ಟಾರ್ಗೆಟ್ 2022: ಆಗ ಭಾರತ ಹೇಗಿರುತ್ತೆ ಗೊತ್ತಾ..?

ಭವಿಷ್ಯ ಭಾರತದ ನಕಾಶೆ ರೆಡಿ! ಗಡಿಯಲ್ಲೋ, ರೇಖೆಯಲ್ಲೋ ಬದಲಾಗುವ ಮ್ಯಾಪ್ ಅಲ್ಲ ಇದು. ಸಮೃದ್ಧ ಭಾರತ ಹೇಗಿರಬೇಕು ಎಂಬುದು 2022ರ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಭವಿಷ್ಯ ಭಾರತದ ನಕಾಶೆ ರೆಡಿ! ಗಡಿಯಲ್ಲೋ, ರೇಖೆಯಲ್ಲೋ ಬದಲಾಗುವ ಮ್ಯಾಪ್ ಅಲ್ಲ ಇದು. ಸಮೃದ್ಧ ಭಾರತ ಹೇಗಿರಬೇಕು ಎಂಬುದು 2022ರ ಅಮೃತ ಮಹೋತ್ಸವದ ವೇಳೆ ಗೊತ್ತಾಗಲಿದೆ ಎಂಬುದು ಮೋದಿಯ ಆಶಾವಾದ. ಇದಕ್ಕಾಗಿ ಮೋದಿ ಹೆಣೆದ ಯೋಜನೆಗಳೇನು? ಆ ಬ್ಲ್ಯೂಪ್ರಿಂಟಿನ ಸ್ವರೂಪ ಹೇಗಿದೆ ಎಂಬುದನ್ನು ಈ ಮಾತುಗಳಲ್ಲೇ ಕಾಣಬಹುದು.

ಆಗ ಪ್ರತಿ ಕುಟುಂಬಕ್ಕೂ ಸೂರು. ನಗರ ಪ್ರದೇಶಗಳಲ್ಲಿ ಏನಿಲ್ಲವೆಂದರೂ 2 ಕೋಟಿ ಹಾಗೂ ಗ್ರಾಮೀಣ ಭಾಗಗಳಲ್ಲಿ 4 ಕೋಟಿ ಮನೆಗಳ ನಿರ್ಮಾಣ.
-ಪ್ರತಿ ಮನೆಗೂ 24 ಗಂಟೆ ಕರೆಂಟು, ಸ್ವಚ್ಛ ಕುಡಿಯುವ ನೀರು, ಶೌಚಾಲಯ ಮತ್ತು ರಸ್ತೆ ಸಂಪರ್ಕ.
-ಕಡೇಪಕ್ಷ ಮನೆಯ ಒಬ್ಬ ಸದಸ್ಯರಿಗಾದರೂ ಕುಟುಂಬ ನಿರ್ವಹಣೆಗೆ ಉದ್ಯೋಗ ಅಥವಾ ಆರ್ಥಿಕ ಅವಕಾಶಗಳಿರಬೇಕು.
-ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಎಲ್ಲ ಯೋಜನೆಗಳು. ಬಡತನ ನಿರ್ಮೂಲನೆಯ ಪ್ರಯತ್ನದಲ್ಲಿ ಪ್ರತಿಯೊಬ್ಬ ಭಾರತೀಯನೂ ಪಾಲುದಾರ.
-ಈಗ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿರುವ 20,000 ಹಳ್ಳಿಗಳು 2022ರ ವೇಳೆಗೆ ಸಂಪೂರ್ಣ ಬೆಳಗಿರುತ್ತವೆ. ಜಲವಿದ್ಯುತ್ ಸಾಕಾಗಿದ್ದರೆ, ಸೌರಶಕ್ತಿಯಿಂದಲೇ ಈ ಗುರಿ ತಲುಪಬಹುದು.
-ಈಗ 1,78,000 ವಾಸಸ್ಥಳಗಳಿಗೆ ರಸ್ತೆ ಸಂಪರ್ಕವೇ ಇಲ್ಲ. 2022ರ ವೇಳೆಗೆ ಇವೆಲ್ಲ ಪಕ್ಕಾ ರಸ್ತೆಗಳ ಮೂಲಕ ಕನೆಕ್ಟ್ ಆಗಿರುತ್ತವೆ. ನಿರ್ಮಾಣ ಹಂತದಲ್ಲಿರುವ 1 ಲಕ್ಷ ಕಿ.ಮೀ. ರಸ್ತೆ ಮಾರ್ಗವನ್ನು ಪೂರ್ಣಗೊಳಿಸುವ ಮತ್ತು ಹೆಚ್ಚುವರಿ 1 ಲಕ್ಷ ಕಿ.ಮೀ. ವಿಸ್ತೀರ್ಣದ ರಸ್ತೆಯನ್ನು ನಿರ್ಮಿಸುವ ಯೋಜನೆಗೆ ಈಗಿನಿಂದಲೇ ಚುರುಕು.
-ಉತ್ತಮ ಆರೋಗ್ಯ ಪ್ರತಿಯೊಬ್ಬನ ಹಕ್ಕು. ಆಗ ಪ್ರತಿ ಹಳ್ಳಿಯಲ್ಲೂ ಡಾಕ್ಟರ್ ಇರುತ್ತಾರೆ. ಹಳ್ಳಿಮನೆಗಳ ಪಕ್ಕದಲ್ಲೇ ಆಸ್ಪತ್ರೆಭಾಗ್ಯ.
