನಿಭಾಯಿಸಲು ಪೂರಕ ಅಂಶಗಳೂ ಇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕುಸಿದಿದೆ. ರಾಷ್ಟ್ರದ ಆರ್ಥಿಕ ಸ್ಥಿತಿ ಸುಧಾರಿಸಿದೆ, ಹಣದುಬ್ಬರ ನಿಯಂತ್ರಣದಲ್ಲಿದೆ. ಅಭಿವೃದ್ಧಿ ದರ ಶೇ 7.4ರಷ್ಟು ಅಂದಾಜಿಸಲಾಗಿದೆ. ವಿದೇಶಿ ವಿನಿಮಯ 300 ಬಿಲಿಯನ್ ಡಾಲರ್ ದಾಟಿದೆ. ಹೀಗಾಗಿ ಜನರ ಜೇಬಿಗೆ ಕತ್ತರಿ ಹಾಕಿಯೇ ಬೊಕ್ಕಸ ತುಂಬಿಸುವ ಅನಿವಾರ್ಯ ಇಲ್ಲ.

ಹುಸಿಯಾಗದು ನಿರೀಕ್ಷೆ

ಹೀಗಾಗಿ ಜನ ಸಾಮಾನ್ಯರು ಭಾರಿ ತೆರಿಗೆ ಹೊರೆಯನ್ನೇನೂ ನಿರೀಕ್ಷಿಸಬೇಕಿಲ್ಲ. ತೆರಿಗೆ ವಿನಾಯಿತಿಗಳ ಕೊಡುಗೆಗಳ ನಿರೀಕ್ಷೆಯೂ ಹುಸಿಯಾಗುವುದಿಲ್ಲ. ಇದು ಅಭಿವೃದ್ಧಿ ಆಧಾರಿತ ಜನಪರ ಬಜೆಟ್ ಆಗಲಿದೆ. ಏಕೆಂದರೆ ದೇಶೀಯ ಉಳಿತಾಯ ಮತ್ತು ಹೂಡಿಕೆಯನ್ನು ಹಿಗ್ಗಿಸುವ ಅನಿವಾರ್ಯತೆ ಇದೆ. ಮೇಕ್ ಇನ್ ಕನಸು ಸಾಕಾರಗೊಳ್ಳ ಬೇಕಾದರೆ ದೇಶೀಯ ಉಳಿತಾಯ ಮತ್ತು ಹೂಡಿಕೆ ಅನಿವಾರ್ಯ. ಶೇ.36.8ರಷ್ಟಿದ್ದ ಉಳಿತಾಯ ಪ್ರಮಾಣ ಶೇ.30ಕ್ಕೆ ತಗ್ಗಿದೆ. ದೇಶೀಯ ಉಳಿತಾಯ ಮತ್ತು ಹೂಡಿಕೆ ಹೆಚ್ಚಿಸಲು ಜೇಟ್ಲಿ ತೆರಿಗೆದಾರರಿಗೆ ಹಲವು ವಿನಾಯ್ತಿಗಳನ್ನು ನೀಡಲಿದ್ದಾರೆ.

ಮೂಲ ಸೌಲಭ್ಯ, ವಸತಿ ವಲಯಗಳಲ್ಲಿ ಮಾಡುವ ಹೂಡಿಕೆಗೆ ತೆರಿಗೆ ರಿಯಾಯ್ತಿ ದಕ್ಕಲಿದೆ. 2020ಕ್ಕೆ ಎಲ್ಲರಿಗೂ ವಸತಿ ಸೌಲಭ್ಯ ಒದಗಿಸುವ ಗುರಿ ತಲುಪಲು ವಸತಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಅಂದರೆ, ಗೃಹ ಸಾಲದ ಮೇಲಿನ ಬಡ್ಡಿ ದರ ತಗ್ಗಿಸಬೇಕು. ಜತೆಗೆ ಮನೆ ಖರೀದಿಸುವವರಿಗೆ ವಿವಿಧ ತೆರಿಗೆ ವಿನಾಯ್ತಿ ನೀಡಬೇಕು. ಸ್ಮಾರ್ಟ್ ಸಿಟಿಯೋಜನೆ, 10 ಕೋಟಿ ಜನರಿಗೆ ಉದ್ಯೋಗ, ಜಲ, ನೆಲ, ವಾಯು ಸಾರಿಗೆ ಸುಧಾರಣೆ, ವಿಸ್ತರಣೆಗೆ ವಿದೇಶಿ ಬಂಡವಾಳ ಹೂಡಿಕೆಗೆ ಪೂರಕ ಪರಿಸರ ನಿರ್ಮಿಸುವ ಸಲುವಾಗಿ ಹಾಲಿ ಇರುವ ತೆರಿಗೆ ಮತ್ತು ತೆರಿಗೆ ಕಾನೂನುಗಳಿಗೆ ಮಾರ್ಪಾಡು ಮಾಡುವ ನಿರೀಕ್ಷೆಯೂ ಇದೆ. ರಕ್ಷಣೆ, ಶಿಕ್ಷಣ, ಆರೋಗ್ಯ ಈ ಮೂರು ವಲಯಗಳಿಗೆ ಅನುದಾನ ಹೆಚ್ಚಿಸಲು, ರಸಗೊಬ್ಬರ, ಅಡುಗೆ ಅನಿಲ, ಆಹಾರಕ್ಕೆ ನೀಡುತ್ತಿರುವ ಸಬ್ಸಿಡಿಯನ್ನು ತಗ್ಗಿಸುವ ಸಾಧ್ಯತೆಗಳಿವೆ.