-ಆಗ ಪ್ರತಿ 5 ಕಿ.ಮೀ. ವ್ಯಾಪ್ತಿಯಲ್ಲಿ ಪ್ರೌಢಶಾಲೆ. 80,000 ಪ್ರೌಢಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮತ್ತು 75,000 ಜೂನಿಯರ್/ ಮಿಡಲ್ ಶಾಲೆಗಳನ್ನು ಪ್ರೌಢಶಾಲೆಗಳ ಮಟ್ಟಕ್ಕೆ ಏರಿಸುವ ಅಥವಾ ಸೇರಿಸುವ ಅಗತ್ಯವಿದೆ. ಕಲಿಕೆ ಮತ್ತು ಗುಣಮಟ್ಟದ ವಿಷಯದಲ್ಲಿ ಶಿಕ್ಷಣ ವಲಯ ಉತ್ತಮಗೊಳ್ಳುವುದನ್ನು ನಾವು ಖಾತ್ರಿಪಡಿಸಬೇಕು.
-ಗ್ರಾಮಗಳ ಉದಾಟಛಿರಕ್ಕಾಗಿ ಕೃಷಿ ಉತ್ಪಾದನೆಯ ಹೆಚ್ಚಳ. ಬೆಳೆಗೆ ನ್ಯಾಯಯುತ ಬೆಲೆ ಪಕ್ಕಾ. ನೀರಾವರಿ ಪ್ರದೇಶಗಳ ಸಂಖ್ಯೆಯನ್ನು ಹೆಚ್ಚಿಸುವುದು, ಅಸ್ತಿತ್ವದಲ್ಲಿರುವ ನೀರಾವರಿ ವ್ಯವಸ್ಥೆಗಳನ್ನು ಸುಧಾರಣೆ, ಕೃಷಿ ಆಧರಿತ ಉದ್ಯಮಗಳಿಗೆ ಉತ್ತೇಜನ ನೀಡುವುದು ಮತ್ತು ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಮಾಡುವ ಗುರಿ.
- `ನಗರ ಮತ್ತು ಗ್ರಾಮೀಣ' ಎನ್ನುವ ವಿಭಜನೆ ಆಗ ಇಲ್ಲವೇ ಇಲ್ಲ.
-ನಮ್ಮ ಜನಸಂಖ್ಯೆಯಲ್ಲಿ 35 ವರ್ಷಗಳಿಗಿಂತಲೂ ಕಡಿಮೆ ವಯೋಮಾನದವರು 3ನೇ 2ರಷ್ಟಿದ್ದಾರೆ. ಈ ಕಾರಣಕ್ಕೇ ನಮ್ಮ ಯುವ ಜನತೆಗೆ ಸೂಕ್ತ ಉದ್ಯೋಗ ದೊರಕುವಂತಾಗಬೇಕು. ಹೀಗಾಗಲು ಭಾರತವನ್ನು ಜಗತ್ತಿನ ಉತ್ಪಾದನಾ ಕೇಂದ್ರವನ್ನಾಗಿಸಲೇಬೇಕು. `ಸ್ಕಿಲ್ ಇಂಡಿಯಾ' ಮತ್ತು `ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳು ಈ ಗುರಿಯೊಂದಿಗೆ ಮುನ್ನಡೆಯುತ್ತಿವೆ.
-ಭಾರತದಲ್ಲಿ ಉದ್ಯಮಶೀಲ ಮನಸ್ಸುಗಳನ್ನು ಬೆಳೆಸುವ ಮತ್ತು ಹೊಸ ಉದ್ಯಮಗಳನ್ನು ಬೆಂಬಲಿಸುವ ಅಗತ್ಯವಿದೆ. ಆಗ ಮಾತ್ರ ನಮ್ಮ ಯುವಕರು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗದಾತರಾಗಿ ಬದಲಾಗಬಲ್ಲರು.
-ಅಭಿವೃದ್ಧಿಯ ವಿಷಯದಲ್ಲಿ ದೇಶದ ಪೂರ್ವ ಮತ್ತು ಈಶಾನ್ಯ ಪ್ರದೇಶಗಳು ಅನೇಕ ವಲಯಗಳಲ್ಲಿ ಹಿಂದುಳಿದಿವೆ. ಇಡೀ ದೇಶದೊಂದಿಗೆ ಅವು ಹೆಜ್ಜೆಹಾಕುವಂತಾಗಬೇಕು.
-ಭಾರತ ಪ್ರವರ್ಧಮಾನಕ್ಕೆ ಬರಬೇಕೆಂದರೆ, ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಬೆಳೆಯಬೇಕೆಂದರೆ, 2022ರ `ಅಮೃತ ಮಹೋತ್ಸವ'ದ ವೇಳೆಗೆ, ನಾವು ಈ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ಸಾಧಿಸಬೇಕಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ನಮ್ಮ ನಿಜವಾದ ಮತ್ತು ಅರ್ಥಪೂರ್ಣ ಗೌರವ ಇದಾಗಿರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com