ನಿಮ್ಮ ಜೇಬು ತುಂಬೋದು ಹೇಗೆ?
-ಆದಾಯ ತೆರಿಗೆ ವಿನಾಯ್ತಿ
-ಮಿತಿಯನ್ನು ಹೆಚ್ಚಿಸುವುದು- ತೆರಿಗೆ
-ವಿನಾಯ್ತಿ ಮಿತಿ 3 ಲಕ್ಷ ಅಥವಾ 5 ಲಕ್ಷಕ್ಕೆ ಏರಿಸಬಹುದು.
-ಸೆ. 80ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿ ಮಿತಿ ಈಗಿರುವ 1.5 ಲಕ್ಷದಿಂದ 2.5 ಲಕ್ಷಕ್ಕೆ ಏರಿಸಬಹುದು.
-ಗೃಹ ಸಾಲದ ಅಸಲು ಪಾವತಿಗೆ ಈಗಿರುವ ತೆರಿಗೆ ವಿನಾಯ್ತಿಯನ್ನು 1.5 ಲಕ್ಷದಿಂದ 3 ಲಕ್ಷಕ್ಕೆ ಏರಿಸಬಹುದು.
-ಬಡ್ಡಿ ಮೇಲೆ ನೀಡುವ ತೆರಿಗೆ ವಿನಾಯ್ತಿಯನ್ನು 2 ಲಕ್ಷದಿಂದ 3 ಲಕ್ಷಕ್ಕೆ ಏರಿಸಬಹುದು.
-ವಿವಿಧ ಭತ್ಯೆಗಳ ಮೇಲೆ ನೀಡುತ್ತಿರುವ ತೆರಿಗೆ ವಿನಾಯ್ತಿ ಪ್ರಮಾಣ ಹೆಚ್ಚಿಸಬಹುದು.

ನಿಮ್ಮ ಜೇಬಿಗೆ ಕತ್ತರಿ ಹೇಗೆ?
-ತೆರಿಗೆ ಆದಾಯ ಹೆಚ್ಚಿಸಿಕೊಳ್ಳಲು
-ಸೇವಾ ತೆರಿಗೆಯನ್ನು ಮತ್ತಷ್ಟು ಸೇವೆಗಳಿಗೆ ವಿಸ್ತರಿಸಿ ಈಗಿರುವ ಶೇ.12ರಷ್ಟು ತೆರಿಗೆಯನ್ನು ಶೇ.14ಕ್ಕೆ ಏರಿಸಬಹುದು.
-ತೈಲೋತ್ಪನ್ನಗಳ ಮೇಲೆ ಆಮದು ತೆರಿಗೆ ಹೆಚ್ಚಿಸಿದರೆ ಕರ ಭಾರ.
-ದುಬಾರಿ ವಾಹನಗಳ ಮೇಲೆ ಅಬ್ಕಾರಿ ಸುಂಕ ಹೆಚ್ಚಿಸಬಹುದು.
-ಸಬ್ಸಿಡಿ ಅಡುಗೆ ಅನಿಲ ಒದಗಿಸಲು ಆದಾಯ ಮಿತಿ ವಿ„ಸಬಹುದು.
-ಐಷಾರಾಮಿ ವಸ್ತುಗಳ ಮೇಲೆ ಕರ ಭಾರ ಹೆಚ್ಚಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com